ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕ ಡಾ.ರಾಜಪ್ಪ ದಳವಾಯಿಯವರದು ಬಹುಮುಖಿ ವ್ಯಕ್ತಿತ್ವ. ಚಿತ್ರಕಲೆ, ಕತೆ, ಕವಿತೆ, ವಿಮರ್ಶೆ, ನಾಟಕ ಮತ್ತು ರಂಗಗೀತೆಗಳ ರಚನೆ ಹಾಗೂ ನಟನೆ, ಪ್ರಕಾಶನ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 4 ದಶಕಗಳಷ್ಟು ಅಪಾರ ಅನುಭವ ಅವರಿಗಿದೆ.
ಡಾ.ರಾಜಪ್ಪ ದಳವಾಯಿಯವರ ಸಮಗ್ರ ನಾಟಕಗಳು ಮತ್ತು ಪ್ರೀತಿಯ ದಳವಾಯಿ ಮೇಷ್ಟ್ರು ಇತ್ತೀಚೆಗೆ ಬಿಡುಗಡೆಯಾಗಿವೆ. ಅವರ “ಕನ್ನಡ ಸಾಹಿತ್ಯ ಕೋಶ” ಅಸಂಖ್ಯಾತ ಜನರ ಬದುಕನ್ನು ರೂಪಿಸಿದ ಕೃತಿ. ಇದರ ಲಾಭ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕ, ಪ್ರೌಢ ಶಾಲಾ ಶಿಕ್ಷಕ, ಎಸ್.ಡಿ.ಎ, ಎಫ್.ಡಿ.ಎ, ಕೆ. ಎ. ಎಸ್, ಐ. ಎ.ಎಸ್. ಮಾಡಿಕೊಂಡಿರುವವರು ಮತ್ತು ಇನ್ನಿತರ ಹುದ್ದೆಗಳು ಹಾಗೂ ನೆಟ್, ಜೆ.ಆರ್.ಎಫ್ ಮತ್ತು ಸ್ಲೆಟ್ ಪಾಸ್ ಆಗಿ ಜೀವನ ರೂಪಿಸಿಕೊಂಡ ಲಕ್ಷಾಂತರ ಜನರಿದ್ದಾರೆ.
ಹೀಗೆ ಜೀವನ ರೂಪಿಸಿಕೊಂಡವರು ತಮ್ಮ ಅನುಭವವನ್ನು ಹೇಳಿಕೊಳ್ಳಲು ಅವಕಾಶವಾಗಿಲ್ಲ. ಈ ಹಿನ್ನೆಲೆಯಲ್ಲಿ “ಕನ್ನಡ ಸಾಹಿತ್ಯ ಕೋಶ” ಕೃತಿ ಮತ್ತು ರಾಜಪ್ಪ ದಳವಾಯಿಯವರ ವ್ಯಕ್ತಿತ್ವದ ಕುರಿತ ಲೇಖನವನ್ನು ಕಳುಹಿಸಬಹುದು. ಜೊತೆಗೆ, ಕುವೆಂಪು ವಿವಿ, ಮೈಸೂರು ವಿವಿ, ಮಂಡ್ಯ ಪಿಜಿ ಸೆಂಟರ್, ಬೆಂಗಳೂರು ವಿವಿ, ತುಮಕೂರು ವಿವಿ, ಕಲಬುರ್ಗಿ ವಿವಿ, ಬೆಳಗಾವಿ ವಿಶ್ವವಿದ್ಯಾಲಯದ ಒಡನಾಡಿಗಳು ಕೂಡ ದಳವಾಯಿಯವರ ವ್ಯಕ್ತಿತ್ವ ಮತ್ತು ಕೃತಿ ಕುರಿತ ಲೇಖನಗಳನ್ನು ಕಳುಹಿಸಲು ಅವಕಾಶವಿದೆ.
ಸೂಚನೆಗಳು: 1. ದಿನಾಂಕ 31/12/2022ರ ಒಳಗೆ ಕಳುಹಿಸಬಹುದು. 2. ಕಡ್ಡಾಯವಾಗಿ ನುಡಿಯಲ್ಲಿ ಟೈಪ್ ಮಾಡಿ ಕೆಳಗಿನ ಈ-ಮೇಯ್ಲ್ ವಿಳಾಸಕ್ಕೆ ಕಳುಹಿಸಬೇಕು.
ಈ-ಮೇಯ್ಲ್ ವಿಳಾಸ: ravi71.iti@gmail.com




