ಧಾರವಾಡ: ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಘೋಷಿಸಿ, ದಿನಾಂಕಗಳನ್ನು ಪ್ರಕಟಿಸಿದೆ. ಅದರಂತೆ ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ಜರುಗಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಏಪ್ರಿಲ್ 12ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ, ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಏ.12 ರಂದು ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಏ.19 ಕೊನೆಯ ದಿನವಾಗಿದೆ. ಏ.20 ರಂದು ನಾಮಪತ್ರ ಪರಿಶೀಲನೆ ಮತ್ತು ನಾಮಪತ್ರ ಹಿಂಪಡೆಯಲು ಏ.22 ಅಂತಿಮ ದಿನವಾಗಿರುತ್ತದೆ. ಮೇ.7ರಂದು ಮತದಾನ ಜರುಗಲಿದೆ. ಮತ್ತು ಜೂನ 4 ರಂದು ಮತ ಏಣಿಕೆ ಜರುಗಿ, ಜೂ.6 ಕ್ಕೆ ಚುನಾವಣಾ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದರು.
ಮತದಾರರು: 11-ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲೆಯ 7 ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ಸೇರಿ ಒಟ್ಟು 8 ವಿಧಾನಸಭಾ ಮತಕ್ಷೇತ್ರಗಳು ಬರುತ್ತವೆ. 8,99,246 ಪುರುಷ, 8,92,043 ಮಹಿಳಾ ಹಾಗೂ 97 ಇತರೆ ಸೇರಿದಂತೆ ಒಟ್ಟು 17,91,386 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದರು.
ಮತಗಟ್ಟೆಗಳು: 11-ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾನಕ್ಕಾಗಿ ಧಾರವಾಡ ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ 1652 ಮತ್ತು ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 241 ಮತಗಟ್ಟೆಗಳು ಸೇರಿದಂತೆ ಒಟ್ಟು 1893 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಪೂರ್ವ ಮತ್ತು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ವ್ಯಾಪ್ತಿಯಲ್ಲಿ ತಲಾ ಎರಡು ಮತ್ತು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 4 ಸೇರಿ ಒಟ್ಟು 8 ಏಕ್ಸಿಲರಿ ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಎಂದರು.
ಯುವ, ವಿಕಲಚೇತನ, ವಯೋವೃದ್ಧ ಮತದಾರರು: 11- ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ಟೋಬರ 27, 2023 ಕ್ಕೆ ಪ್ರಕಟಿಸಿರುವ ಕರಡು ಮತದಾರ ಪಟ್ಟಿಯಲ್ಲಿ 20,629 ಯುವ ಮತದಾರರಿದ್ದರು. ಮತದಾರ ಯಾದಿಯ ವಿಶೇಷ ಪರಿಷ್ಕರಣೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡು ಜನವರಿ 22,2024 ಕ್ಕೆ ಪ್ರಕಟಿಸಿರುವ ಅಂತಿಮ ಮತದಾರಪಟ್ಟಿಯಲ್ಲಿ ಪ್ರಸ್ತುತ 31,412 ಯುವ ಮತದಾರರಿದ್ದಾರೆ. ಇದರಲ್ಲಿ ಮತದಾರ ವಿಶೇಷ ಪರಿಷ್ಕರಣೆ 2024 ರಲ್ಲಿ ಹೊಸದಾಗಿ 10,783 ಯುವ ಮತದಾರರು ಸೆರ್ಪಡೆ ಗೊಂಡಿದ್ದಾರೆ. 20,474 ವಿಕಲಚೇತನ ಮತದಾರರು ಹಾಗೂ 85 ವಯಸ್ಸಿನ ಮತ್ತು 85 ವಯಸ್ಸು ದಾಟಿರುವ 15,833 ಮತದಾರರು ನಮ್ಮ ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಾರೆ ಎಂದರು.
2014, 2019 ರ ಲೋಕಸಭಾ ಹಾಗೂ 2023 ರ ವಿಧಾನಸಭಾ ಚುನಾವಣೆಯ ಶೇಕಡಾವಾರು ಮತದಾನ ವಿವರ: ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆ 2014ರಲ್ಲಿ ಶೇ. 65.99 ರಷ್ಟು ಮತದಾನವಾಗಿತ್ತು. ಮತ್ತು 2019ರ ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 70.29 ರಷ್ಟು ಮತದಾನವಾಗಿತ್ತು. ಹಾಗೂ 2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 73.45 ರಷ್ಟು ಮತದಾನವಾಗಿದೆ ಎಂದರು.
