ಬೆಂಗಳೂರು: ಬಿ.ಎನ್.ವಿಜಯಕುಮಾರ್ ಅಮೂಲ್ಯರತ್ನರಾಗಿದ್ದರು. ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು. ಪ್ರತಿಯೊಬ್ಬ ಕಾರ್ಯಕರ್ತರಿಗೆ ದಾರಿದೀಪವಾಗಿದ್ದರು. ಬೆಂಗಳೂರು ನಗರ ಪ್ರದೇಶದಲ್ಲಿ ಬಿ.ಜೆ.ಪಿ. ಸಂಘಟನೆ, ಸಧೃಡವಾಗಿ ಬೆಳಯಲು ಬಿ.ಎನ್.ವಿಜಯಕುಮಾರ್ ರವರ ಪಾತ್ರ ಅಪಾರ ಎಂದು ಗಣ್ಯರು ಗುಣಗಾನ ಮಾಡಿದರು.
ಬಿ.ಜೆ.ಪಿ.ಮುಖಂಡರಾದ ಬಿ.ಎನ್.ಪ್ರಹ್ಲಾದ್ ಬಾಬು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಗೋವಿಂದನಾಯ್ಡು, ಅರಣ್ಯ ಅಭಿವೃದ್ದಿ ನಿಗಮ ನಿರ್ದೇಶಕಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಮರೇಶ್ (ಅಂಬರೀಶ್) ಬಿ.ಎನ್.ವಿಜಯಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಚಿತ ಆರೋಗ್ಯ ತಪಾಸಣೆ ಶಿಬಿರಗೆ ಚಾಲನೆ ನೀಡಿದರು.




