ಸಹೋದರತೆ, ಸಾಮಾನತೆಯಿಂದ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನ ಸಹಕಾರಿ: ವಿ.ಸೋಮಣ್ಣ

2 years ago

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಛೇರಿಯಲ್ಲಿ ಗಣರಾಜ್ಯೋತ್ಸವ ಮತ್ತು ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ ಕಾರ್ಯಕ್ರಮ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಛೇರಿಯಲ್ಲಿ 75ನೇ ಗಣರಾಜ್ಯೋತ್ಸವ ಮತ್ತು 193ನೇ ಸಂಗೊಳ್ಳಿ ರಾಯಣ್ಣರವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಸಹೋದರತ್ವ, ಸಾಮಾನತೆಗಾಗಿ ಎಲ್ಲರು ಒಟ್ಟಾಗಿ ಬಾಳಿ, ಬದುಕಲು ಸಂವಿಧಾನ ಎಂಬ ಮಹಾನ್ ಗ್ರಂಥವನ್ನು ಸಹಕಾರಿಯಾಗಿದೆ. ದೇಶಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಸರಿಸಮಾನವಾದ ಅವಕಾಶ ಎಲ್ಲರಿಗೂ ಸಿಗುವಂತೆ ಸಂವಿಧಾನ ಸಹಕಾರಿಯಾಗಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಸಾಮಾನತೆಯ ಹರಿಕಾರ ಅವರು ನಮ್ಮ ಜೊತೆಯಲ್ಲಿ ಸದಕಾಲ ಇರುತ್ತಾರೆ. ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ದ ಹೋರಾಟ ಮಾಡಿ ವೀರಮರಣ ಅಪ್ಪಿದ ಮಹಾನ್ ನಾಯಕ ಎಂದರು.

ಪ್ರಧಾನಿ ನರೇಂದ್ರಮೋದಿ ಅವರು ಏಕತೆ, ಅಖಂಡತೆಗೆ ಧಕ್ಕೆಯಾಗದಂತೆ 140 ಕೋಟಿ ಭಾರತೀಯರನ್ನ ಒಗ್ಗಾಟ್ಟಾಗಿ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ನರೇಂದ್ರಮೋದಿಯವರ ನೇತೃತ್ವದಲ್ಲಿ ಭಾರತದ ಭವಿಷ್ಯ ಉಜ್ವಲವಾಗಿದೆ. 500 ವರ್ಷ ಸತತ ಹೋರಾಟದ ಇತಿಹಾಸವಿರುವ ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆಯಾಗಿ ಹೊಸ ಚರಿತ್ರೆಯನ್ನ ಮೋದಿಯವರು ಮಾಡಿದರು ಎಂದರು.

ರಾಜ್ಯ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಹಿಳಾ ಅಧ್ಯಕ್ಷೆ ರತ್ಮಮ್ಮ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರವೀಂದ್ರ, ಮೋಹನ್ ಕುಮಾರ್, ಬಾಬಿ, ವೆಂಕಟೇಶ್, ದಾಸೇಗೌಡ, ಪಲ್ಲವಿ ಚನ್ನಪ್ಪ, ರಾಜೇಶ್ವರಿ ಬೆಳಗೊಡ್ ರೂಪಲಿಂಗೇಶ್, ಜಯರತ್ನ ಮತ್ತು ಬಿಜೆಪಿ ಮುಖಂಡ ಕ್ರಾಂತಿರಾಜು, ಕಾರ್ಯಕರ್ತ ಭಾಗವಹಿಸಿದ್ದರು.

Leave a Reply