ವೇಳಾಪಟ್ಟಿ ಪ್ರಕಟ
ಧಾರವಾಡ: ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಹಾಗೂ 1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಧಾರವಾಡ ಜಿಲ್ಲೆಯ ಹತ್ತು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿ ಇರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ನವೆಂಬರ 23 ರಂದು ಉಪ ಚುನಾವಣೆಯನ್ನು ಜರುಗಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಖಾಲಿ ಸ್ಥಾನಗಳ ವಿವರ: ಧಾರವಾಡ ತಾಲೂಕಿನ ಬೇಲೂರ ಗ್ರಾಮಪಂಚಾಯತಿಯ ಬೇಲೂರ ಕ್ಷೇತ್ರದ ಒಂದು (ಸಾಮಾನ್ಯ-1) ಖಾಲಿ ಸ್ಥಾನ ಹಾಗೂ ಮಾರಡಗಿ ಗ್ರಾಮಪಂಚಾಯತಿಯ ಸೋಮಾಪೂರ ಕ್ಷೇತ್ರದ ಒಂದು (ಹಿಂದುಳಿದ ‘ಅ’ ಪ್ರವರ್ಗ) ಖಾಲಿ ಸ್ಥಾನ ಮತ್ತು ನವಲಗುಂದ ತಾಲೂಕಿನ ಯಮನೂರ ಗ್ರಾಮಪಂಚಾಯತಿಯ ಆರೇಕುರಹಟ್ಟಿ 1ನೇ ಕ್ಷೇತ್ರದ (ಸಾಮಾನ್ಯ ಮಹಿಳೆ-1) ಮತ್ತು (ಸಾಮಾನ್ಯ-1) ಒಟ್ಟು 2 ಖಾಲಿ ಸ್ಥಾನ, ಆರೇಕುರಹಟ್ಟಿ 2ನೇ ಕ್ಷೇತ್ರದ (ಅನುಸೂಚಿತ ಜಾತಿ ಮಹಿಳೆ-1) ಮತ್ತು (ಹಿಂದುಳಿದ ‘ಅ’ ಪ್ರವರ್ಗ) ಒಟ್ಟು 2 ಖಾಲಿ ಸ್ಥಾನ, ಆರೇಕುರಹಟ್ಟಿ 3 ನೇ ಕ್ಷೇತ್ರದ (ಹಿಂದುಳಿದ ‘ಬ’ ಪ್ರವರ್ಗ ಮಹಿಳೆ, ಹಿಂದುಳಿದ ‘ಅ’ ಪ್ರವರ್ಗ, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ) ಒಟ್ಟು 4 ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ಜರುಗಲಿದೆ.
ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮಪಂಚಾಯತಿಯ ಮುತ್ತಗಿ ಕ್ಷೇತ್ರದ ಒಂದು (ಅನುಸೂಚಿತ ಜಾತಿ) ಖಾಲಿ ಸ್ಥಾನ ಹಾಗೂ ಭೋಗೇನಾಗರಕೊಪ್ಪ ಗ್ರಾಮಪಂಚಾಯತಿಯ ಬಗಡಗೇರಿ ಕ್ಷೇತ್ರದ ಒಂದು (ಸಾಮಾನ್ಯ) ಖಾಲಿ ಸ್ಥಾನ ಮತ್ತು ಸೂರಶೆಟ್ಟಿಕೊಪ್ಪ ಗ್ರಾಮಪಂಚಾಯತಿಯ ಸೂರಶೆಟ್ಟಿಕೊಪ್ಪ 2 ನೇ ಕ್ಷೇತ್ರಕ್ಕೆ ಒಂದು (ಸಾಮಾನ್ಯ) ಖಾಲಿ ಸ್ಥಾನ, ಕುಂದಗೋಳ ತಾಲೂಕಿನ ಸಂಶಿ ಗ್ರಾಮಪಂಚಾಯತಿಯ ಸಂಶಿ 3 ನೇ ಕ್ಷೇತ್ರಕ್ಕೆ ಒಂದು (ಹಿಂದುಳಿದ ‘ಅ’ ಪ್ರವರ್ಗ ಮಹಿಳೆ) ಖಾಲಿ ಸ್ಥಾನ ಹಾಗೂ ಬರದ್ವಾಡ ಗ್ರಾಮಪಂಚಾಯತಿಯ ಕೊಡ್ಲಿವಾಡ ಕ್ಷೇತ್ರದ ಒಂದು (ಸಾಮಾನ್ಯ) ಖಾಲಿ ಸ್ಥಾನ, ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮಪಂಚಾಯತಿಯ ನಲವಡಿ 2ನೇ ಕ್ಷೇತ್ರಕ್ಕೆ ಒಂದು (ಸಾಮಾನ್ಯ) ಖಾಲಿ ಸ್ಥಾನ ಹಾಗೂ ಅಳ್ನಾವರ ತಾಲೂಕಿನ ಹೊನ್ನಾಪೂರ ಗ್ರಾಮಪಂಚಾಯತಿಯ ಕಂಬಾರಗಣವಿ 2ನೇ ಕ್ಷೇತ್ರದ ಒಂದು (ಹಿಂದುಳಿದ ‘ಅ’ ಪ್ರವರ್ಗ ಮಹಿಳೆ) ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ಜರುಗಲಿದೆ.
