ಸಿ.ಬಿ.ಐ.ತನಿಖೆಗೆ ವಹಿಸಬೇಕು ಎಂದು ಸಹಿ ಸಂಗ್ರಹ ಅಭಿಯಾನ
ಬೆಂಗಳೂರು: ಮಹಾಲಕ್ಷ್ಮಿಲೇಔಟ್ ನ ಶಂಕರಮಠ ಅವನಿ ಶಂಕರಮಠ ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಜ್ಞಾನ ಪ್ರತಿಷ್ಠಾನವತಿಯಿಂದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಾಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಬೆರಸಿದ ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಎಂದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ದ ಕ್ರಮ ಕುರಿತು ಜನಜಾಗೃತಿ ಸಭೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ ಆರಂಭಿಸಲಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಕೆ.ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಹಿಂದುತ್ವಪರ ಹೋರಾಟಗಾರ ಹರ್ಷ ಮುತಾಲಿಕ್, ರಾಷ್ಟ್ರಿಯ ಪ್ರಜ್ಞಾನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ನಾಗೇಂದ್ರ ಜೋಯಿಸ್, ಬಿಜೆಪಿ ಮುಖಂಡರಾದ ಜಯರಾಮಣ್ಣ, ರಾಘವೇಂದ್ರ, ಶಿವಾನಂದಮೂರ್ತಿ ಹಾಗೂ ಆಗಮ ಪಂಡಿತರು, ಅರ್ಚಕರು ಹಾಗೂ ಹಿಂದುತ್ವಪರ ಹೋರಾಟಗಾರರು ಭಾಗವಹಿಸಿದ್ದರು.
ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ತಿರುಪತಿ ಲಾಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ದನದ ಕೊಬ್ಬ ತುಪ್ಪ ಸರಬರಾಜು ಮಾಡಿದವರು ಯಾರು ಎಂಬ ತನಿಖೆಯಾಗಬೇಕು. ವಿಶ್ವದಲ್ಲಿ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಹಲವು ದೊಡ್ಡ, ದೊಡ್ಡ ದೇವಸ್ಥಾನಗಳಲ್ಲಿ ಪ್ರಸಾದ ಪರಿಶುದ್ಧತೆ ಪರೀಕ್ಷೆ ಮಾಡಬೇಕು ಹಾಗೂ ಅಂತರರಾಷ್ಟ್ರಿಯ ಜಾಲ ಇರುವ ಸಾಧ್ಯತೆ ಇರುವುದರಿಂದ ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಿ.ಬಿ.ಐ. ವಹಿಸಬೇಕು ಎಂದು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದರು.
ನೆ.ಲ.ನರೇಂದ್ರಬಾಬು ಮಾತನಾಡಿ, ಧಾರ್ಮಿಕ ಶ್ರದ್ಧೆಗೆ ಧಕ್ಕೆ ಬಂದಾಗ ನಾವು ಹೋರಾಟ ಮತ್ತು ಪ್ರತಿಕ್ರಿಯೆ ನೀಡುವುದು ನಮ್ಮ ಧರ್ಮ. ತಿರುಪತಿ ಲಾಡು ಪ್ರಸಾದ ಎಲ್ಲರು ಪ್ರಸಾದ ರೂಪದಲ್ಲಿ ತಿಂದಿದ್ದಾರೆ. ಪ್ರಸಾದದಲ್ಲಿ ದನದ ಕೊಬ್ಬು ಬೆರೆಸಿದ್ದಾರೆ. ಕೋಟ್ಯಂತರ ಜನರ ಭಕ್ತಿ ಭಾವನೆ ಜೊತೆಯಲ್ಲಿ ಚೆಲ್ಲಾಟವಾಡಿದ್ದಾರೆ ಎಂದರು.
ಅತಿ ಕಡಿಮೆ ಬೆಲೆಯ ತುಪ್ಪ ಖರೀದಿ ಮಾಡಿದ್ದಾರೆ, ತುಪ್ಪ ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ, ಕಲಬೆರಕೆ ತುಪ್ಪದಿಂದ ಲಾಡು ತಯಾರಿಕೆ ಮಾಡಿದ್ದಾರೆ. ಹಿಂದೂ ಸಮಾಜದ ಮೇಲೆ ತಲಾ ತರಂತರದಿಂದ ಶೋಷಣೆ ಮಾಡುತ್ತಿದ್ದಾರೆ, ಹಿಂದೂಗಳ ರಕ್ಷಣೆಗೆ ಸಂಘಟನೆ ಮಾಡಬೇಕಾಗಿದೆ ಎಂದರು.
ಡಾ.ಎಸ್.ನಾಗೇಂದ್ರ ಜೋಯಿಸ್ ಮಾತನಾಡಿ, ಹಿಂದೂ ದೇವಾಲಯದ ಆಡಳಿತ ಮಂಡಳಿ ನಿರ್ವಹಣೆ ಸಂಪೂರ್ಣ ಹಿಂದೂ ಧರ್ಮದವರ ಬಳಿ ಇರಬೇಕು, ರಾಜ್ಯದಲ್ಲಿರುವ ಹಿಂದೂ ದೇವಾಲಯಗಳಲ್ಲಿ ಕುಡಿಯುವ ನೀರು, ಅಡುಗೆ ಕೋಣೆ ಮೂಲಭೂತ ಸೌಕರ್ಯ ಸಮರ್ಪಕವಾಗಿ ಸಿಗುವಂತೆ ಆಗಲಿ ಎಂದರು.
ಹಿಂದೂ ದೇವಾಲಯದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ, ವಹಿವಾಟು ನಡೆಸದಂತೆ ನಿರ್ಬಂಧ ಹಾಕಬೇಕು. ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು, ಮೀನಿನ ಬೆರಕೆಯಾಗಿರುವುದರಿಂದ ವಿಶ್ವಾದ್ಯಂತ ವೆಂಕಟೇಶ್ವರ ಭಕ್ತರಿಗೆ ಬಾರಿ ನೋವುಂಟಾಗಾಗಿದೆ. ತಿರುಪತಿಯಲ್ಲಿ ಅನಾಚರದ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ ಎಂದರು.




