ಬಾಗಲಕೋಟೆ: ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ಜಿಲ್ಲಾ ತಾಲ್ಲೂಕು ಹೋಬಳಿ ಮಟ್ಟದಲ್ಲಿ ರೆಡ್ಡಿ ಸಮಾಜವನ್ನು ಒಂದುಗೂಡಿಸುವ ಹಾಗೂ ಸಮಾಜದ ಸರ್ವತೋಮುಖ ಅಭಿವದ್ಧಿಗೆ ಮತ್ತು ಸಂಘಟನೆಗೆ ಒತ್ತು ನೀಡುತ್ತಿರುವ ಅಖಿಲ ಭಾರತ ರೆಡ್ಡಿ ಒಕ್ಕೂಟದ ರಾಜ್ಯಘಟಕದ ಕಾರ್ಯ ಶ್ಲಾಘನೀಯ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು
ಇತ್ತೀಚೆಗೆ ಬಾಗಲಕೋಟೆಗೆ ಆಗಮಿಸಿದ ವೇಳೆ ಅಖಿಲ ಭಾರತ ರೆಡ್ಡಿ ಒಕ್ಕೂಟದ ಜಿಲ್ಲಾ ಘಟಕದ ಹಿರಿಯರು ಹಾಗೂ ಪದಾಧಿಕಾರಿಗಳು ಮತ್ತು ಯುವಕ ಮಿತ್ರರು ಸನ್ಮಾನಿಸಿ, ಸಮಾಜದ ಸಂಘಟನೆ ಬಗ್ಗೆ ಸುದೀರ್ಘ ಕಾಲ ಚರ್ಚೆನಡೆಸಿ ಮಾತಾಡಿದ ಅವರು, ಅಖಿಲ ಭಾರತ ರೆಡ್ಡಿ ಒಕ್ಕೂಟಕ್ಕೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಮತ್ತು ಅಖಿಲ ಭಾರತ ರೆಡ್ಡಿ ಒಕ್ಕೂಟ ಸಂಘಟನೆಯ ಸಲುವಾಗಿ ನಾನೂ ಕೂಡ ಸದಾ ನಿಮ್ಮ ಜತೆಗಿರುತ್ತೇನೆ ಎಂದರು.
ಸನ್ಮಾನ ಕಾರ್ಯಕ್ರಮದಲ್ಲಿ ಶೇಖರ್ ಅರಳಿಮಟ್ಟಿ, ಶಂಕರ್ ರೆಡ್ಡಿ, ಮಲ್ಲಿಕಾರ್ಜುನ ಬಿರಾದಾರ್ ವೆಂಕಟೇಶ್ ಹಾಗೂ ಇನ್ನಿತರ ಸಂಘದ ಪ್ರಮುಖರು ಭಾಗವಹಿಸಿದ್ದರು.



