ಎಂಟಕ್ಕೇರಿದ ಸಾವಿನ ಸಂಖ್ಯೆ

4 years ago

ಬೆಳಗಾವಿ: ಕಣಬರಗಿ ಸಮೀಪದ  ಕಲ್ಯಾಳ ಸೇತುವೆಗೆ ಡಿಕ್ಕಿ ಹೊಡೆದು  ಕಳಸಾ ಬಂಡೂರಿ ನಾಲೆಗೆ ಬಿದ್ದ  ಕ್ರೂಸರ್  ಅಪಘಾತದ ಏಳು ಜನ ಸಾವು ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಕೂಲಿ ಕಾರ್ಮಿಕ  ಕಿರಣ ಕಳಸನ್ನವರ್ ಚಿಕಿತ್ಸೆ ಫಲಕಾರಿಯಾದೇ ಇಂದು ಸಾವನ್ನಪ್ಪಿದ್ದಾನೆ.

ಕಳೆದ ಭಾನುವಾರ ಬೆಳಿಗ್ಗೆ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಿಂದ ಕೂಲಿ ಕಾರ್ಮಿಕರನ್ನು ಹೊತ್ತು   ಸಾಂಬ್ರಾ ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದ ಕ್ರೂಸರ್ ಅಪಘಾತ ಬೆಳಗಾವಿ ಜಿಲ್ಲೆಯನ್ನು ಬೆಚ್ಚಿಬಿಳಿಸಿತ್ತು.

ಇನ್ನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುದುವರೆದಿದೆ.

Leave a Reply