ಆರಗ ಜ್ಞಾನೇಂದ್ರ ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ: ಕೆಪಿಸಿಸಿ

3 years ago

#AragaGyanendra #expresses #impatience #Dalits #among #BJP #KPCC

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಶ್ರೀ Mallikarjun Kharge ಅವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ Araga Jnanendra ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕೆಪಿಸಿಸಿ ಹೇಳಿದೆ.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನೀಡಿರುವ ಮೈಬಣ್ಣ ಕುರಿತ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ ಎಂದು ಖಂಡಿಸಿದೆ.

ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ, ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ  ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ, ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ ಎಂದು ಕಿಡಿಕಾರಿದೆ.

ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.

ಬಿಸಿಲು ನಾಡಿನ ಉತ್ತರ ಕರ್ನಾಟಕದ ಜನರನ್ನು, ಕಪ್ಪು ಬಣ್ಣದವರನ್ನು, ದಲಿತರನ್ನು ಬಿಜೆಪಿ ತುಚ್ಚವಾದ ದೃಷ್ಟಿಯಲ್ಲಿ ನೋಡುತ್ತದೆ ಎನ್ನುವುದಕ್ಕೆ Araga Jnanendra ಅವರ ಕೀಳು ಮಟ್ಟದ ಹೇಳಿಕೆಯೇ ಸಾಕ್ಷಿ ಎಂದಿದೆ.

ಬಿಸಿಲುನಾಡಿನ ಶ್ರಮಜೀವಿಗಳು ಕಪ್ಪು ಬಣ್ಣದಲ್ಲಿರುವುದು ಭ್ರಷ್ಟಾಚಾರದ ಹಣದಿಂದ ಎಸಿ ಮನೆಯಲ್ಲಿರುವ ಬಿಜೆಪಿಗರಿಗೆ ನೋಡಲಾಗುತ್ತಿಲ್ಲವೇ? ಉತ್ತರ ಕರ್ನಾಟಕದವರನ್ನು ಪ್ರತ್ಯೇಕತಾ ಭಾವನೆಯಲ್ಲಿ ನೋಡುತ್ತಿರುವ ಬಿಜೆಪಿಗೆ ಅಲ್ಲಿನ ಜನರ ಮತಗಳು ಮಾತ್ರ ಬೇಕೇ? ಎಂದು ಪ್ರಶ್ನಿಸಿದೆ.

BJP Karnataka ಗೆ ಉತ್ತರ ಕರ್ನಾಟಕದ ಜನರ ಬಗ್ಗೆ, ದಲಿತರ ಬಗ್ಗೆ, ಕಪ್ಪುವರ್ಣದವರ ಬಗ್ಗೆ ನಿಜಕ್ಕೂ ಗೌರವ ಇದ್ದಿದ್ದೇ ಆದರೆ ಎಐಸಿಸಿ ಅಧ್ಯಕ್ಷರಾದ Mallikarjun Kharge ಅವರನ್ನು, ಅರಣ್ಯ ಸಚಿವರಾದ Eshwar Khandre ಅವರನ್ನು ಹಾಗೂ ಉತ್ತರ ಕರ್ನಾಟಕದ ಜನತೆಯನ್ನು ಅತ್ಯಂತ ಕೀಳು ಅಭಿರುಚಿಯ ಮಾತುಗಳಿಂದ ಅವಮಾನಿಸಿದ Araga Jnanendra ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು.ಅವರ ಹೇಳಿಕೆಗೆ ಬಿಜೆಪಿ ಪಕ್ಷ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರೊ.ಪುರುಷೋತ್ತಮ ಬಿಳಿಮಲೆ, ಅರಗ ಜ್ಞಾನೇಂದ್ರ ಅವರು ಖರ್ಗೆ ಮೊದಲಾದವರ ಬಗ್ಗೆ ಹೇಳಿದ ಮಾತುಗಳು ಜನಾಂಗ ದ್ವೇಷದಿಂದ ( racist)  ಕೂಡಿದೆ. ಅವರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದ್ದು ತುರ್ತು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply