ಅಗ್ನಿ ಅನಾಹುತ ತಡೆಗೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳ ಸ್ಥಾಪನೆ: ಜಿ.ಪರಮೇಶ್ವರ್‌

8 months ago

ಬೆಂಗಳೂರು: ಅಗ್ನಿ ಅನಾಹುತಗಳನ್ನು ತಡೆಗಟ್ಟುವ ದೃಷ್ಟಿಯಿಂದ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ನಿಯಮ ಮಾಡಿಕೊಂಡಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ  ಶಾಸಕ  ಡಾ.ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು,  ಬೀದರ್‌  ಜಿಲ್ಲೆಯ ಮನ್ನಾಖೇಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಜಿಲ್ಲಾಧಿಕಾರಿಯವರಲ್ಲಿ  2 ಎಕರೆ ಭೂಮಿ ಮಂಜೂರು ಮಾಡುವಂತೆ ಕೋರಲಾಗಿದೆ. ಜಮೀನು ಕೊಟ್ಟ ತಕ್ಷಣ ಠಾಣೆ ನಿರ್ಮಿಸಲಾಗುವುದು ಎಂದರು.

5 ವರ್ಷದಲ್ಲಿ 15 ಕೋಟಿಯಷ್ಟು ನಷ್ಟವಾಗಿದೆ. ಅಲ್ಲಿ ಠಾಣೆಯ ಅವಶ್ಯಕತೆಯಿದ್ದು, ಜಮೀನು ಮಂಜೂರು ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಖುದ್ದಾಗಿ ಮಾತನಾಡುವುದಾಗಿ ಹೇಳಿದರು.

ಮುಲ್ಕಿ ಕ್ಷೇತ್ರಕ್ಕೆ ಮಂಜರಾಗಿದ್ದ ಅಗ್ನಿಶಾಮಕ ಠಾಣೆ ಬೇರೆ,  ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಕ್ಷೇತ್ರಕ್ಕೆ ಮಂಜೂರಾಗಿರುವ ಅಗ್ನಿಶಾಮಕ ಠಾಣೆ ಬೇರೆ ಎಂದು  ಬೇರೆ ಎಂದರು.

Leave a Reply