ಬೆಂಗಳೂರು: ಶ್ರೀರಾಮಪುರ, ಸೈನ್ ರೈಸ್ ಸರ್ಕಲ್ ಬಳಿ ಟಿ.ಮಲ್ಲೇಶ್ ಹೆಲ್ಪಿಂಗ್ ಟೀಮ್ ವತಿಯಿಂದ ಆಟೋ ಚಾಲಕರಿಗೆ ಸಮವಸ್ತ್ರ , ಒಂದು ಲಕ್ಷ ಅಪಘಾತ ವಿಮೆಮತ್ತು ದೃಷ್ಟಿದೋಷ ಇರುವವರಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.
ಮಾಜಿ ಮಹಾನಗರ ಪಾಲಿಕೆ ಸದಸ್ಯರ ಟಿ.ಮಲ್ಲೇಶ್ ಆಟೋ ಚಾಲಕರಿಗೆ ಸಮವಸ್ತ್ರ, ಅಪಘಾತ ವಿಮೆ ಪತ್ರವನ್ನು ವಿತರಿಸಿದರು. ಸ್ಥಳೀಯ ಸಾರ್ವಜನಿಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಟಿ.ಮಲ್ಲೇಶ್, ಬಡವರಾಗಿ ಹುಟ್ಟಿರಬಹುದು. ಆದರೆ ಬಡತನದಲ್ಲಿ ಜೀವನ ಸಾಗಿಸಬಾರದು. ಆರ್ಥಿಕವಾಗಿ ಹಿಂದುಳಿದ ಜನರನ್ನು ಆರ್ಥಿಕವಾಗಿ ಸಬಲರಾಗಿ ಮಾಡಬೇಕು ಎಂದರು.
ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರು ನಮಗೆ ಕೊಟ್ಟಿರುವ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ, ದೇಶಕ್ಕೆ ನನ್ನ ಕೊಡುಗೆ ಏನು ಎಂಬ ಚಿಂತನೆ ಮಾಡಬೇಕು? ಈ ನಿಟ್ಟಿನಲ್ಲಿ ಟಿ.ಮಲ್ಲೇಶ್ ಹೆಲ್ಪಿಂಗ್ ಟೀಮ್ ಸಾಮಾಜಿಕ ಸೇವಾ ಸಂಘಟನೆ ಆರಂಭಿಸಲಾಗಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್, ಔಷಧಿ ಮತ್ತು ಆಪರೇಷನ್ ಸಹಾಯಹಸ್ತ, 10 ಮನೆ ನಿರ್ಮಾಣಕ್ಕೆ ಸಹಾಯ ಹಾಗೂ ಸ್ವಯಂ ಉದ್ಯೋಗಕ್ಕೆ ಟೈಲರಿಂಗ್ ಯಂತ್ರ ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಗಾಡಿ, ಮಕ್ಕಳ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಸಹಾಯ ಮತ್ತು ಹಲವು ರೀತಿಯಲ್ಲಿ ಧ್ವನಿ ಇಲ್ಲದ ಜನರಿಗೆ ಸಹಾಯ ಮಾಡಲಾಗಿದೆ. ಕಾಯಕವೇ ಕೈಲಾಸ, ಸರ್ವರಿಗೂ ಸಮಪಾಲು, ಸರ್ವರಿಗೂ ಬಾಳು ಎಂಬಂತೆ ಸಮ ಸಮಾಜ ನಿರ್ಮಾಣವಾದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದರು.




