ಬೆಂಗಳೂರು: ಮಾಗಡಿ ರೋಡ್ ನಲ್ಲಿ 4 ಎಕರೆ ಜಾಗದಲ್ಲಿ ನೂತನ ಶವಸಂಸ್ಕಾರ ಘಟಕ ಆರಂಭಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19ನಿಯಂತ್ರಣ ಸಭೆಯಲ್ಲಿ ಮಾತಾಡಿದ ಅವರು, ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ನೌಕರರ ನಡುವೆ ಸಮನ್ವಯ ತಂದು ಕೊವಿಡ್-19ನಿಯಂತ್ರಣ ಮಾಡುವ ಉದ್ದೇಶದಿಂದ ಬಿ.ಬಿ.ಎಂ.ಪಿ., ವೈದ್ಯಕೀಯ, ಕಂದಾಯ ಇಲಾಖೆ, ಜಲಮಂಡಳಿ, ಪೊಲೀಸ್ ಇಲಾಖೆ ಸಂಚಾರಿ ವಿಭಾಗ, ಅಗ್ನಿಶಾಮಕದಳ, ಆಶಾ ಕಾರ್ಯಕರ್ತೆಯರು, ಲಿಂಕ್ ವರ್ಕರ್ಸ್ ಎಲ್ಲರ ಸಹಕಾರದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಯೋಜನೆ ರೂಪಿಸಿ ಕೆಲಸ ಹಂಚಿಕೆ ಮಾಡಲಾಗುವುದು. ಇದರಿಂದ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು ಎಂದರು.
ಶಾಸಕರ ಕಛೇರಿಯನ್ನ ವಾರ್ ರೋಂ ಆಗಿ ಪರಿರ್ವತನೆ ಮಾಡಲಾಗಿದೆ. ಹೋಂ ಐಸೋಲೇಶನ್ ನಲ್ಲಿ ಇರುವರಿಗೆ ಔಷಧಿ, ಮಾತ್ರೆ ಸಕಾಲಕ್ಕೆ ಮನೆಗೆ ತಲುಪಬೇಕು ಹಾಗೂ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಇದರಿಂದ ನಿಯಂತ್ರಣ ಸಾಧ್ಯ ಎಂದರು.
ಕಿಡ್ನಿ, ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆ ಇರುವ ಕೋವಿಡ್ ಸೋಂಕಿತರಿಗೆ ಪ್ರಥಮ ಆದ್ಯತೆ ನೀಡಿ ಚಿಕಿತ್ಸೆ ಸಿಗಬೇಕು. ಬಡವರು, ಮಧ್ಯಮ ವರ್ಗದವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುವಂತೆ ಕ್ರಮಕೈಗೊಳ್ಳಲಾಗದು ಎಂದು ಭರವಸೆ ನೀಡಿದರು.
ಅವರ ನಂತರ ಮಾತಾಡಿದ ಅಬಕಾರಿ ಸಚಿವ ಗೋಪಾಲಯ್ಯ, ಕೋವಿಡ್ ಸಮಸ್ಯೆ ಅಲಿಸಲು ಸಹಾಯವಾಣಿ ಆರಂಭಿಸಬೇಕು, ಹೋಂ ಕ್ಲಾರಂಟೈನ್ ಸೋಂಕಿತರಿಗೆ ಮನೆಗೆ ಔಷಧಿ ತಲುಪಿಸುವುದು, ಸ್ಥಳೀಯ ಮಟ್ಟದಲ್ಲಿ ಕೋವಿಡ್ ಕೇರ್ ಆರಂಭಿಸುವುದರಿಂದ ತತಕ್ಷಣ ಸೋಂಕಿತರಿಗೆ ಚಿಕಿತ್ಸೆ ಲಭಿಸುತ್ತದೆ. ಇದರಿಂದ ರೋಗಿಗಳನ್ನು ಪ್ರಾಣಪಾಯದಿಂದ ಉಳಿಸಬಹುದು. ಆಶಾ ಕಾರ್ಯಕರ್ತೆಯರು, ಲಿಂಕ್ ವರ್ಕರ್ಸ್ ಬಹಳಷ್ಟು ಶ್ರಮವಹಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪರವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಜಂಟಿ ಆಯುಕ್ತರಾದ ಬಸವರಾಜ್, ಅಧಿಕಾರಿಗಳಾದ ಶಿವಸ್ವಾಮಿ, ಪರ್ವಿನ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಡಾ.ಎಸ್.ರಾಜು, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡ, ರೂಪಲಿಂಗೇಶ್ವರ್ ಮತ್ತು ಗೋವಿಂದರಾಜನಗರ ಬಿ.ಜೆ.ಪಿ. ಮಂಡಲದ ಅಧ್ಯಕ್ಷ ವಿಶ್ವನಾಥಗೌಡ ಹಾಜರಿದ್ದರು.