ಧಾರವಾಡ ಲೋಕಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು: ಜಿಲ್ಲಾ ಚುನಾವಣಾ ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾಗಿದ್ದಾರೆ. ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣಾ ಮತಕ್ಷೇತ್ರದ ಕಚೇರಿಯ ಸಹಾಯಕ ಚುನಾವಣಾಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ನವಲಗುಂದ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ದೇವರಾಜ ಆರ್., ಕುಂದಗೋಳ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ, ಧಾರವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಧಾರವಾಡ ಉಪ ವಿಭಾಗಾಧಿಕಾರಿ ಶಾಲಂ ಹುಸೇನ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ವಿನೋದ ಹೆಗ್ಗಳಗಿ, ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ. ಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಡಾ. ಸಿದ್ದು ಹುಳ್ಳೊಳ್ಳಿ, ಹಾಗೂ ಶಿಗ್ಗಾಂವಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಸವಣೂರು ಉಪ ವಿಭಾಗಾಧಿಕಾರಿ ಮಹಮ್ಮದ್ ಕೈಸರ್ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಶೀಘ್ರ ಅರ್ಜಿ ವಿಲೇವಾರಿಗೆ ಸುವಿಧಾ: ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ವಾಹನ ಪರವಾನಿಗೆ ಇತ್ಯಾದಿಗಳಿಗಾಗಿ ENCORE/SUVIDHA ತಂತ್ರಾಂಶದ ಮೂಲಕ ಸ್ವೀಕೃತವಾಗುವ ಅರ್ಜಿಗಳನ್ನು Single Window System ಮೂಲಕ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ಪರವಾನಿಗೆ ಪಡೆಯಬೇಕು. ಸುವಿಧಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ, ನಿಗಧಿತ ಅವಧಿಯಲ್ಲಿ ಪರವಾನಿಗೆ ಪಡೆಯಬಹುದು ಎಂದರು.
ಮಾದರಿ ನೀತಿ ಸಂಹಿತೆಯಡಿ ತಕ್ಷಣದ ಕ್ರಮಗಳು: ಜಾಹಿರಾತು ಫಲಕ ತೆರವು: ವಿವಿಧ ಯೋಜನೆಗಳಡಿ ಅಳವಡಿಸಿರುವ ಪ್ರಚಾರ ಫಲಕಗಳನ್ನು ತಕ್ಷಣದಿಂದ ನಿಗಧಿತ ಅವಧಿಯಲ್ಲಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಮತ್ತು ಕಚೇರಿ ವೇಬ್ ಸೈಟ್ ಗಳಲ್ಲಿನ ಎಲ್ಲ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು,ರಾಜಕೀಯ ಕಾರ್ಯಚಟುವಟಿಕೆಗಳನ್ನು ತೋರಿಸುವಂತ ಜಾಹೀರಾತು,ಮಾಹಿತಿಯನ್ನು ತೆಗೆದು ಹಾಕಲು ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಸರ್ಕಾರಿ, ಖಾಸಗಿ ಹಾಗೂ ಸಾರ್ವಜನಿಕ ಸ್ವತ್ತುಗಳ ಮೇಲೆ ರಾಜಕೀಯ ಪಕ್ಷಗಳ ಪ್ರಚಾರ ಕುರಿತಾದ ಪೋಸ್ಟರ್ ಗಳನ್ನು ತಕ್ಷಣವೇ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸ್ಥಳಿಯ ಸಂಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಎಲ್ಲ ನಾಮನಿರ್ದೇಶಿತ ಹಾಗೂ ರಾಜಕೀಯ ವ್ಯಕ್ತಿಗಳಿಗೆ ನೀಡಲಾಗಿರುವ ವಾಹನಗಳನ್ನು ತಕ್ಷಣ ಹಿಂಪಡೆಯಲು ಕ್ರಮವಹಿಸಲಾಗಿದೆ ಎಂದರು.
ದೂರುಗಳ ನಿರ್ವಹಣೆಗೆ 1950 ಸಹಾಯವಾಣಿ ಮತ್ತು ಸಿ-ವಿಜಿಲ್ ಆಪ್: ಚುನಾವಣಾ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ಸ್ವೀಕೃತವಾಗುವ ದೂರುಗಳ ನಿರ್ವಹಣೆಗೆ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ದೂರು ನಿರ್ವಹಣಾ ಕೇಂದ್ರಗಳನ್ಬು ತೆರೆಯಲಾಗಿದೆ. ಮತ್ತು ಚುನಾವಣಾ ಸಹಾಯವಾಣಿ 1950 ಮತ್ತು ಸಿ-ವಿಜಿಲ್ ಆಪ್ ದಲ್ಲಿ ಬಂದ ದೂರುಗಳನ್ನು ನಿಗಧಿತ ಸಮಯದಲ್ಲಿ ನಿರ್ವಹಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ತರಬೇತಿ ನೀಡಿ, ಸಿದ್ದಗೊಳಿಸಲಾಗಿದೆ ಎಂದರು.
ಕೇಂದ್ರೀಕೃತ ಕಂಟ್ರೋಲ್ ರೂಂ: ಚುನಾವಣಾ ಕಾರ್ಯಗಳನ್ನು ನಿಯಮಾನುಸಾರ ಪರಿಣಾಮಕಾರಿಯಾಗಿ ಜರುಗಿಸಲು ಎಲ್ಲ ರೀತಿಯ ಚುನಾವಣಾ ತಂಡಗಳನ್ನು ಸಂಪರ್ಕಿಸಿ, ಸಮನ್ವಯ ಸಾಧಿಸಲು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ನೊಡಲ್ ಅಧಿಕಾರಿಗಳು ಈ ಕೇಂದ್ರದಲ್ಲಿದ್ದು, ತಂಡಗಳ ಕಾರ್ಯನಿರ್ವಹಣೆಯನ್ನು ಪರಿಆಣಾಮಕಾರಿಗೊಳಿಸಲು ಸಲಹೆ, ಸೂಚನೆ ನೀಡಲಿದ್ದಾರೆ ಮತ್ತು ನಿಗಾವಹಿಸಲಿದ್ದಾರೆ ಎಂದರು.
ವಿದ್ಯುನ್ಮಾನ ಮತಯಂತ್ರಗಳು: ಧಾರವಾಡ ಲೋಕಸಭಾ ಚುನಾವಣೆಗಾಗಿ ಒಟ್ಟು 2295 ಸಿಯು, 3,284 ಬಿ.ಯು, 2410 ವಿ.ವಿ.ಪ್ಯಾಟ್ ಹೊಂದಿರುವ ವಿದ್ಯುನ್ಮಾನ ಮತ ಯಂತ್ರಗಳನ್ನು ಸಿದ್ದಗೊಳಿಸಲಾಗಿದೆ ಎಂದರು.
ಪಿ.ಆರ್.ಒ, ಎಪಿಆರ್ ಒ, ಪಿಒ: ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1982 ಪಿ.ಆರ್ ಒ, 1982 ಎಪಿಆರ್ ಒ ಮತ್ತು 4163 ಜನ ಪಿಓಗಳನ್ನು ಹಾಗೂ 800 ಜನ ಮೈಕ್ರೋ ಆಬ್ಸರ್ವರ್, ಅಧಿಕಾರಿ, ದಿಬ್ಬಂದಿಗಳನ್ನು ನೇಮಿಸಲು ಯೋಜಿಸಲಾಗಿದೆ ಎಂದರು.
ಚುನಾವಣಾ ಅಕ್ರಮ ತಡೆಯಲು ಮತ್ತು ತೀವ್ರ ನಿಗಾ ವಹಿಸಲು ಚೆಕ್ ಪೋಸ್ಟ್ ಗಳ ಸ್ಥಾಪನೆ: ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣೆ ಮುಕ್ತಾಯದವರೆಗೆ ಜಿಲ್ಲಾಗಡಿಯಲ್ಲಿ ಚೆಕ್ ಪೆÇಸ್ಟ್ ಗಳನ್ಬು ತೆರೆಯಲಾಗಿದೆ. ಚುನಾವಣಾ ಅಕ್ರಮಗಳನ್ಬು ತಡೆಗಟ್ಟಲು ಮತ್ತು ತೀವ್ರ ನಿಗಾವಹಿಸಲು ಚೆಕ್ ಪೋಸ್ಟ್ ತೆರೆಯಲಾಗಿದ್ದು, ಪಾಳೆಯಲ್ಲಿ ಕರ್ತವ್ಯ ನಿರ್ವಹಿಸಲು ಪೆÇಲೀಸ್, ಜಂದಾಯ, ಅರಣ್ಯ, ವಾಣಿಜ್ಯ ಮತ್ತು ಇತರ ಇಲಾಖೆಗಳ ಅಧಿಕಾರಿ ಸಿಬ್ವಂದಿಗಳನ್ನು ನೇಮಿಸಲಾಗಿದೆ ಎಂದರು.
ಮುಖ್ಯವಾಗಿ ನವಲಗುಂದ ತಾಲೂಕು ವ್ಯಾಪ್ತಿಯ ರೋಣ ರಸ್ತೆಯ ರೋಣ ಕ್ರಾಸ್, ಅಣ್ಣಿಗೇರಿ – ಗದಗ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಹಾಗೂ ಹುಬ್ಬಳ್ಳಿ – ಅಣ್ಣಿಗೇರಿ ರಸ್ತೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ ಎಂದರು.
