ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ಗುಮ್ಮನಗುಸಿಕಿನ ಮೇಲಾಟದಲ್ಲಿ ಲಾಭ ಯಾರ್ಯಾರಿಗೆ ಎಂದು ಈಗ ತಿಳಿಯದು.
2019ರ ಲೋಕಸಭೆ ಚುನಾವಣೆಯಲ್ಲಿ ಕಂಡ ಒಳಸುಳಿಗಳು ಈ ಸಾರಿ ಬೇರೆಯೇ ರೀತಿಯಲ್ಲಿ ತೆರೆಯಾಡುತ್ತವೆ. ಭೀಮ ಸದನದ ಸ್ವಾಭಿಮಾನಿ ಕುಟುಂಬ ಸದಸ್ಯರನ್ನು ಭಾಜಪ ಸದ್ಯಕ್ಕೆ ಹೊರಗಿಟ್ಟಿದೆ. ಅದರ ಅಡ್ಡ ಪರಿಣಾಮಗಳನ್ನು ಈಗಾಗಲೇ ಸಾದರಪಡಿಸಲು ಆಗದ ಮಾತು. ಇನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಯಾರೆಂದು ಅಖೈರು ಆಗಿಲ್ಲ. ಆದರೂ ಸಂಭಾವನೀಯರ ಪಟ್ಟಿ ಎಲ್ಲೆಂದರಲ್ಲಿ ಚರ್ಚೆ ಆಗುತ್ತಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
2019ರಲ್ಲಿ ಧೃವ ನಾರಾಯಣ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಧ್ಯೇಯ ವಾಕ್ಯ ಎಲ್ಲೆಡೆ ಸದ್ದು ಮಾಡಿತ್ತು. ಆದರೆ ಶ್ರೀನಿವಾಸ ಪ್ರಸಾದ್ ಹಾಕಿದ ಗಾಳಕ್ಕೆ ಅವರ ಮಾನಸ ಕಾಂಗ್ರೆಸ್ ಸ್ನೇಹಿತರು ಮೌನವಾಗಿ ಮುದ್ರೆ ಒತ್ತುತ್ತಾ ಹೋದರು. ಇನ್ನೊಂದು ಕಡೆ ಬಲಗೈ ಸಮುದಾಯದ ಕೆಲವು ಎರಡು ಮತ್ತು ಮೂರನೆಯ ಸಾಲಿನ ನಾಯಕರೆಲ್ಲ ಅಂತರ ಕಾಯ್ದುಕೊಂಡು ಪ್ರಸಾದ್ ಗೆಲುವಿನತ್ತ ನೂಕಿದರು.
ಅದರಲ್ಲೂ ಚುನಾವಣೆ ಕಾಯಕದಲ್ಲಿ ಇದ್ದ ನೌಕರರು ಶೇ.72ರಷ್ಟು ಮತದಾರರು ಪ್ರಸಾದ್ ಅವರಿಗೆ ಮತ ನೀಡಿದ್ದರು. ಇದು ಜಯಕ್ಕೆ ಕಾರಣವಾಯಿತು. ಲಕ್ಷದಂತರ ಕುಸಿದಿದೆ ಎಂದರೆ ಕೆಲವು ಕಾಂಗ್ರೆಸ್ಸಿಗರು ಬಹಿರಂಗವಾಗಿಯೇ ಪ್ರಸಾದ್ ಬೆಂಬಲಿಸಿದ್ದರು. ಪ್ರಸಾದರು ಎಲ್ಲಿ ಯಾರನ್ನು ಹೇಗೆ ಅಪ್ಪಿಕೊಂಡು ಪ್ರೀತಿಯಿಂದ ಮರುಳು ಮಾಡುವ ಗುಣವನ್ನು ಅಂದಿನಿಂದಲೂ ಹೊಂದಿರುತ್ತಾರೆ.
