ಬ್ಯಾಡಗಿಯಲ್ಲಿ ಲಿಂಗ ಆಧಾರಿತ ಹಿಂಸಾಚಾರ ತಡೆ ಕಾರ್ಯಾಗಾರ
ಹಾವೇರಿ: ಲಿಂಗ ತಾರತಮ್ಯ ನಿವಾರಣೆ ಆದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯವೆಂದು ಸಾತಿ ಸಂಸ್ಥೆ ಜಿಲ್ಲಾ ಸಂಯೋಜಕ ಶ್ರೀಧರ ಪಾಟೀಲ್ ಅಭಿಪ್ರಾಯಪಟ್ಟರು
ಬ್ಯಾಡಗಿಯಲ್ಲಿ ಸಾತಿ ಸಂಸ್ಥೆ ವತಿಯಿಂದ ಬ್ಯಾಡಗಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗ ಆಧಾರಿತ ಹಿಂಸಾಚಾರ ತಡೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಲಿಂಗಾಧಾರಿತ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಮುಂದಾದರೆ ಮಾತ್ರ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಧನ್ಯಕುಮಾರ್ ಮಾತನಾಡಿ, ಸಮಾಜದಲ್ಲಿ ಗಂಡು -ಹೆಣ್ಣು ಎಂಬ ಬೇಧ ಇದ್ದರೆ ಅದರಿಂದ ಹೊರಬಂದು ಸಮಾನವಾದ ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ ಎಂದರು.
ಸಮಾಜದಲ್ಲಿನ ತಾರತಮ್ಯ ಎಷ್ಟರ ಮಟ್ಟಿಗೆ ಆಗಿ ಹೋಗಿದೆ ಎಂದರೆ ಜಾತಿ,ಬಲಿಂಗ ತಾರತಮ್ಯ ಸಮಾಜವನ್ನು ಶೋಷಣೆ ಮಾಡುವ ಮೂಲಕ ಜಾತಿಜಾತಿಗಳ ಮಧ್ಯೆ ಪೃೆಪೋಟಿ ನಡೆಯುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ.ಸುರೇಶ್ ಹೇಳಿದರು.
ತರಬೇತಿ ಕಾರ್ಯಾಗಾರದಲ್ಲಿ 35 ಹಳ್ಳಿ ವಿದ್ಯಾರ್ಥಿಗಳು ಭಾಗವಹಿಸಿದರು. ಸಾತಿ ಸಂಸ್ಥೆಯ ಸಿಬ್ಬಂದಿ ಶಕೀಲಾ ಮತ್ತು ಸಂಘಟಕರು ಹಾಜರಿದ್ದರು. ಹಾವೇರಿ, ದಾವಣಗೆರೆಯಿಂದ ಕಾಲೇಜು ಉಪನ್ಯಾಸಕರು ಭಾಗವಹಿಸಿದ್ದರು.




