ಪೊಲೀಸ್ ನಿರೀಕ್ಷಕನಾದ ಎಂಟು ವರ್ಷದ ಪೋರ!

3 years ago

#eight #year #old #boy #became #police #inspector #azankhan #shivamogga #humanity

ಶಿವಮೊಗ್ಗ: ಪೊಲೀಸರೆಂದರೆ ಎಲ್ಲರೂ ಮೂಗು ಮುರಿಯುವವರೇ. ಅವರ ಮೇಲೆ ಅನೇಕ ಬಾರಿ ಇಲ್ಲಸಲ್ಲದ ಆರೋಪ ಮಾಡಿ, ರಾಕ್ಷಸರ ರೀತಿ ತೋರಿಸಿಸುವವರು, ಅಭಿಪ್ರಾಯ ರೂಪಿಸುವವರೇ ಹೆಚ್ಚು. ಆದರೆ, ಇಲ್ಲೊಂದು ಕತೆ ಇದೆ ನೋಡಿ. ಪೊಲೀಸರು ಮಾನವೀಯತೆಯನ್ನು ಮೆರೆದಿರುವ ಸಂಗತಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಅವನು ಎಂಟೂ ವರೆ ವರ್ಷದ ಎಳೆಯ ಬಾಲಕ. ಇವನ ಹೆಸರು ಆಜಾನ್ ಖಾನ್. ತಂದೆ ತಬ್ರೇಜ್ ಖಾನ್. 1ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಪೋರನ ವಾಸಸ್ಥಳ ವಾಸ ಸೂಳೆಬೈಲು. ಹಾಲಿ ಶಿವಮೊಗ್ಗ ನಗರದ ಎನ್ ಆರ್ ಪುರ ರಸ್ತೆಯಲ್ಲಿ. ಈ ಬಾಲಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ. ಇವನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕು ಎಂಬ ಮಹದಾಸೆ.

ಈ ಹೃದ್ರೋಗದಿಂದ ಬಳಲುತ್ತಿರುವ ಪೋರನ ಆಸೆಯನ್ನು ಕೇಳಿದ ಶಿವಮೊಗ್ಗ ಎಸ್.ಪಿ. ಕಚೇರಿಯ ಪೊಲೀಸ್ ಅಧಿಕಾರಿಗಳು ಅವನ ಆಸೆ ಈಡೇರಿಸಲು ಮುಂದಾಗಿದ್ದಾರೆ. ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ದಿನಾಂಕ 16.08.2023 ರಂದು ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ನಿಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಎಳೆಯ ಬಾಲಕನ ಮತ್ತು ಅವನ ಪೋಷಕರ ಆಸೆಯೊಂದನ್ನು ಈಡೇರಿಸಿ ಕೃತಾರ್ಥ ಭಾವ ಮೂಡಿಸಿದ್ದಾರೆ.

ಮಾನವೀಯತೆ ಇನ್ನೂ ಸತ್ತಿಲ್ಲ ಎನ್ನುವುದಕ್ಕೆ ಇಂತಹ ಘಟನೆಗಳು ಉದಾಹರಣೆಗಳಲ್ಲವೇ? ಕೋಮು ಸೌಹಾರ್ಧತೆಗೂ ಈ ಚಿಕ್ಕ ಘಟನೆ ಪೂರಕವಾಗಿದೆಯಲ್ಲವೇ?

Leave a Reply