ಯಾದಗಿರಿ: ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಜಾತ್ಯತೀತ ತತ್ವಗಳು ಸಂವಿಧಾನದ ಆಶಯವಾಗಿದ್ದು, ಇವು ಪ್ರಜಾಪ್ರಭುತ್ವದ ಜೀವಾಳವಾಗಿವೆ ಎಂದು ಮಾಲಗತ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಣ್ಣ ಸುರಪುರ ಹೇಳಿದರು.
ಸುರಪುರ ತಾಲೂಕಿನ ಮಾಲಗತ್ತಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆ ರಚನಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಭಾರತವು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರವಾಗಿದ್ದು,, ಈ ಮಾದರಿಯ ಆಡಳಿತವನ್ನು ಶಾಲಾ ಹಂತಗಳಲ್ಲಿ ಮಕ್ಕಳಿಗೆ ತಿಳಿಸುವುದು ‘ಶಾಲಾ ಸಂಸತ್ ಚುನಾವಣೆಯ ಉದ್ದೇಶವಾಗಿದೆ’ ಎಂದರು.
ಶಾಲಾ ಸಂಸತ್ ನ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ತರಗತಿಗಳ ಒಟ್ಟು 16 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಉಳಿದ 280 ವಿದ್ಯಾರ್ಥಿ ಮತದಾರರು ಮತ ಚಲಾಯಿಸಿದರು. ಇಲ್ಲಿಯೂ ಸಂಸದೀಯ ಮಾದರಿಯಂತೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ, ಚಿನ್ಹೆಗಳ ಹಂಚಿಕೆ, ಮತ ಎಣಿಕೆ ಕ್ರಮಬದ್ಧವಾಗಿ ನಡೆಸಲಾಯಿತು.
1ನೇ ಮತದಾನ ಕೇಂದ್ರದಲ್ಲಿ ಮತ ಪೆಟ್ಟಿಗೆ ವ್ಯವಸ್ಥೆ ಮಾಡಿ, ಮಕ್ಕಳಿಗೆ ಗುರುತಿನ ಚೀಟಿ ನೀಡುವ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು. ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಪುಷ್ಪಾವತಿ ಚಿಡಬಿ ಕಾರ್ಯನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಮಾಣಿಕಪ್ಪ ಕಲ್ಯಾಣಿ, ಮಾಂತೇಶ ವಸ್ತ್ರದ, ಪೋಲಿಂಗ್ ಏಜೆಂಟರಾಗಿ ಕುಮಾರ ಯಮನಪ್ಪ ಎಚ್.ಕುಮಾರ ಮುತ್ತುರಾಜ್ ಬಡಿಗೇರ, ಮತದಾನ ವೀಕ್ಷಣಾಕಾರರಾಗಿ ಉಮಾಕ್ಷಿ ಅಂಗಡಿ, ಕಾರ್ಯ ನಿರ್ವಹಿಸಿದರು. ಮತ ಎಣಿಕೆ ಅಧಿಕಾರಿ ಅಬ್ಬಾಸಲಿ ಎಂ ಮಕಾಂದರ ಅವರು ವಿಜೇತ ಅಭ್ಯರ್ಥಿಗಳ ಹೆಸರು ಘೋಷಿಸಿದರು.
ಪ್ರಧಾನಮಂತ್ರಿಯಾಗಿ ರೇಣುಕಾ ಮಲ್ಲಣ್ಣ, ಗ್ರಂಥಾಲಯ ಮಂತ್ರಿಯಾಗಿ ಕೃತಿಕಾ ಶಿವಪುತ್ರ, ವಾರ್ತಾ ಪ್ರಾರ್ಥನಾ ಮಂತ್ರಿ- ಅಭಿಷೇಕ ಮಹಾಂತೇಶ, ನೈರ್ಮಲ್ಯ & ನೀರಾವರಿ ಮಂತ್ರಿಯಾಗಿ ಶ್ರೀಶೈಲ ಅರಣುಕುಮಾರ, ವಿಜ್ಞಾನ & ತಂತ್ರಜ್ಞಾನ ಮಂತ್ರಿಯಾಗಿ ವಿಜಯಕುಮಾರ, ಮಹಿಳಾ & ಮಕ್ಕಳ ಕಲ್ಯಾಣ ಮಂತ್ರಿಯಾಗಿ ಭೀಮಣ್ಣ, ಆರೋಗ್ಯ-ಮಧುಭೀಮಣ್ಣ, ಶಿಕ್ಷಣ ಮಂತ್ರಿ-ವಿದ್ಯಾ ಕೃಷ್ಣ ಪ್ಪ ದೊರಿ, ಕೃಷಿ & ತೋಟಗಾರಿಕೆ ಮಂತ್ರಿಯಾಗಿ – ಸಂಗಮೇಶ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.




