ಬೆಂಗಳೂರು: ಮಾದಕ ವಸ್ತು ಸಾಕಾಣಿಕೆ ಮತ್ತು ಸೇವನೆ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಡ್ರಗ್ಸ್ ದಂಧೆ ಕೋರರನ್ನು ಎಡೆಮುರಿ ಕಟ್ಟುತ್ತಿದ್ದಾರೆ. ಡ್ರಗ್ಸ್ ದಂಧೆ ಕೋರರು ತಮ್ಮ ವ್ಯವಹಾರಕ್ಕೆ ಬಳಸುವ ಎಲ್ಲ ಮಾರ್ಗಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ ಇಷ್ಟಾದರೂ ತಮ್ಮ ಚಾಳಿ ಬಿಡದ ದಂಧೆಕೋರರು ಡ್ರಗ್ಸ್ ಸಾಗಾಣಿಕೆ ಮತ್ತು ಮಾರಾಟಕ್ಕೆ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
- ಪಿಣರಾಯಿ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ: ಸಿದ್ದರಾಮಯ್ಯ
- ಬ್ರೆಡ್ ಮೂಲಕ ಮಾದಕ ವಸ್ತು ಸಾಗಣೆ: ಬಂಧನ
- ಕರಾವಳಿ ಪ್ರದೇಶಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸಿ: ಎಚ್.ಡಿ.ಕುಮಾರಸ್ವಾಮಿ
- ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ: ಆರ್ ಅಶೋಕ್
- ಅಧಿಕಾರಿಗಳ ಚಳಿ ಬಿಡಿಸಿದ ಲೋಕಾಯುಕ್ತ ದಾಳಿ
ಇದೀಗ ತಿನ್ನುವ ಬ್ರೆಡ್ ಒಳಗೆ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಆಕೆಯ ಚಾಣಾಕ್ಷತನಕ್ಕೆ ಬೆರಗಾಗಿದ್ದಾರೆ. ತಿನ್ನುವ ಬ್ರೆಡ್ ಅನ್ನು ನೀಟಾಗಿ ಕಟ್ ಮಾಡಿ ಅದರ ಮಧ್ಯದಲ್ಲಿ ಕೊಕೆನ್ ಅನ್ನು ಪ್ಯಾಕ್‌ಮಾಡಿ ಯಾರಿಗೂ ಅನುಮಾನ ಬಾರದಂತೆ ಖಾಸಗಿ ಟ್ರಾವೆಲ್ಸ್ ಬಸ್‌ನಲ್ಲಿ ಮುಂಬೈನಿಂದ ನಗರಕ್ಕೆ ಬಂದಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಕೆ ಬಳಿ ಬ್ರೆಡ್ ಪೊಟ್ಟಣದಲ್ಲಿ ಇರಿಸಲಾಗಿದ್ದ 1.20 ಕೋಟಿ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಓಲಜೈಡ್ ಎಸ್ತರ್ ಇಯಾನುವೊಲುವಾ ಎಂಬ ಮಹಿಳೆ 2024 ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದು ದೆಹಲಿಗೆ ಬಂದಿದ್ದಾರೆ. ಈಕೆ ಯಾವುದೇ ಕಾಲೇಜಿಗೆ ದಾಖಲಾಗದೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾಳೆ.
ಈಕೆ ಮುಂಬೈನ ಗಾಲಾನಗರ, ಅಂಬವಾಡಿ, ನಲ್ಲಾಸೋಪ್ರಾ ಕಡೆಗಳಲ್ಲಿ ವಾಸವಾಗಿದ್ದುಕೊಂಡು, ಮುಂಬೈನಲ್ಲಿದ್ದ ಆಕೆಯ ಸ್ನೇಹಿತನು ನೀಡಿದ ಕೊಕೇನ್ ಅನ್ನು ಪಡೆದುಕೊಂಡು, ಆತನು ಹೇಳಿದ ಸ್ಥಳಗಳಿಗೆ ತಲುಪಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವ ಬೆಂಗಳೂರಿನ ಕೆಲವರಿಗೆ ಕೊಕೇನ್ ಬೇಕಾಗಿದೆ ಎಂದು ಅವರಿಂದ ಆರ್ಡರ್ ಪಡೆದುಕೊಂಡ ಈಕೆಯ ಗೆಳೆಯ ಅದನ್ನು ತಲುಪಿಸಲು ಈಕೆಗೆ ಸೂಚಿಸಿದ್ದಾನೆ. ಅದರಂತೆ ಈಕೆ ಮುಂಬೈನಿಂದ ಬೆಂಗಳೂರಿಗೆ ಬರುವ ಖಾಸಗಿ ಬಸ್ ನಲ್ಲಿ ಆಗಮಿಸಿದ್ದಾಳೆ.
ಕೊಕೇನ್‌ನ್ನು ಬ್ರೆಡ್ ಮಧ್ಯೆ ಕತ್ತರಿಸಿ ಇಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಕವರ್‌ಪ್ಯಾಕ್‌ಮಾಡಿ ಸಾಗಣೆ ಮಾಡುತ್ತಿದ್ದಳು.ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀಸ್ ಟ್ರಸ್ಟ್‌ನಲ್ಲಿ ವಾಸವಾಗಿದ್ದ ಈ ಮಹಿಳೆ ತನ್ನ ಸ್ನೇಹಿತೆ ಮನೆಗೆ ಆಗಾಗ್ಗೆ ಬ್ರೆಡ್‌ನಲ್ಲಿ ಕೊಕೇನ್ ಬಚ್ಚಿಟ್ಟುಕೊಂಡು ಬರುತ್ತಿದ್ದಳು.
ಇತ್ತೇಚೆಗೆ ಸ್ನೇಹಿತೆ ಮನೆಗೆ ಹೋದಾಗ ಬೀಗ ಹಾಕಿತ್ತು. ಬೀಗ ತೆಗೆದು ಒಳಗೆ ಹೋದಾಗ ಆಕೆಯ ಬಳಿ ಕೊಕೇನ್ ಇರುವುದು ಗೊತ್ತಾಗಿದೆ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಈ ವಿದೇಶಿ ಮಹಿಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, 121 ಗ್ರಾಂ ಕೊಕೇನ್ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1.20 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.




