ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆಯಿಲ್ಲ ಎಂದು ಕೊಟ್ಟ ಸಂದೇಶ ಮ್ಯಾಚ್ ಕ್ಲೋಸ್ ಎನ್ನುವುದಾಗಿದ್ದು, ಹಾಗಾಗಿ ಇಂದಿನಿಂದ ಬದಲಾವಣೆ ಚರ್ಚೆ ಕ್ಲೋಸ್ ಆಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹೇಳಿದ ಮೇಲೆ ಎಲ್ಲದಕ್ಕೂ ಇತಿಶ್ರೀ ಇದ್ದಂತೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ಇನ್ನು ಇತಿಶ್ರೀ ಹಾಡಬೇಕು. ಸಿಎಂ ಹೇಳಿರುವುದರಲ್ಲಿ ಹೊಸದೇನಿಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿದೆ. ಅದಕ್ಕೆ ಸಿಎಂ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸಿಎಂ ಬದಲಾವಣೆ ಎಲ್ಲಿಯೂ ಚರ್ಚೆಯೇ ಆಗಿಲ್ಲ. ಅಧಿಕಾರ ಹಂಚಿಕೆ ಇಲ್ಲ ಅಂತ ಸಿಎಂ ಸ್ಪಷ್ಟಪಡಿಸಿದ್ದಾರೆ. ಶಾಸಕರು ನಾಯಕತ್ವ ಬದಲಾವಣೆ ಮಾಡಿ ಎಂದಿಲ್ಲ. ಸುರ್ಜೆವಾಲಾ ಮುಂದೆ ಎಲ್ಲಾ ಶಾಸಕರು ಅನುದಾನದ ಡಿಮ್ಯಾಂಡ್ ಮಾಡಿರಬಹುದು. ಕೇವಲ 10% ಮಂದಿ ನಾಯಕತ್ವದ ಬದಲಾವಣೆ ಬಗ್ಗೆ ಮಾತಾಡಿರಬಹುದು. ಒಂದು 20 ಜನ ಹೇಳಿರಬಹುದು ಅಷ್ಟೇ. ಸಿಎಂ ಆಯ್ಕೆ ಮಾಡುವಾಗ ವೋಟಿಂಗ್ ಆಗಿತ್ತು. ವೋಟ್ ಹೆಚ್ಚಿದೆ ಎನ್ನುವ ಕಾರಣದಿಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದಾರೆ. ಹೀಗಾಗಿ ಸಿಎಂ ಬೆಂಬಲಕ್ಕೆ ಹೆಚ್ಚು ಶಾಸಕರಿದ್ದಾರೆ. ಇದಕ್ಕೆಲ್ಲ ಇತಿಶ್ರೀ ಹಾಡಬೇಕು. ಅದಕ್ಕೆ ಸಿಎಂ ಸ್ಪಷ್ಟವಾಗಿ ಸಂದೇಶ ಕೊಟ್ಟಿದ್ದಾರೆ ಎಂದರು.
ಸುರ್ಜೆವಾಲಾ ಸಭೆ ಮಾಡಿದ್ದು ಒಳ್ಳೆಯದೇ. ಎಲ್ಲರೂ ಓಪನ್ ಆಗಿ ಹೇಳಿಕೊಳ್ಳಲು ಅವಕಾಶ ಸಿಕ್ಕಿದೆ. ಶಾಸಕಾಂಗ ಸಭೆಯಲ್ಲಿ ಆಗದಿರುವುದು ಇಲ್ಲಿ ಸಿಕ್ಕಿದೆ. ಒಂದು ರೀತಿಯಲ್ಲಿ ಸುರ್ಜೆವಾಲಾ ಸಭೆ ಒಳ್ಳೆಯದೇ. ಸಿಎಂ, ಡಿಸಿಎಂ, ಸಚಿವರ ಮೇಲೆ ಹೇಳಬೇಕು. ಶಾಸಕಾಂಗ ಸಭೆಯಲ್ಲಿ ಹೇಳೋಕೆ ಆಗಲ್ಲ. ಹೀಗಾಗಿ ಒನ್ ಟು ಒನ್ ಮೀಟಿಂಗ್ ಒಳ್ಳೆಯದೇ. ಕೆಲವರ ಬಗ್ಗೆ ಶಾಸಕರು ನೇರ ಆರೋಪ ಮಾಡಿದ್ದಾರೆ. ತಿದ್ದಿಕೊಳ್ಳುವ ಪ್ರಯತ್ನವನ್ನು ನಾವೂ ಮಾಡುತ್ತೇವೆ ಎಂದರು.




