ಕಾಂಗ್ರೆಸ್ ಸರ್ಕಾರದ ದ್ವಿಮುಖ ದೊರಣೆಗೆ ಎಸ್.ಡಿ.ಪಿ.ಐ ಖಂಡನೆ
ಬೆಂಗಳೂರು: ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಮತ್ತು ಅವಮಾನಕಾರಿ ಮಾತುಗಳನ್ನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸರ್ಕಾರದ ನಿಷ್ಪಕ್ಷಪಾತತೆ ಹಾಗೂ ನ್ಯಾಯದ ಬದ್ಧತೆಗೆ ದೊಡ್ಡ ಪ್ರಶ್ನೆ ಎಬ್ಬಿಸುತ್ತದೆ ಎಂದು ಎಸ್.ಡಿ.ಪಿ.ಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಶಾಸಕ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೊಪ್ಪಳ ಜಿಲ್ಲಾ ಕನಕಗಿರಿ ತಾಲ್ಲೂಕಿನ ಮುಸಲಾಪುರ ಗ್ರಾಮದ ನಿರಪರಾಧಿ ಮುಸ್ಲಿಂ ಯುವಕನ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಬಂಧಿಸಿರುವುದು ಸಂಪೂರ್ಣ ಅನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಈ ಪಕ್ಷಪಾತಿ ನಿಲುವು, ಸಮಾಜದಲ್ಲಿ ಅಸಮಾಧಾನ ಹಾಗೂ ಅನಿಶ್ಚಿತತೆ ಹುಟ್ಟಿಸುವಂತದ್ದು.
ಯತ್ನಾಳ್‌ರ ಅವಮಾನಕಾರಿ ಹೇಳಿಕೆಗಳನ್ನು ಕಡೆಗಣಿಸಿ, ಅದನ್ನು ಪ್ರಶ್ನಿಸಿದ ಸಾಮಾನ್ಯ ಯುವಕನ ವಿರುದ್ಧ ಕ್ರಮ ಕೈಗೊಳ್ಳುವುದು ನ್ಯಾಯದ ಹಾಸ್ಯ ಮಾಡಿರುವಂತಾಗಿದೆ ಎಂದು ಎಸ್ ಡಿ ಪಿ ಐ ಹೇಳಿದೆ.
ಎಸ್.ಡಿ.ಪಿ.ಐ ಕರ್ನಾಟಕದ ಸ್ಪಷ್ಟ ಬೇಡಿಕೆಗಳು
* ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು.
* ಮುಸಲಾಪುರದ ನಿರಪರಾಧಿ ಯುವಕನ ಮೇಲೆ ದಾಖಲಿಸಿದ FIR ಹಿಂಪಡೆಯಬೇಕು ಮತ್ತು ಅವನಿಗೆ ನ್ಯಾಯ ಒದಗಿಸಬೇಕು.
* ಸರ್ಕಾರವು ಕಾನೂನನ್ನು ಎಲ್ಲರ ಮೇಲೂ ಸಮಾನವಾಗಿ ಜಾರಿಗೆ ತರುವಂತೆ ಕ್ರಮ ಕೈಗೊಳ್ಳಬೇಕು.
ಕಾಂಗ್ರೆಸ್ ಸರ್ಕಾರವು ಈ ದ್ವಿಮುಖ ನೀತಿ ಮುಂದುವರೆಸಿದರೆ, ಕರ್ನಾಟಕ ಪ್ರಜಾಪ್ರಭುತ್ವದ ಹಿತಕ್ಕಾಗಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಬೃಹತ್ ಹೋರಾಟ ಆರಂಭಿಸಲು ಹಿಂಜರಿಯುವುದಿಲ್ಲ ಎಂದು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸರಕಾರವನ್ನು ಈ ಮೂಲಕ ಎಚ್ಚರಿಸುತ್ತಿದೆ.




