ಬಿ.ಜೆ.ಪಿ.ಯದು ಹಗರಣ, ಜನವಿರೋಧಿ ಸರ್ಕಾರ: ಮಹಿಳಾ ಕಾಂಗ್ರೆಸ್

5 years ago

ಅವ್ಯವಹಾರ ಆರೋಪ: ಶಶಿಕಲಾ ಜೊಲ್ಲೆ ವಿರುದ್ದ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಬೆಂಗಳೂರು: ಬಡ ಶಾಲಾ ಮಕ್ಕಳ ಮೊಟ್ಟೆ ಖರೀದಿ ವ್ಯವಹಾರ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಚಿವೆ ಶಶಿಕಲಾ ಜೊಲ್ಲೆ ಕೂಡಲೆ ರಾಜೀನಾಮೆ ನೀಡಬೇಕು ಮತ್ತು ನ್ಯಾಯಂಗ ತನಿಖೆಯಾಗಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷ್ಯೆ ಪುಷ್ಪ ಅಮರನಾಥ್ ಆಗ್ರಹಿಸಿದರು.

ಬಿ.ಜೆ.ಪಿ. ಸರ್ಕಾರ ಬಡವರ ಜನ ವಿರೋಧಿ ಸರ್ಕಾರ. ಮೈ ನ ಕಾವುಂಗ, ಕಿಸೀಕೊ ಕಾನೆ ನಹೀ ದೂಂಗಾ ಎನ್ನುವ ಪ್ರಧಾನಿ ನರೇಂದ್ರ ಮೋದಿರವರಿಗೆ ನೈತಿಕತೆ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿರುದ್ದ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ರೇಸ್ ಕೋರ್ಸ್ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ್ಯೆ ವಿಮಲ ವೆಂಕಟ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಮತ್ತು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಆನಂದ್ ಮತ್ತು ಜಿಲ್ಲಾ ಕೇಂದ್ರ ಸಮಿತಿ ಅಧ್ಯಕ್ಷರಾದ ಆಗಸ್ಟೀನ್ ಹಾಗೂ ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾಡಿದ ವಿಜಯ ಆನಂದ್, ಬಿ.ಜೆ.ಪಿ. ಸರ್ಕಾರ ಹಗರಣಗಳ ಸರ್ಕಾರ, ಜನವಿರೋಧಿ ಸರ್ಕಾರವಾಗಿದೆ. ಬಡ ಶಾಲಾ ಮಕ್ಕಳ ಮೊಟ್ಟೆ ಖರೀದಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಕೂಡಲೆ ಮೊಟ್ಟೆ ಖರೀದಿ ಅವ್ಯವಹಾರದ ಕುರಿತು ನ್ಯಾಯಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Leave a Reply