ಬೆಂಗಳೂರು: ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಬೆಂಬಲಿಗರಿಂದ ತಮಗೆ ಪ್ರಾಣ ಬೆದರಿಕೆ ಇದ್ದು ಸೂಕ್ತ ರಕ್ಷಣೆ ನೀಡಿ ಎಂದು ಅರುಣಾ ರೆಡ್ಡಿ ಕುಟುಂಬ ಮನವಿ ಮಾಡಿತು.
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾಜಿ ಶಾಸಕ ಎನ್ ಸೂರ್ಯನಾರಾಯಣ ರೆಡ್ಡಿ, ಎನ್. ಭರತ್ ರೆಡ್ಡಿ, ಎನ್ ಶರತ್ ರೆಡ್ಡಿ ಮತ್ತು ಅವರ ಕುಟುಂಬದವರು ಎನ್ ಪೂರ್ಣಿಮಾ, ಅರುಣಾ ರೆಡ್ಡಿ, ಸಿ ಸುನೀಲ್ ಕುಮಾರ್, ಎನ್ ಕವಿತಾ ಮತ್ತು ಎನ್. ಶಾರದಾ ಅವರ ಕುಟುಂಬದವರು ಫೋರ್ಜರಿ, ಮೋಸ ಮಾಡಿದ್ದು ಈ ಕುರಿತು ವಕೀಲರಾದ ಆರ್. ಪಾಂಡು, ಟಿ ಹನುಮರೆಡ್ಡಿ ಮತ್ತು ನೀರಜ್ ರಾಜೀವ್ ಶಿವಮ್ ಅವರು ಪತ್ರಿಕಾಗೋಷ್ಠಿ ನಡೆಸಿ, ದಾಖಲೆ ಬಿಡುಗಡೆಗೊಳಿಸಿದರು.
ಇದೆ ವೇಳೆ ಮಾತನಾಡಿದ ಎನ್.ಅರುಣಾರೆಡ್ಡಿ, ನಾನು ಬಳ್ಳಾರಿ ನಿವಾಸಿಗಳಾಗಿದ್ದು ನನ್ನ ತಂದೆ ರಾಘವೇಂದ್ರ ಎಂಟರ್ ಪ್ರೈಸಸ್ ಮಾಲೀಕರು, ಮಾಜಿ ಶಾಸಕರಾದ ಸೂರ್ಯನಾರಾಯಣರೆಡ್ಡಿರವರ ಜೊತೆಯಲ್ಲಿ ಪಾಲುದಾರರಾಗಿ ಸಂಸ್ಥೆ ನಡೆಸುತ್ತಿದ್ದರು ಎಂದರು.
ನಮ್ಮ ತಂದೆಯವರು ಅಕಾಲಿಕವಾಗಿ ಮರಣ ಹೊಂದಿದರು ಮತ್ತು ಪಾಲುದಾರರಾಗಿದ್ದ ನಮ್ಮ ತಂದೆಯವರು ಎಷ್ಟು ಹಣ ಹೂಡಿಕೆ ಮತ್ತು ಜಮೀನು ಹೊಂದಿದ್ದರು ಎಂದು ನಮಗೆ ತಿಳಿದಿರಲಿಲ್ಲ. ಆದರೆ ಆದಾಯ ತೆರಿಗೆ ಇಲಾಖೆ ವತಿಯಿಂದ ನಮ್ಮ ಆಸ್ತಿ ವಿವರದ ಬಗ್ಗೆ ತಿಳಿಯುತ್ತದೆ. ನಮ್ಮ ತಂದೆಯವರಿಗೆ ಸೇರಿದ್ದ ದಾಖಲೆಗಳನ್ನು ಪೋರ್ಜರಿ ಮಾಡಿದ್ದಾರೆ. ನ್ಯಾಯ ಕೇಳಲು ಹೋದರೆ ನಮ್ಮ ಮೇಲೆ ಪ್ರಾಣದ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.




