ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವ ವೈದ್ಯರು ದೈವಸ್ವರೂಪಿ: ವಿ.ಸೋಮಣ್ಣ

4 years ago

ಬೆಂಗಳೂರು: ದೇಶದ ರಕ್ಷಣೆ ಮಾಡುವ ಸೈನಿಕ, ಅನ್ನ ನೀಡುವ ರೈತ ಮತ್ತು ಆರೋಗ್ಯವಂತ ಸಮಾಜ ಕೊಡುಗೆ ನೀಡುವ ವೈದ್ಯರು ದೈವ ಸ್ವರೂಪಿಗಳು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ವಿ.ಸಿ.ಎನ್. ಡಾಕ್ಟರ್ಸ್ ವೆಲ್ ಫೇರ್ ಆಸೋಸಿಯೇಷನ್ ವತಿಯಿಂದ ವಿಜಯನಗರ ಕಾಸಿಯ ಭವನದಲ್ಲಿ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆಯಲ್ಲಿ ಮಾತಾಡಿದ ಅವರು, ಕೋವಿಡ್-19 ಸಾಂಕ್ರಮಿಕ ರೋಗದಿಂದ ಬಡವರಿಗೆ ಕೊರೋನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪಿದ್ದರು. ಇಂತಹ ಪರಿಸ್ಥಿತಿ ಬಡವರಿಗೆ ಬರಬಾರದು ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿಯಲ್ಲಿ 290 ಹಾಸಿಗೆ ಪಂತರಪಾಳ್ಯದಲ್ಲಿ 200 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಮ್ಲಜನಕ ಘಟಕ ಸಹ ಸ್ಥಾಪಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು  ಮತ್ತು ಕಿಡ್ನಿ ಡಯಾಲಿಸಿಸ್ ಚಿಕಿತ್ಸೆಗೆ 68 ಬೆಡ್ ಗಳ ಆಸ್ಪತ್ರೆ ನಿರ್ಮಿಸಲಾಗಿದೆ. ಜನರ ಜೀವ, ಜೀವನ ರಕ್ಷಣೆಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಡಾ. ಎಸ್.ರಾಜು ಮಾತನಾಡಿ, ವೈದ್ಯರು ಸಹ ಮನುಷ್ಯರು, ಅವರಿಗು ಸಹ ಎಲ್ಲರಂತೆ ಕುಟುಂಬವಿದೆ. ರೋಗಿಗಳ ಆರೈಕೆಗೆ ಕುಟುಂಬದ ಕಡೆ ಗಮನಹರಿಸದೆ ಕೆಲಸ ನಿರ್ವಹಿಸುತ್ತಾರೆ. ವೈದ್ಯರು ಸಹ ಮಾನಸಿಕ, ದೈಹಿಕವಾಗಿ ಇರಲು ಕ್ರೀಡಾಕೂಟ, ಯೋಗ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಡಾ.ಅಂಜನಪ್ಪ, ಪ್ರೊ.ಪುತ್ತೂರಾಯ, ಚಲನಚಿತ್ರ ನಟ ಶರಣ್, ಆರೋಗ್ಯಧಿಕಾರಿ ಡಾ.ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು. ಕೊರೋನ ವಾರಿಯರ್ಸ್ ಗಳಿಗೆ, ವೈದ್ಯರಗೆ ಸನ್ಮಾನಿಸಲಾಯಿತು.

Leave a Reply