ಉಪ ಚುನಾವಣೆ ವೇಳಾಪಟ್ಟಿ: ಧಾರವಾಡ ಜಿಲ್ಲೆಯ ವಿವಿಧ ಗ್ರಾಮಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿ ಇರುವ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಜರುಗಿಸಲು ನವೆಂಬರ 6, 2024 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪ್ರಪತ್ರ-2 ರಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.
ನವೆಂಬರ 6 ರಿಂದ ನವೆಂಬರ 12 ರ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ (ಸಾರ್ವತ್ರಿಕ ರಜಾದಿನಗಳನ್ನು ಹೊರತುವಡಿಸಿ) ನಾಮಪತ್ರಗಳನ್ನು ಸಲ್ಲಿಸಬಹುದು. ಮತ್ತು ನವೆಂಬರ 9, 2024 ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಸದರಿ ದಿನದಂದು ಯಾವುದೇ ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ನಾಮಪತ್ರಗಳನ್ನು ಸಲ್ಲಿಸಲು ನವೆಂಬರ 12, 2024 ರಂದು ಕೊನೆಯ ದಿನವಾಗಿರುತ್ತದೆ. ನಾಮಪತ್ರಗಳನ್ನು ನವೆಂಬರ 13 ರಂದು ಪರಿಶೀಲಿಸಲಾಗುತ್ತದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ 15 ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಮತದಾನ ನವೆಂಬರ 23 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮರು ಮತದಾನ ಅವಶ್ಯವಿದ್ದರೆ, ನವೆಂಬರ 25 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಸಲಾಗುತ್ತದೆ. ಮತಗಳ ಎಣಿಕೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ನವೆಂಬರ 26 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಸಲಾಗುತ್ತದೆ. ಮತ್ತು ಚುನಾವಣಾ ಪ್ರಕ್ರಿಯೆಯನ್ನು ನವೆಂಬರ 26, 2024 ಕ್ಕೆ ಮುಕ್ತಾಯಗೊಳಿಸಲಾಗುವುದು.
ಚುನಾವಣಾ ನೀತಿ ಸಂಹಿತೆ: ಚುನಾವಣಾ ನೀತಿ ಸಂಹಿತೆಯು ಉಪಚುನಾವಣೆ ಜರುಗಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನವೆಂಬರ 6, 2024 ರಿಂದ ನವೆಂಬರ 26, 2024 ರವರೆಗೆ ಜಾರಿಯಲ್ಲಿರುತ್ತದೆ. ಉಪ ಚುನಾವಣೆ ಜರುಗಲಿರುವ ಗ್ರಾಮ ಪಂಚಾಯತಿಗಳ ಎಲ್ಲ ಮತದಾರರಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಬಾರದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




