ತಂತ್ರಜ್ಞಾನ ಶಿಕ್ಷಣದಿಂದ ಮಾತ್ರ ಅಭಿವೃದ್ದಿ ಸಾಧ್ಯ

5 years ago

ಬೆಂಗಳೂರು: ಪಿ.ಯು.ಸಿ. ಮತ್ತು ಪದವಿ ಶಿಕ್ಷಣ ಪಡೆದವರು ಉದ್ಯೋಗ ಹಾಗೂ ಉನ್ನತ ವ್ಯಾಸಂಗ ಮಾಡಲು ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡಿದರೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನು ಹೆಚ್ಚು ಸಾಧನೆ ಮಾಡಬಹುದು ಎಮ್.ಶಿವರಾಜು ಹೇಳಿದರು.

ಸ್ವಂತ ಉದ್ಯೋಗ ಮತ್ತು ಉದ್ಯೋಗ ಮಾಡಲು ಅವರಲ್ಲಿ ಇರುವ ಬುದ್ದಿ ಶಕ್ತಿಗ್ರಹಸಿ ಅವರನ್ನು ಸೃಧೃಡಗೊಳಿಸುವುದು, ತರಬೇತಿ ನೀಡುವ ಮಹಾತ್ವಕಾಂಕ್ಷೆ ಇಟ್ಟುಕೊಂಡಿರುವ ಮಯೂರ್ ಅಕಾಡೆಮಿ ಯುವಕ ಮಿತ್ರರಿಗೆ ದಾರಿದೀಪವಾಗಿದೆ ಎಂದರು.

ಇದೇ ವೇಳೆ ಪ್ರತಿಕ್ರಿಯಿಸಿದ ಆರ್.ವಿ.ಯುವರಾಜ್, ದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ಗಳ ಅವಶ್ಯಕತೆ ಇದೆ ಮತ್ತು ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನ, ಸಾಫ್ಟ್ ವೇರ್ ಉದ್ಯಮದಲ್ಲಿ ವಿಶ್ವದ ಗಮನ ಸೆಳದಿದೆ. ಯುವಕ, ಯುವತಿಯರಿಗೆ ಮಾರ್ಗದರ್ಶನ, ತರಬೇತಿ ನೀಡಿದರೆ ಉದ್ಯೋಗ ಅವಕಾಶ ದೊರುಕುತ್ತದೆ ಎಂದರು.

ಸುಭಾಶ್ ನಗರ ಬಿ.ಬಿ.ಎಂ.ಪಿ. ವಾಣಿಜ್ಯ ಸಂಕೀರ್ಣದಲ್ಲಿ ಯುವಕ, ಯುವತಿಯರು ಉದ್ಯೋಗ, ಶಿಕ್ಷಣದಲ್ಲಿ ಸರಿಯಾದ ಮಾರ್ಗದಲ್ಲಿ ಸಾಗಲು ತರಬೇತಿ ಸಂಸ್ಥೆ ಆರಂಭಿಸಲಾಗಿದೆ.

ಮಯೂರ್ ಅಕಾಡೆಮಿ ಆಫ್ ಲರ್ನಿಂಗ್ ಅಂಡ್ ಕೆರಿಯರ್ ಸೆಂಟರ್  ಉದ್ಘಾಟನೆಯನ್ನು ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಆರ್.ವಿ.ಯುವರಾಜ್, ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಭರತ್ ಕುಮಾರ್ ನೆರವೇರಿಸಿದರು.  ರಾಜಕೀಯ ಮುಖಂಡರು, ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು.

Leave a Reply