ಲಿಂಗಾಯತ ಸಮುದಾಯದ ಚಿಂತಕರು ಹಾಗೂ ಗಣ್ಯರು ಪ್ರಸಾದವನ್ನು ಕಳೆದ ಚುನಾವಣೆಯಲ್ಲಿ ಭಾಜಪ ಎಂಬ ಚಂದ್ರಿಕೆಯನ್ನು ಮುಟ್ಟಿದ್ದರು. ಆದರೆ ಈ ಚುನಾವಣೆಯಲ್ಲಿ ಭಾಜಪ ಲಿಂಗಾಯತ ಮತದಾರರು ಹೊಂದಿರುವ ಮೋದಿ ಪ್ರೀತಿ ಎಷ್ಟೆಂದು ಫಲಿತಾಂಶ ಮೂಲಕ ತಿಳಿಯುತ್ತದೆ. ಪಂಚ ಗ್ಯಾರಂಟಿ ಯೋಜನೆಗಳ ಮಹತ್ವದ ಪಾತ್ರ ಹೇಗಿದೆ ಎಂದು ಅರಿಯುವ ಕಾಲಘಟ್ಟ ಇದಾಗಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯಿತೇತರ ಸಮುದಾಯಗಳ ಮಾನಸಿಕ ಕ್ರೋಢೀಕರಣ ಘನೀಕೃತ ಆದರೆ ಅದು ಕಾಂಗ್ರೆಸ್ ಗೆ ಭಾರಿ ಲಾಭ. ಮೋದಿ ಮುಖ ನೋಡಿ ಮತದಾನ ಮಾಡಿ ಎನ್ನುವ ಧ್ವನಿ ದ್ರಾವಿಡ ತಮಿಳ್ಗನ್ನಡದ ಪ್ರದೇಶದಲ್ಲಿ ಹೇಗೆ ಪ್ರತಿಧ್ವನಿ ಮಾಡುತ್ತದೆ ಎಂದು ಕಾದುನೋಡಬೇಕಿದೆ. ಸಚಿವ ಡಾ.ಎಚ್.ಸಿ.ಮಹಾದೇವಪ್ಪ ರಾಜ್ಯ ರಾಜಕಾರಣದಲ್ಲಿ ಇರಬೇಕೆಂಬ ಬಹುತೇಕ ಸಮುದಾಯಗಳ ಒಳಮನಸ್ಸಿನ ಆಸೆ. ಅವರ ಮಗ ಅಭ್ಯರ್ಥಿ ಆದರೆ ನರಸೀಪುರದಾಚೆ ಎಷ್ಟು ಜನಮತವಿದೆ ಎಂಬ ನಿರ್ಧಾರದ ಮೇಲೆ ಆಯ್ಕೆ.
ಇನ್ನುಳಿದ ಅನೇಕ ಸಂಭವನೀಯ ಅಭ್ಯರ್ಥಿಗಳ ಪೈಕಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಶಾಸಕ ದರ್ಶನ್ ಧ್ರುವನಾರಾಯಣ್. ಮತ್ತೊಂದು ಮಗ್ಗುಲಲ್ಲಿ ಮಾಜಿ ಮಂತ್ರಿ ಬಿ.ಸೋಮಶೇಖರ್ ಕಾಲಿಗೆ ಚಕ್ರ ಕಟ್ಟಿಕೊಂಡು 8 ಕ್ಷೇತ್ರದಲ್ಲಿ ಓಡಾಟ ನಡೆಸಿ ಒಂದಷ್ಟು ಹವೆ ಸೃಷ್ಟಿ ಮಾಡಿದ್ದಾರೆ. ದೇವೇಗೌಡರ ಕಡು ವೈರತ್ವದಿಂದ ಅವರ ರಾಜಕೀಯ ಭವಿಷ್ಯ ಮಂಕಾಗಿದೆ. 72ರ ವಯಸ್ಸಿನ ರಾಜಕಾರಣಿ ಸ್ವಲ್ಪ ಸುಧಾರಿತ ರೀತಿಯಲ್ಲಿ ನಡೆದು ತಮ್ಮದೇಯಾದ ಛಾಪು ಹೊಂದಿದ್ದಾರೆ. ಕಳಂಕ ಅವರಿಗೆ ಅಂಟಿಲ್ಲ. ಆದರೂ ಒಂದು ಅವಕಾಶವನ್ನು ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಮಾಲೋಚನೆ ಮಾಡಿ ಕೈ ಚಾಚಿದ್ದಾರೆ. ಈಗ ವರಿಷ್ಠರ ಚಿತ್ತ ಯಾರ ಮೇಲೆ ಎಂದು ಈಗಷ್ಟೇ ತಿಳಿಯಬೇಕಿದೆ.
ಭಾಜಪದ ಅಭ್ಯರ್ಥಿ ಬಾಲರಾಜ್ ಎಲ್ಲಾ ಮೂಲೆಯಲ್ಲಿಯೂ ಒಂದಷ್ಟು ಜನರನ್ನು ಸಂಪಾದಿಸಿದ್ದಾರೆ. ಈ ಶ್ರೀ ರಕ್ಷೆ ಮತವಾಗಿ ಬರುತ್ತದೆಯೇ ಕಾಯಬೇಕಿದೆ. ಹನೂರು ಕ್ಷೇತ್ರ ಶಾಸಕರು ಭಾಜಪಕ್ಕೆ ಮಾನಸಿಕವಾಗಿ ದುಡಿಯದ ಹೋದರೆ ಬಲು ಕಷ್ಟ. ಇನ್ನುಳಿದ 7 ಕ್ಷೇತ್ರದ ಶಾಸಕರು ಹಾಕುವ ಕಠಿಣ ಶ್ರಮದ ಮೇಲೆ ಕಾಂಗ್ರೆಸ್ ಪಕ್ಷದ ಹಣೆಬರಹವಿದೆ.
