ಮಂಗಳೂರು: CPIM ಮಂಜೇಶ್ವರ ಏರಿಯಾ ಸಮ್ಮೇಳನದ ಅಂಗವಾಗಿ CPIM ಕೊಡ್ಲಮೊಗರು ಲೋಕಲ್ ಸಮಿತಿ ನೇತೃತ್ವದಲ್ಲಿ ದೈಗೋಳಿಯ ಶ್ರೀ ಕ್ರಷ್ಣ ಕ್ರಪಾ ಹಾಲ್ ನಲ್ಲಿ ಮಕ್ಕಳ ಆಟಕೂಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಿರ್ಮಲ್ ಕುಮಾರ್ ನೆರವೇರಿಸಿ ಮಾತನಾಡಿ, ಮಕ್ಕಳ ಆಟಕೂಟದಂತಹ ಶಿಬಿರಗಳು ಹೆಚ್ಚೆಚ್ಚು ನಡೆಯುವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಾಧ್ಯವಾಗಬೇಕು ಹಾಗೂ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಹೆಮ್ಮರವಾಗಿ ಬೆಳೆಸಲು ಇಂತಹ ಶಿಬಿರಗಳು ನಾಂದಿ ಹಾಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಬಾಲಸಂಘದ ಕೊಡ್ಲಮೊಗರು ವಿಲ್ಲೇಜ್ ಸಮಿತಿ ಅಧ್ಯಕ್ಷರಾದ ನಿಕೇತ್ ರವರು ವಹಿಸಿದ್ದರು.
ಇಡೀ ದಿನ ಜರುಗಿದ ಮಕ್ಕಳ ಆಟಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವತಃ ನಿರ್ಮಲ್ ಕುಮಾರ್ ಮಾಸ್ಟರ್ ಹಾಗೂ ಮಂಗಳೂರಿನ ಖ್ಯಾತ ಕಲಾವಿದರೂ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯ ವಿಸ್ಮಯ ಜಾದೂ ತಂಡದ ಸದಸ್ಯ ಪ್ರವೀಣ್ ಬಜಾಲ್ ತಮ್ಮ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ CPIM ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ.ಕುಂಞರಾಮನ್, ಬಾಲಸಂಘದ ಕಾಸರಗೋಡು ಜಿಲ್ಲಾ ಮುಖಂಡರಾದ ಭಾರತಿ ಎಸ್, CPIM ಸಮ್ಮೇಳನದ ಸ್ವಾಗತ ಸಮಿತಿಯ ಮುಖಂಡರಾದ ಕೆ.ಆರ್.ಜಯಾನಂದ, ಕನ್ವಿನರ್ ಡಿ.ಬೂಬ, ರವೀಂದ್ರ ಎಂ, ಬಾಲಸಂಘದ ಮಂಜೇಶ್ವರ ಏರಿಯಾ ನಾಯಕರಾದ ಪ್ರಶಾಂತ್ ಕನಿಲ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಹಿದಿನ್ ಕುಂಞ ತಲಕ್ಕಿ, CPIM ದ. ಕ ಜಿಲ್ಲಾ ನಾಯಕರಾದ ಸುನಿಲ್ ಕುಮಾರ್, ಮಂಜೇಶ್ವರ ಏರಿಯಾ ನಾಯಕರಾದ ಚಂದ್ರಹಾಸ ಶೆಟ್ಟಿ, ಗೀತಾ ಸಾಮಾನಿ, ಅರವಿಂದ, ಡಿ.ಕಮಾಲಾಕ್ಷ, ಕೆ.ಕಮಾಲಾಕ್ಷ,ಬೇಬಿ ಶೆಟ್ಟಿ, ನವೀನ್ ತಚ್ಚಿರೆ, ಪುರುಷೋತ್ತಮ ಬಳ್ಳೂರ್ , CPIM ಕೊಡ್ಲಮೊಗರು ನಾಯಕರು, ಬಾಲಸಂಘದ ರಕ್ಷಾಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಬಾಲಸಂಘದ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯರಾದ ಭಾರತಿ ಎಸ್ ಸ್ವಾಗತಿಸಿದರೆ, ಕೊನೆಯಲ್ಲಿ ಸ್ವಾಗತ ಸಮಿತಿ ಮುಖಂಡರಾದ ರವೀಂದ್ರ ಎಂ ವಂದನಾರ್ಪಣೆ ನೆರವೇರಿಸಿದರು.



