ಕಾಂಗ್ರೆಸ್ ಸೇವಾದಳ ಉಪಾಧ್ಯಕ್ಷೆ ಗಿರಿಜಾ ಎಸ್. ಹೂಗಾರಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಟಿಕೇಟು ನೀಡುವಂತೆ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಒತ್ತಾಯ
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಉಪಾಧ್ಯಕ್ಷೆ ಗಿರಿಜಾ ಎಸ್. ಹೂಗಾರರವರು ಕಳೆದ 28 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಅಧ್ಯಕ್ಷ ಅರವಿಂದ್ ಹೇಳಿದರು.
ಗಿರಿಜಾ ಎಸ್.ಹೂಗಾರ ರವರು ಮಹಿಳಾ ಪರ ಹೋರಾಟಗಾರ್ತಿ, ಅತ್ಯಂತ ಹಿಂದುಳಿದ ಸಮುದಾಯದ ಹೂಗಾರ ಸಮುದಾಯಕ್ಕೆ ಸೇರಿದವರು. ಆರ್ಥಿಕವಾಗಿ ಹಿಂದುಳಿದ ಸಮಾಜದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಆಶಯದಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಜನಸೇವೆಯೆ ನನ್ನ ಉಸಿರು ಎಂಬಂತೆ ಸಾರ್ವಜನಿಕರ ಸಮಸ್ಯೆಗಳು ಇದ್ದಲ್ಲಿ ತತಕ್ಷಣ ಬಂದು ಸಮಸ್ಯೆಗಳ ನಿವಾರಣೆಗಾಗಿ ಶ್ರಮವಹಿಸುತ್ತಾರೆ ಎಂದರು.
ಕಾಂಗ್ರೆಸ್ ಸೇವಾ ದಳದಿಂದ ಗಿರಿಜಾ ಎಸ್. ಹೂಗಾರರವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ, ಉಚಿತ ಆರೋಗ್ಯ ಶಿಬಿರ ಮತ್ತು ಪ್ರತಿವರ್ಷ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಿಂದ ಹುಬ್ಬಳ್ಳಿ-ಧಾರವಾಡದ ಮನೆ ಮಗಳಂತೆ ಆಗಿದ್ದಾರೆ ಎಂದರು.
2023ನೇ ವಿಧಾನಸಭಾ ಚುನಾವಣೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸೇವಾದಳದ ಉಪಾಧ್ಯಕ್ಷೆಯಾದ ಗಿರಿಜಾ ಎಸ್. ಹೂಗಾರ ಅವರಿಗೆ ನೀಡಬೇಕು ಎಂದು ಸ್ಥಳೀಯ ಮತದಾರರು, ಕಾಂಗ್ರೆಸ್ ಪಕ್ಷದವರ ಅಭಿಪ್ರಾಯವಾಗಿದೆ ಎಂದರು.

ಅಖಿಲ ಕರ್ನಾಟಕ ಹೂಗಾರ ಮಹಾಸಭಾ ವತಿಯಿಂದ ಗಿರಿಜಾ ಎಸ್. ಹೂಗಾರರವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೇಟು ನೀಡಬೇಕುಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗಿರಿಜಾ ಎಸ್. ಹೂಗಾರ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಪಕ್ಷದ ಸಿದ್ಧಾಂತವನ್ನು ಮನೆಮನೆಗಳಿಗೆ ತಲುಪುವಂತೆ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಯ ಜನವಿರೋಧಿ, ದುರಾಡಳಿತದ ವಿರುದ್ಧ ಜನಜಾಗೃತಿ ಜೊತೆಯಲ್ಲಿ ಸತತ ಹೋರಾಟ ಮಾಡುತ್ತಿದ್ದೇನೆ ಎಂದರು.
ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಮತ್ತು ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು, ರಾಜ್ಯ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ರಾಮಚಂದ್ರರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳಕ್ಕೆ ಇನ್ನೂ ಹೆಚ್ಚಿನ ಸಂಘಟನೆ, ಶಕ್ತಿ ತುಂಬುತ್ತೇನೆ ಎಂದರು.



