ಜೂ.14 ರಂದು ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

2 years ago

ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.14 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಹೊಂಡಾ ಮೋಟಾರ್ ಸೈಕಲ್ ಕಂಪನಿಯಲ್ಲಿ ಅಪ್ರೆಂಟೀಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಹೆಚ್.ಎಂ.ಪಂಡಿತಾರಾಧ್ಯ ತಿಳಿಸಿದ್ದಾರೆ.

ಸಂದರ್ಶನದಲ್ಲಿ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಇ.ಎಂ, ಎಂ.ಎಂ.ವಿ, ಮೆಕ್ಯಾನಿಕ್ ಡೀಸಲ್ ವೃತ್ತಿಗಳ ಐ.ಟಿ.ಐ ಪಾಸಾದ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ತರಬೇತಿದಾರರು ಭಾಗವಹಿಸಬಹುದು.

ದಾಖಲೆಗಳು: ಸಂದರ್ಶನದಲ್ಲಿ ಭಾಗವಹಿಸುವವರು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ನಅ ಪ್ರತಿ ಹಾಗೂ ಸ್ವ-ವಿವರವುಳ್ಳ ಬಯೋಡೇಟಾ ಮತ್ತು ತಪ್ಪದೇ ಸ್ಮಾರ್ಟ್ ಮೊಬೈಲ್ನ್ನು ತರಬೇಕು. 18 ವರ್ಷ ಮೇಲ್ಪಟ್ಟವರು ಅರ್ಹರಾಗಿರುತ್ತಾರೆ.

ಜೂ.14 ರಂದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದೆ. ಅರ್ಹರು ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply