ರೈತರು ಹೇಡಿಗಳಲ್ಲ, ಅವರಿಗೆ ಅಗತ್ಯ ಸವಲತ್ತು ನೀಡದವರೇ ನಿಜವಾದ ಹೇಡಿಗಳು: ಕೆಪಿಸಿಸಿ

4 years ago

ಬೆಂಗಳೂರು: ರೈತರು ಹೇಡಿಗಳಲ್ಲ, ಅವರಿಗೆ ಅಗತ್ಯ ಸವಲತ್ತು ನೀಡದವರೇ ನಿಜವಾದ ಹೇಡಿಗಳು ಎಂದು ಕೆಪಿಸಿಸಿ ಹೇಳಿದೆ.

ರೈತರಿಗೆ ಸಮಯಕ್ಕೆ ಸರಿಯಾಗಿ ತಾಡಪಾಲುಗಳನ್ನು ವಿತರಿಸದೆ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ವರದಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ರೈತರ ಆದಾಯವನ್ನು ದುಪ್ಪಟ್ಟು ಮಡುತ್ತೇವೆ, ಕೃಷಿಯನ್ನು ಆಧುನಿಕರಣ ಮಾಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರೈತರ ಯಾವುದೇ ಸಂಕಷ್ಟಗಳಿಗೂ ಸ್ಪಂದಿಸುತ್ತಿಲ್ಲ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಡಬ್ಬಲ್ ಇಂಜಿನ್ ನಂತೆ ಕೆಲಸ ಮಾಡದೇ, ಬೆಳೆಯನ್ನು ಕೊರೆದು ತಿನ್ನುವ ಕೀಟಗಳಂತೆ ಕಾಡುತ್ತಿವೆ ಎಂದಿದೆ.

ಮಳೆ, ಅತಿವೃಷ್ಠಿಯ ಸಮಯದಲ್ಲಿ ರೈತರು ಮಳೆಯಿಂದ ಫಸಲು ರಕ್ಷಣೆ ಮಾಡಿಕೊಳ್ಳಲು ಸರ್ಕಾರ ಸರಿಯಾದ ಸಮಯಕ್ಕೆ ಟಾರ್ಪಲ್ ವಿತರಣೆ ಮಾಡದ ಕಾರಣ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಟಾರ್ಪಲ್ ಗಳಿಗಾಗಿ ರಾಜ್ಯದ ಲಕ್ಷಾಂತರ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಇನ್ನೂ ಟಾರ್ಪಲ್ ಕೊಡಲು ತಯಾರಾಗಿಲ್ಲ ಎಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಹೇಡಿಗಳು ಎಂದು ಕರೆಯುವ ಕೃಷಿ ಸಚಿವ B.C.Patil ಅವರೇ, ರೈತರು ಹೇಡಿಗಳಲ್ಲ, ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ಸವಲತ್ತುಗಳನ್ನು ಕೊಟ್ಟರೆ, ಸಂಕಷ್ಟದಲ್ಲಿರುವ ಅನ್ನದಾತರಿಗೆ ನೆರವಾದರೇ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹಾಗಾಗಿ ರೈತರು ಹೇಡಿಗಳಲ್ಲ, ಅವರಿಗೆ ಅಗತ್ಯ ಸವಲತ್ತು ನೀಡದವರು ನಿಜವಾದ ಹೇಡಿಗಳು ಎಂದಿದೆ.

ವರ್ಷ ಕಳೆಯುತ್ತಾ ಬಂದಿದ್ದರೂ ಟಾರ್ಪಲ್ ಸರಬರಾಜುದಾರರಿಗೆ ಇನ್ನೂ ಅರ್ಜಿಯನ್ನೇ ಆಹ್ವಾನಿಸಿಲ್ಲವೇಕೆ ಸಚಿವರೇ, ಸಿನೆಮಾ ನೋಡುವುದರಲ್ಲಿ ಬ್ಯೂಸಿ ಇದ್ದೀರಾ ಅಥವಾ 40% ಕಮಿಷನ್ ವ್ಯವಹಾರ ಕುದುರಲಿಲ್ಲವೆಂದು ಸುಮ್ಮನಿದ್ದೀರಾ? ಎಂದು ಪ್ರಶ್ನಿಸಿದೆ.

Leave a Reply