ಎಂ.ಬಸವಪುನ್ನಯ್ಯ ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ಧಾಂತಿಕ ಮೇರು ವ್ಯಕ್ತಿ: ಡಾ.ಕೃಷ್ಣಪ್ಪ ಕೊಂಚಾಡಿ

4 years ago

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರರೂ, ತೆಲಂಗಾಣ ರೈತ ಹೋರಾಟದ ರೂವಾರಿಯಾಗಿದ್ದ ಎಂ.ಬಸವಪುನ್ನಯ್ಯ ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ದಾಂತಿಕ ನಿರೂಪಣೆಯ ಮೇರು ವ್ಯಕ್ತಿ ಎಂದು ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಅಭಿಪ್ರಾಯ ಪಟ್ಟರು.

ಸ್ವಾತಂತ್ರ್ಯ ಹೋರಾಟಗಾರರೂ, CPIM ಸಂಸ್ಥಾಪಕ ನವರತ್ನಗಳಲ್ಲಿ ಒಬ್ಬರಾದ ಕಾಂ.ಬಸವಪುನ್ನಯ್ಯರವರ 30ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದ ಮಾತಾಡಿದ ಅವರು, ಬಂಡವಾಳಶಾಹಿ ಸಿದ್ದಾಂತಕಾರರಿಗೆ ಸಿಂಹಸ್ವಪ್ನರಾಗಿದ್ದ ಎಂ.ಬಸವಪುನ್ನಯ್ಯರವರು CPIM ಪಕ್ಷ ರೂಪೀಕರಣದ ನವರತ್ನಗಳೆಂಬ 9 ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಕಮ್ಯುನಿಸ್ಟ್ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ ಇವರು, 14 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಪ್ರಖರ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ದಲಿತ ಹಕ್ಕುಗಳ ಸಮಿತಿಯ ನಗರಾಧ್ಯಕ್ಷ ರಾಧಾಕೃಷ್ಣ ಬೊಂಡಂತಿಲ ಮಾತನಾಡಿ, ಬ್ರಿಟೀಷ್ ಸಾಮ್ಯಾಜ್ಯಶಾಹಿಗಳ ವಿರುದ್ದದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಎಂ.ಬಸವಪುನ್ನಯ್ಯರವರು ರೈತ ಕಾರ್ಮಿಕರ ಹೋರಾಟವನ್ನು ಸ್ವಾತಂತ್ರ್ಯ ಚಳುವಳಿಯೊಂದಿಗೆ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರೆ, ಯೋಗೀಶ್ ಜಪ್ಪಿನಮೊಗರು ವಂದಿಸಿದರು.

Leave a Reply