ಬೆಂಗಳೂರು: ಅಸಹಜ ಸಾವುಗಳ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳದ ಪ್ರಕರಣದ ಬಗ್ಗೆ ಪರ ಮತ್ತು ವಿರೋಧದ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಬೆಂಬಲಿಸಿ ಬಿಜೆಪಿ ಕಾರ್ ಯಾತ್ರೆ ನಡೆಸಿತು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಬೆಂಗಳೂರಿನ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು 30 ಮಂದಿ ಶಾಸಕರು ಯಲಹಂಕ ದಿಂದ ಧರ್ಮಸ್ಥಳಕ್ಕೆ ತೆರಳಿದರು.
ರ‍್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಈ ಯಾತ್ರೆ ಧರ್ಮಸ್ಥಳ ತಲುಪಿದ್ದು ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಿದೆ. ನಾಳೆ ಬೆಳಗ್ಗೆ ಇವರೊಂದಿಗೆ ವಿಧಾನ ಮಂಡಲದ ಉಭಯ ಸದನಗಳ ವಿಪಕ್ಷ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪಕ್ಷದ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವರು ಸೇರ್ಪಡೆಯಾಗಲಿದ್ದಾರೆ. ಆನಂತರ ಅಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿ ಧರ್ಮಸ್ಥಳದ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡಲಿದ್ದಾರೆ.
ಈ ಯಾತ್ರೆ ಹೊರಡುವ ಮುನ್ನ ಬುದ್ದಿಗಾರರೊಂದಿಗೆ ಮಾತನಾಡಿದ ಎಸ್ ಆರ್ ವಿಶ್ವನಾಥ್, ಅನಾಮಿಕನ ದೂರಿನ ಬಗ್ಗೆ ನಾವು ಎಸ್ಐಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೆವು. ಆದರೆ ಕೆಲವು ಹಿಂದೂ ವಿರೋಧಿ ಮತ್ತು ಧರ್ಮಸ್ಥಳ ವಿರೋಧಿ ಯೂಟ್ಯೂಬರ್ಗಳು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಹಾಗಾಗಿ ನಾವು ಇದರ ವಿರುದ್ಧ ಧ್ವನಿ ಎತ್ತಿದ್ದೇವೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಮಂಜುನಾಥ ಸ್ವಾಮಿಗೆ ಕಳಂಕ ತರುವ ಹುನ್ನಾರ ನಡೆಯುತ್ತಿದೆ. ಈ ಹಿನ್ನೆಲೆ ನಾವು ಧರ್ಮಸ್ಥಳ ಚಲೋಗೆ ಕರೆ ನೀಡಿದ್ದೇವೆ. ನಮ್ಮ ನಿರೀಕ್ಷೆ ಮೀರಿ ಜನ ಬಂದಿದ್ದಾರೆ ಎಂದರು.
ಕಾರು ಯಾತ್ರೆ ಬೆಂಗಳೂರು ಬಿಡುತ್ತಿದ್ದಂತೆ ನೆಲಮಂಗಲ ಸಮೀಪ ಮತ್ತಷ್ಟು ಕಾರುಗಳು ಇದಕ್ಕೆ ಸೇರ್ಪಡೆಯಾದವು ದಾರಿಯುದ್ದಕ್ಕೂ ಯಾತ್ರೆಗೆ ಭಾರಿ ಸ್ವಾಗತ ಸಿಕ್ಕಿತು.
ರ‍್ಯಾಲಿಗೆ ಬೂವನಹಳ್ಳಿ ಬೈಪಾಸ್‍ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಸ್ವಾಗತ ಕೋರುತ್ತಿದ್ದಂತೆ `ಧರ್ಮಸ್ಥಳದೊಂದಿಗೆ ನಾವಿದ್ದೇವೆ’ ಎಂಬ ಘೋಷ ವಾಕ್ಯವನ್ನು ಕಾರ್ಯಕರ್ತರು ಮೊಳಗಿಸಿದರು.
ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ಪ್ರಕರಣದಲ್ಲಿ ಸರ್ಕಾರ ದೊಡ್ಡ ತಪ್ಪು ಮಾಡಿದೆ ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಧರ್ಮಸ್ಥಳ ಧರ್ಮದ ದೇವಸ್ಥಾನ, ಪವಿತ್ರ ಸ್ಥಳ.ಇಲ್ಲಿ ಸಾಮಾನ್ಯ ಜನರೂ ಭಕ್ತಿಯಿಂದ ಬೇಡಿಕೊಳ್ತಾರೆ. ಈ ಪ್ರಕರಣದಲ್ಲಿ ಧಾರ್ಮಿಕ ಸ್ಥಳದ ಬಗ್ಗೆ ತಪ್ಪು ವಿಚಾರ ಅಪಮಾನ ಮಾಡೋ ರೀತಿ ಅಪಪ್ರಚಾರ ಮಾಡಿದ್ದಾರೆ. ಈ ಮೊದಲು ಇದೇ ಗುಂಪು ಶಬರಿಮಲೆಯಲ್ಲಿ ಕೆಲಸ ಮಾಡಿತು. ಆಗ ಏನು ಪ್ರಯೋಜನ ಆಗಲಿಲ್ಲ. ಶಬರಿಮಲೆಗೆ ಇನ್ನಷ್ಟು ಭಕ್ತರು ಜಾಸ್ತಿ ಆದರು. ಈಗ ಅದೇ ಗುಂಪು ಧರ್ಮಸ್ಥಳಕ್ಕೆ ಬಂದಿದೆ ಎಂದರು.
ಧರ್ಮಸ್ಥಳ ಕೇಸ್‌ನಲ್ಲಿ ಕೆಲವರು ಕಮ್ಯೂನಿಸ್ಟ್ ಇದ್ದಾರೆ. ಇವರಿಂದ ಕಾಂಗ್ರೆಸ್ ಇವತ್ತು ಕಮ್ಯೂನಿಸ್ಟ್ ಕಾಂಗ್ರೆಸ್ ಆಗಿದೆ. ಸಿಎಂ ಸುತ್ತಲೂ ಕಮ್ಯೂನಿಸ್ಟ್ ತುಂಬಿದ್ದಾರೆ. ಕಾಂಗ್ರೆಸ್ ಕಮ್ಯೂನಿಸ್ಟರ ಮೂಲಕ ಅವರ ಸಿದ್ಧಾಂತ ಜಾರಿ ಮಾಡುತ್ತಿದ್ದಾರೆ. ಅನಾಮಿಕ ವ್ಯಕ್ತಿ ಅಂತ 13 ಸ್ಥಳ ಗುರುತು ಮಾಡಿದರೂ ಏನು ಸಿಗಲಿಲ್ಲ. ಕಾನೂನು ಪ್ರಕಾರ ಇಂತಹ ಕೇಸ್‌ನಲ್ಲಿ ಅನಾಮಿಕ ಹೇಳಿಕೆ ಕೊಟ್ಟರೆ ಮೊದಲು ಅರೆಸ್ಟ್ ಮಾಡಿ ಎಫ್‌ಐಆರ್ ಹಾಕಿ ಜೈಲಿಗೆ ಹಾಕಬೇಕು. ಅಮೇಲೆ ತನಿಖೆ ಮಾಡಬೇಕಿತ್ತು. ಆದರೆ ಈ ಸರ್ಕಾರ ಅನಾಮಿಕನನ್ನ ಚಾಂಪಿಯನ್ ಮಾಡಿದ್ದಾರೆ. ಎಸ್‌ಐಟಿಗೆ ಆ ಅನಾಮಿಕನೇ ಮುಖ್ಯಸ್ಥ. ಎಸ್‌ಐಟಿ ಅವರು ಅನಾಮಿಕನ ಕೈ ಕೆಳಗೆ ಕೆಲಸ ಮಾಡ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಆರ್‌ಸಿಬಿ ಕಪ್ ಗೆದ್ದಾಗ ಮುಂದಾಲೋಚನೆ ಇಲ್ಲದೆ ಕಾರ್ಯಕ್ರಮ ಮಾಡಿದ ತಪ್ಪಿಗೆ 11 ಜನರ ಸಾವಾಯ್ತು. ಇಂತಹ ತಪ್ಪು ಮಾಡಿದ ಸರ್ಕಾರ ಈಗ ಇನ್ನೊಂದು ಎಡವಟ್ಟು ಮಾಡಿಕೊಂಡಿದೆ ಎಂದರು.