ಕುಂದಗೋಳ ತಾಲೂಕು ವ್ಯಾಪ್ತಿಯ ಕುಂದಗೋಳ – ಲಕ್ಷ್ಮೇಶ್ವರ ರಸ್ತೆಯ ಗುಡಗೇರಿ ಕ್ರಾಸ್, ಪೂನಾ – ಬೆಂಗಳೂರು ರಸ್ತೆಯ ತಡಸ ಕ್ರಾಸ್ ದಲ್ಲಿ ಮತ್ತು ಹುಬ್ಬಳ್ಳಿ- ಕುಂದಗೋಳ ರಸ್ತೆಯ ಶೇರೆವಾಡ ದಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ ಎಂದರು.
ಧಾರವಾಡ ಮತಕ್ಷೇತ್ರ ವ್ಯಾಪ್ತಿಯ ಉಪ್ಪಿನಬೆಟಗೇರಿ ಕ್ರಾಸ್, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹರೋಬೇಳವಡಿ, ಧಾರವಾಡ – ಸವದತ್ತಿ ರಸ್ತೆ, ಹೆಬ್ಬಳ್ಳಿ ಅಗಸಿ , ನವಲಗುಂದ ರಸ್ತೆ, ತೆಗೂರ್, ಎನ್. ಎಚ್ -4 ,ಬೆಳಗಾವಿ – ಧಾರವಾಡ ರಸ್ತೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ ಎಂದರು.
ಹುಬ್ಬಳ್ಳಿ – ಧಾರವಾಡ ಪಶ್ಚಿಮ ಮತಕ್ಷೇತ್ರ ವ್ಯಾಪ್ತಿಯ ಗಬ್ಬೂರು ಕ್ರಾಸ್, ಕಾರವಾರ ರಸ್ತೆ, ಸೋನಿಯಾ ಗಾಂಧಿ ನಗರ – ಕುಂದಗೋಳ ರಸ್ತೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಹುಬ್ಬಳ್ಳಿ – ಧಾರವಾಡ ಕೇಂದ್ರ ಮತಕ್ಷೇತ್ರ ವ್ಯಾಪ್ತಿಯ ಗದಗ ರಸ್ತೆ, ನವಲಗುಂದ ರಸ್ತೆ, ಸುಳ್ಳದ ಕ್ರಾಸ್ ನಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಹುಬ್ಬಳ್ಳಿ – ಧಾರವಾಡ ಪೂರ್ವ ಮತಕ್ಷೇತ್ರ ವ್ಯಾಪ್ತಿಯ ಗೋಕುಲ ಗ್ರಾಮದ ಕ್ರಾಸ್, ಕಲಘಟಗಿ ರಸ್ತೆ, ಗೋವಾ ರಸ್ತೆ ಹಾಗೂ ಹಳಿಯಾಳ ರಸ್ತೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಕಲಘಟಗಿ ತಾಲೂಕು ಮತಕ್ಷೇತ್ರ ವ್ಯಾಪ್ತಿಯ ಕಲಘಟಗಿ – ಕಾರವಾರ ರಸ್ತೆಯ ಸಂಗಟಿಕೊಪ್ಪ ರಸ್ತೆ, ಅಳ್ನಾವರ, ಧಾರವಾಡ – ಗೋವಾ ರಸ್ತೆಯ ಕಡಬಗಟ್ಟಿ ಕ್ರಾಸ್ ಹಾಗೂ ತೊಬಕದಹೊನ್ನಳ್ಳಿ, ಕಲಘಟಗಿ – ತಡಸ ರಸ್ತೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ ಎಂದರು.
ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 24 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಗಸ್ತು, ನಿರಂತರ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಚುನಾವಣಾ ಕಾರ್ಯಗಳನ್ನು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ನಿಯಮಗಳ ಅನುಸಾರ ಜರುಗಿಸಲು 141 ಸೆಕ್ಟರ್ ಆಪೀಸರ್ (ಎಸ್ ಓ)ಟೀಮ್, 48 ಎಫ್.ಎಸ್.ಟಿ ಟೀಮ್, 120 ಎಸ್.ಎಸ್.ಟಿ.ಟೀಮ್, 14 ವಿಎಸ್ ಟಿ ಟೀಮ್, 21 ವಿವಿಟಿ ಟೀಮ್, 10 ಎಇಓ ಟೀಮ್ ಮತ್ತು 11 ಅಕೌಂಟ್ ಟೀಮ್ ಗಳನ್ನು ರಚಿಸಿ, ಕಾರ್ಯ ಹಂಚಿಕೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಹಾನಗರ ಪೋಲೀಸ ಆಯುಕ್ತೆ ರೇಣುಕಾ ಸುಕುಮಾರ, ಜಿ.ಪಂ. ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೋಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್, ಎನ್.ಡಬ್ಲ್ಯೂ.ಕೆ.ಎಸ್.ರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಉಪ ಪೋಲೀಸ ಆಯುಕ್ತ ರಾಜೀವ ಎಂ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಇದ್ದರು.




