ದಾವಣಗೆರೆ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ, ಪಿಎಂ-ಅಭಿಯಾನ ಕಾರ್ಯಕ್ರಮದಡಿ 4 ಆಯುಷ್ಮತಿ ಕ್ಲಿನಿಕ್ಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಚ್.ಕೆ.ಆರ್ ನಗರ, ಎಸ್.ಎಂ.ಕೆ ನಗರ, ಭಾಷ ನಗರ ಹಾಗೂ ದೊಡ್ಡಪೇಟೆ ಇಲ್ಲಿ ಮಂಜೂರಾಗಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಸಮಾಲೋಚನೆ ಅಧಾರದಲ್ಲಿ 2025 ರ ಮಾರ್ಚ್ 31 ರವರೆಗೆ ಹಾಗೂ 2025-26 ನೇ ಸಾಲಿನ ಪಿ.ಐ.ಪಿ ಅನುಮೋದನೆ ನಿರೀಕ್ಷಿಸಿ ತಾತ್ಕಾಲಿಕ ನೇಮಕಾತಿ ಮಾಡಲು ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಪದವಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಹುದ್ದೆಯ ವಿವರ: ಸ್ತ್ರೀ ರೋಗ ತಜ್ಞರು ಹುದ್ದೆ- 4, ಮೂಳೆ ಮತ್ತು ಕೀಲು ತಜ್ಞರು ಹುದ್ದೆ- 4, ಶಸ್ತ್ರ ಚಿಕಿತ್ಸಾ ತಜ್ಞರು ಹುದ್ದೆ- 4, ಮಕ್ಕಳ ತಜ್ಞರು ಹುದ್ದೆ- 4, ಚರ್ಮ ರೋಗ ತಜ್ಞರು ಹುದ್ದೆ- 4, ಫಿಜಿಷಿಯನ್ ಹುದ್ದೆ- 4 ಮನರೋಗ ತಜ್ಞರು ಹುದ್ದೆ- 4, ಕಿವಿ, ಮೂಗು ಮತ್ತು ಗಂಟಲು ತಜ್ಞರು ಹುದ್ದೆ- 4
ತಜ್ಞ ವೈದ್ಯರು ಗರಿಷ್ಠ 70 ವರ್ಷ ವಯೋಮಾನದವರಾಗಿರಬೇಕು. ಅರ್ಜಿಗಳನ್ನು ಜುಲೈ 30ರಂದು ಬೆಳಗ್ಗೆ 10 ರಿಂದ 2 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಚೇರಿ, ಶ್ರೀರಾಮನಗರ ರಸ್ತೆ, ದಾವಣಗೆರೆ ಎಸ್.ಎಸ್.ಆಸ್ಪತ್ರೆ ಹಿಂಭಾಗ, ಎನ್.ಸಿ.ಸಿ.ಕ್ಯಾಂಪ್ ಪಕ್ಕ, ದಾವಣಗೆರೆ ಇಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು.
ಇದೇ ದಿನ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಸಂಜೆ 5-00 ಗಂಟೆಗೆಯೊಳಗೆ ಕಚೇರಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9449843195 ಗೆ ಸಂಪರ್ಕಿಸಬಹುದು.



