ದೇಶದ ಜನ ನನ್ನ ಪರಿವಾರ ಎಂದು ನೋವಿಗೆ ಸ್ಪಂದಿಸುವ ದಿಟ್ಟ ಪ್ರಧಾನಿ ಮೋದಿ: ಕೆ.ಉಮೇಶ್ ಶೆಟ್ಟಿ

2 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸರ್ಕಾರದ ಮಹತ್ವಪೂರ್ಣ ಯೋಜನೆ ಭಾರತ್ ರೈಸ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ವೇಳೆ ಮಾತಾಡಿದ ಕೆ.ಉಮೇಶ್ ಶೆಟ್ಟಿ, ಬಡವರು ಮತ್ತು ಮಧ್ಯಮವರ್ಗದವರು ಹಸಿವಿನಿಂದ ಬಳಲಬಾರದು ಎಂದು ಬಿಪಿಎಲ್ ಕಾರ್ಡ್ ದಾರರಿಗೆ 5 ಕೆ.ಜಿ.ಅಕ್ಕಿ ಉಚಿತ ಮತ್ತು ಇನ್ನಿತರೆ ಜನರಿಗೆ ಅನುಕೂಲವಾಗಲಿ ಎಂದು 1 ಕೆ.ಜಿ. ಅಕ್ಕಿಗೆ 29 ರೂಪಾಯಿ ನಿಗದಿ ಮಾಡಿ ಕೇಂದ್ರ ಸರ್ಕಾರ ವಿತರಿಸುತ್ತಿದೆ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಪ್ರಧಾನಿ ನರೇಂದ್ರ ಮೋದಿರವರ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿ ತರಲು ಪಿ.ಎಂ.ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ ಮುದ್ರ ಯೋಜನೆ ಮತ್ತು ಜನಜೀವನ್ ಮಿಷನ್ 40 ಕೋಟಿ ಮನೆಗಳಿಗೆ ನೀರಿನ ಸಂಪರ್ಕ, ಬೀದಿ ವ್ಯಾಪಾರಿಗಳಿಗೆ ಸ್ವ ನಿಧಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ, ಪ್ರಧಾನ್ ಮಂತ್ರಿ ಅವಾಸ್ ಯೋಜನೆಯಲ್ಲಿ ಕೋಟ್ಯಂತರ ಮನೆಗಳ ನಿರ್ಮಾಣ ಮಾಡಲಾಗಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಿ ಜನರ ಆರೋಗ್ಯ ಸುರಕ್ಷತೆ ಗಮನಹರಿಸಲಾಗಿದೆ. 500 ವರ್ಷಗಳ ಸತತ ಹೋರಾಟದ ಫಲ ಪ್ರಧಾನಿ ನರೇಂದ್ರಮೋದಿರವರ ಸಾರಥ್ಯದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ಲೋಕಾರ್ಪಣೆಯಾಗಿದೆ ಎಂದರು.

ಕೊರೋನ ಸಂದರ್ಭದಲ್ಲಿ ಇಡಿ ವಿಶ್ವವೇವೆ ತಲ್ಲಣಗೊಂಡಿತ್ತು. ಆದರೆ ಪ್ರಧಾನಿ ನರೇಂದ್ರಮೋದಿರವರ ದಿಟ್ಟತನದಿಂದ ದೇಶದ ಜನರಿಗೆ ಉಚಿತವಾಗಿ ವಾಕ್ಸಿನ್ ಮತ್ತು 80 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಿಸಿದರು. ಇಂತಹ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಿ ಆರ್ಥಿಕವಾಗಿ ಸಬಲರಾಗಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿ ಚೇತರಿಕೆ ಕಂಡಿದೆ ಎಂದರು.

ವಿಶ್ವದ ಬಲಿಷ್ಠ ನಾಯಕ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮತ್ತೊಮ್ಮೆ ಮೋದಿ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬರಲಿದೆ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿಸೂರ್ಯರವರು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುವುದು ಖಚಿತ ಎಂದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಮಪ್ಪ, ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಡೊಡ್ಡಯ್ಯ, ಬಿಜೆಪಿ ಮುಖಂಡರಾದ ನಂಜಪ್ಪ, ಶಾಮಣ್ಣ, ಮಂಜು, ಜಯದೇವ್, ಚಲುವಚಾರ್ ಮೊದಲಾದವರು ಹಾಜರಿದ್ದರು.

Leave a Reply