ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ: ಶಾಂತರುದ್ರಮುನಿ ಸ್ವಾಮೀಜಿ

3 years ago

ಕೆಂಭಾವಿ: ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಮಕ್ಕಳಿಗೆ ಅವರದೇ ಆದ ಕೌಶಲ್ಯ ಇರುತ್ತದೆ. ಅವರಿಗಿಷ್ಟವಾದ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ಅವಕಾಶ ಮಾಡಿಕೊಡಿ ಎಂದು ಕರಡಕಲ್ ನಾಲವಾರ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಸ್ವಾಮಿಜಿ ಪಾಲಕರಿಗೆ ಕಿವಿಮಾತು ಹೇಳಿದರು.

ಮಾಲಗತ್ತಿಯಲ್ಲಿ ನಡೆದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಹಾಗೂ ಶಾಲಾ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಮಾತಾಡಿದ ಅವರು, ಮಕ್ಕಳಿಗೆ ಪ್ರೋತ್ಸಾಹ ನೀಡಿ. ಅವರಲ್ಲಿನ ನಾಯಕತ್ವದ ಗುಣ ಗುರುತಿಸಿ. ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಆಗ ನಿಮ್ಮ ಮಕ್ಕಳು ಉತ್ತಮ ಪ್ರಜೆಯಾಗಿ, ಪ್ರಬುದ್ಧ ನಾಯಕರಾಗಿ ಬೆಳೆಯುತ್ತಾರೆ ಎಂದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಅವಿರತ ಶ್ರಮಬೇಕು. ದೂರದರ್ಶನ, ಮೊಬೈಲ್‍ಗಳು ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಂಡಿವೆ. ಅವುಗಳನ್ನು ದಾಟಿ ಯಶಸ್ಸಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಇದರಲ್ಲಿ ಪೋಷಕರ ಜವಾಬ್ದಾರಿಯೂ ಇದೆ ಎಂದರು.

ಸಂಸ್ಥೆಯ ಅಧ್ಯಕ್ಷ ಭೀಮರಾಯ ನಾಟೇಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್ ಡಿಎಂಸಿ‌ ಅಧ್ಯಕ್ಷ ಸಣ್ಣಕ್ಕೆಪ್ಪ ಸಾಹುಕಾರ, ಮೌನೇಶ ಕಳಸರ, ಗ್ರಾ.ಪಂ ಮಾಜಿ ಅಧ್ಯಕ್ಷ ನಿಂಗಣ್ಣ ಎಂ ಸಾಹುಕಾರ, ಗ್ರಾಪಂ ಸದಸ್ಯರಾದ ಆರ್. ಎಸ್ ಮಾಲಗತ್ತಿ , ವೆಂಕೋಬ ದೊರೆ, ಮಹಾಂತೇಶ ಸತ್ಯಂಪೇಟೆ, ನಿಂಗಣ್ಣ ನಾಯ್ಕೊಡಿ, ಶಿಕ್ಷಣ ಪ್ರೇಮಿಗಳಾದ ಶಹಾಬುದ್ದಿನ್ ಗುತ್ತೇದಾರ, ಕಾಶಿಪತಿ ಕಂಬಾರ , ಮಹಾನಿಂಗಪ್ಪ ಮಳ್ಳಿ , ಸಿದ್ರಾಮಪ್ಪ ಕಲ್ಲೂರ, ನರಸಿಂಹ ನಾಯ್ಕೋಡಿ, ಪರಶುರಾಮ ಗಡ್ಡದ,ಹುಸೇನ್ ಪಟೇಲ್ ಸೇರಿದಂತೆ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ಮಲ್ಲು ಸಜ್ಜನ ನಿರೂಪಿಸಿ , ಅಬ್ದುಲ್ ಪಟೇಲ್ ವಂದಿಸಿದರು.

Leave a Reply