ಯುವನಿಧಿ ಯೋಜನೆಯಿಂದ ಯುವಕರಿಗೆ ಆರ್ಥಿಕ ಬಲ: ಟಿ. ಬಸವರಾಜು

2 years ago

ದಾವಣಗೆರೆ: ವಿದ್ಯಾರ್ಥಿಗಳ ಕುರಿತು ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದು ಇದು ಯುವ ಸಮೂಹಕ್ಕೆ ಆರ್ಥಿಕ ಬಲ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಾಮನೂರು ಟಿ. ಬಸವರಾಜು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಇವರಗಳ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಡಿಪ್ಲೋಮ ಹಾಗೂ ಪದವಿ ಪೂರೈಸಿಕೊಂಡು ಉದ್ಯೋಗ ಸಿಗಲಾರದೆ ಸಂದರ್ಶನಗಳಿಗೆ ಹಾಜರಾಗಲು ಹಣಕಾಸಿನ ತೊಂದರೆಗಳ ಕುರಿತಂತೆ ಸರ್ಕಾರ ಗಮನಿಸಿದ್ದು, ಅಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ಪ್ರಸ್ತುತ ಸ್ಫರ್ಧಾತ್ಮಕ ಯುಗದಲ್ಲಿ ಹಲವಾರು ಸ್ಫರ್ಧಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಹಣಕಾಸಿನ ಅವಶ್ಯಕತೆ ತುಂಬಾ ಮುಖ್ಯ, ಹಾಗಾಗಿ ಈ ಯೋಜನೆಯನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ನಂಜನಾಯ್ಕ, ಅನಿಸ್ ಪಾಷ , ಸದಸ್ಯರಾದ ಶಿವಶಂಕರ ಕೈದಾಳೆ, ಡೊಲಿಚಂದ್ರು ಮತ್ತು ಎಸ್.ಎಸ್. ಗಿರೀಶ್ ಹಾಗೂ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕಮಲ ಸೊಪ್ಪಿನ್, ಉಪನ್ಯಾಸಕರಾದ ಪಾರ್ವತಿ ಅಲ್ಲೊಳ್ಳಿ, ಆರ್.ಆರ್. ಶಿವಕುಮಾರ್, ಉಷಾ ಎಂ.ಆರ್, ಡಾ ಕವಿತಾ ಆರ್.ಜಿ.  ಅನ್ವರ್ ಬೆಟಗೇರಿ, ಡಾ ರಣಧೀರ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಲ್ಲಿಕಾರ್ಜುನ.ಎಸ್ ಧನಂಜಯ ಬಿ.ಎನ್. ಮೊದಲಾದವರು ಹಾಜರಿದ್ದರು.

Leave a Reply