ಇನ್ನು ಮೈಸೂರಿನ ಮಾಜಿ ಮಹಾರಾಜರ ದತ್ತು ಪುತ್ರ ಭಾಜಪ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸಂದೇಶವನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ ಮೈಸೂರಿನ ಲಿಂಗಾಯತ ಮಠಗಳು ಕಾಂಗ್ರೆಸ್ ಪಕ್ಷ ತಮ್ಮ ಸಮುದಾಯದ ಜನರನ್ನು ಕೈ ಹಿಡಿಯಬಹುದು ಎಂದು ಕಾಯುತ್ತಾ ಇದ್ದಾರೆ. ಆದರೆ ಲಿಂಗಾಯತರಲ್ಲಿ ಅಂತಹ ವರ್ಚಸ್ವಿ ನಾಯಕರಿಲ್ಲ ಎಂಬ ಆತಂಕ ಕಾಂಗ್ರೆಸ್ ಪಕ್ಷದ ನಾಯಕರನ್ನು ನಿದ್ದೆಗೆಡಿಸಿದೆ. ಸಾಧಾರಣ ಉತ್ತಮ ಕಾರ್ಯಕರ್ತರನ್ನು ಬೇಕೆಂದರೆ ಇತರೆ ಸಮುದಾಯಗಳ ಬೆಂಬಲದಿಂದ ಕಡಲು ದಾಟಿಸಲೂಬಹುದು ಎಂಬ ಪಡಸಾಲೆ ಮಾತುಗಳು ಕೇಳಿಬರುತ್ತಿವೆ.
ಇದರಿಂದ ಮಂಡ್ಯ, ಹಾಸನ, ಕ್ಷೇತ್ರಗಳಲ್ಲಿ ಕೊಂಚ ಲಿಂಗಾಯತರ ದೃಷ್ಟಿ ಬದಲಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಘೋಷಣೆ ಆಗಿರುವ ಅಭ್ಯರ್ಥಿ ಲಕ್ಷ್ಮಣ್ ಹೋರಾಟದ ಮೂಲಕ ರಾಜಕೀಯ ಪ್ರವೇಶ ಮಾಡಿದವರು. ಅವರಿಗೆ ವರಸೆಗಳನ್ನು ಎದುರಿಸುವ ಒಳ ಸಾಮರ್ಥ್ಯವನ್ನು ಅವರ ಗುತ್ತಿನ ಭಾಷೆ ಹೇಳದೆ ಇರದು. ಭಾಜಪದ ಕಮಲಕ್ಕೆ ತೆನೆ ಹೊತ್ತ ಮಹಿಳೆ ನಂಬಿರುವ ಒಕ್ಕಲಿಗರು ಈ ಚುನಾವಣೆಯಲ್ಲಿ ದೇವೇಗೌಡರ ಕುಟುಂಬವನ್ನು ಬೆಂಬಲಿಸುತ್ತಾರೊ ಇಲ್ಲವೇ ಸಮುದಾಯದ ಒಳಗೆ ನಮ್ಮದೆಂಬ ಕೂಗು ಹಾಕುತ್ತಾರೋ ಕಾದು ನೋಡಬೇಕಿದೆ.
ಭಾಜಪಕ್ಕೆ ತೆನೆ ಹೊತ್ತ ಮಹಿಳೆಯಿಂದ ಮತದ ಮೇವು ಸಿಗದಿದ್ದರೂ ಚಿಂತನೆ ಮಾಡದೆ ಭವಿಷ್ಯದ ದೃಷ್ಟಿಯಿಂದ ದೇವೇಗೌಡರ ಪಕ್ಷವನ್ನು ನೆಲ ಸಮಾಧಿಗೆ ನಿಲ್ಲಿಸುವುದೆ ಎಂಬ ಸಂದೇಶ ಎರಡು ಪಕ್ಷಗಳು ಗಳಿಸುವ ಫಲಿತಾಂಶದ ಮೇಲೆ ನಿರ್ಧಾರ ಆಗುತ್ತದೆ. ಕಾಯೋಣ ಆತುರವೇನು?
- ದಾಸನೂರು ಕೂಸಣ್ಣ, ಸಮುದಾಯ ಚಿಂತಕರು




