ಯರಗಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ ಟೊಪೋಜಿಯವರ ಜನ್ಮ ದಿನದಂದು ಯೂನಿವರ್ಸಿಟಿ ಬ್ಲೂ ಆಗಿರುವ ಕಾರಣಕ್ಕೆ ನೇಹಾಳನ್ನು ಹತ್ಯೆ ಮಾಡಿದ ಫಯಾಜ್ ನನ್ನು ಸತ್ಕರಿಸಲಾಗಿತ್ತು. ಆ ಸಂದರ್ಭದಲ್ಲಿ ಆತ ಮಾತ್ರವಲ್ಲ ಇನ್ನೂ ಅನೇಕ ಸಾಧಕರನ್ನು ಗೌರವಿಸಿ ಸತ್ಕರಿಸಲಾಗಿತ್ತು. ಆತನ ಸಾಧನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸತ್ಕರಿಸಿದ್ದ ಚಿತ್ರವನ್ನು ಇಟ್ಟುಕೊಂಡು ಈಗ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಚನ್ನರಾಜ ಹಟ್ಟಿಹೊಳಿ ಹಾಗೂ ಕಾಂಗ್ರೆಸ್ ನಾಯಕರ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ.
- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟ್ ಕುರಿತು ಯೋಗೇಶ್ ಮಾಸ್ಟರ್ ಸ್ಪಷ್ಟೀಕರಣ
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ದೀರ್ಘಾವಧಿ ಯೋಜನೆ: ಕೃಷ್ಣ ಬೈರೇಗೌಡ
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
ಯಾವುದೋ ಹಳೆಯ ಫೋಟೋವೊಂದನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ತೇಜೋವಧೆ ಮಾಡುವ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬರಬಾರದಾಗಿತ್ತು.
ನಮ್ಮ ನಾಯಕರು ಅಂದು ಆತನ ಸಾಧನೆಯನ್ನು ಮೆಚ್ಚಿ ಸತ್ಕರಿಸಿದ್ದು ಎಷ್ಟು ಸತ್ಯವೋ ಇಂದು ಆತನ ದುಷ್ಕೃತ್ಯವನ್ನು ಖಂಡಿಸಿದ್ದು ಕೂಡ ಅಷ್ಟೇ ಸತ್ಯ.
ಹಂತಕನ ಹೆಡೆಮುರಿ ಕಟ್ಟುವ ವಿಚಾರದಲ್ಲಿ ಹಿಂಜರಿಯುವ ಮಾತೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸುವುದರ ಜೊತೆಗೆ ಈ ರೀತಿ ಕೀಳು ರಾಜಕೀಯ ಮಾಡುವ ಮನಸ್ಥಿತಿಗೆ ವಿಷಾದ ವ್ಯಕ್ತಪಡಿಸುತ್ತೇವೆ.




