ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿದ ಸಿ.ಟಿ.ರವಿ: ಸಿದ್ದು ವಿರುದ್ಧ ಸುಳ್ಳು ಹೇಳಿದವರಿಗೆ ಜಾಲತಾಣಗಳಲ್ಲಿ ಶಾಸ್ತಿ

3 years ago

ಭಟ್ಕಳ: ಫೆ.19ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ಮನೆಯಲ್ಲಿ ಮಾಂಸದೂಟ ಸೇವಿಸಿ ಸಂಜೆ ಪಟ್ಟಣದಲ್ಲಿ ಪುನರ್ ಸ್ಥಾಪಿಸಿದ ರಾಜಾಂಗಣ ನಾಗಬನಕ್ಕೆ ಭೇಟಿ ನೀಡಿ ನಾಗದೇವರ ದರ್ಶನ ಪಡೆದ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸದೂಟ ಮಾಡಿ ಧರ್ಮಸ್ಥಳ ದರ್ಶನ ಮಾಡಿರುವ ದೃಶ್ಯ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಈಡಾಗಿತ್ತು. ಸಿದ್ದರಾಮಯ್ಯ ಆಸ್ತಿಕರ ಟೇಕೆಗೆ ಗುರಿಯಾಗಿದ್ದರು. ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ನಾಯಕರು ಸಿದ್ದರಾಮಯ್ಯ ಅವರನ್ನು ಇದೇ ವಿಚಾರವಾಗಿ ವ್ಯಾಪಕವಾಗಿ ಟೀಕಿಸಿದ್ದರು.

ಈಗ ಅಂತದ್ದೇ ಸ್ಥಿತಿಗೆ ಸಿ.ಟಿ.ರವಿ ಒಳಗಾಗಿದ್ದಾರೆ. ಶಿರಾಲಿಯಲ್ಲಿರುವ ಶಾಸಕ ಸುನೀಲ ನಾಯ್ಕರ ಮನೆಯಲ್ಲಿ ಮಾಂಸದೂಟ ಮಾಡಿ ಸಂಜೆ ರಾಜಾಂಗಣ ನಾಗಬನ ದರ್ಶನ ಮಾಡಿರುವು ಸ್ಥಳೀಯ ಆಸ್ತಿಕರು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿರದೇ ಇದ್ದರೂ ಕೂಡಾ ಅದನ್ನೇ ತಿರುಚಿ ಅನಗತ್ಯವಾಗಿ ದೊಡ್ಡ ವಿವಾದ ಮಾಡಿದ್ದ ಸಿ ಟಿ ರವಿ ಅವರಿಗೆ ಮಾಡಿದ ಪಾಪ ಬೆನ್ನು ಹತ್ತಿದೆ ಎಂದಿದ್ದಾರೆ.

ವೈಚಾರಿಕತೆ ಮತ್ತು ನೈಜ ಧರ್ಮದ ಕಲ್ಪನೆಗೆ ಬೆಲೆ ಕೊಡದ ಬಿಜೆಪಿಗರು ಇಂದು ಸಿ ಟಿ ರವಿ ಮಾಡಿದ ಕೆಲಸಕ್ಕೆ ಬೆಲೆ ತೆರುವ ಕಾಲ ಬಂದಿದೆ. ಮಾಡಿದ ಪಾಪ ಬೆನ್ನಿಗೆ ಮೂಲ ಎಂದು ಹಳ್ಳಿಗರು ಅಷ್ಟಿಲ್ಲದೇ ಹೇಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ದ್ವೇಷ ಕಾರುವುದನ್ನೇ ಧರ್ಮ ಎಂದುಕೊಂಡಿರುವ ಬಾಯಿಹರುಕ @CTRavi_BJP
ಅವರು ದೇವಸ್ಥಾನಕ್ಕೆ ಹೋಗುವ ಮುನ್ನ ತಿಂದ ಮಾಂಸದ ಮೆನು ಏನು @BJP4Karnataka?

ಫಿಶ್ ಫ್ರೈ? ಚಿಕನ್ ಕಬಾಬ್? ಲೆಗ್ ಪೀಸ್? ಮಟನ್ ಕುರ್ಮಾ? ಚಿಕನ್ ಟಿಕ್ಕಾ? ನಾಟಿಕೋಳಿ ಸಾಂಬಾರ್? ಫೋರ್ಕ್ ಫ್ರೈ? ಬೀಫ್ ಬಿರಿಯಾನಿ? ಸಿಟಿ ರವಿ ತಟ್ಟೆಯನ್ನು ಬಿಜೆಪಿಗರು ಹಿಣುಕಿ ನೋಡಿಲ್ಲವೇ? ಎಂದು ಪ್ರಶ್ನಿಸಿದೆ.

Leave a Reply