ಬೆಂಗಳೂರು: ಮಂಗಳೂರು ಬ್ಯಾಂಕ್ ದರೋಡೆ ಹಾಗೂ ಬೀದರ್ ಎಟಿಎಂ ಹಣ ದರೋಡೆ ಪ್ರಕರಣದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮತ್ತು ಬೀದರ್ ಎರಡೂ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಿದ್ದೇವೆ ಎಂದರು.
ಮಂಗಳೂರು ಪ್ರಕರಣದಲ್ಲಿ ಎರಡು ಕಾರು ಬಂದಿರುವ ಮಾಹಿತಿ ಇದೆ. ಎರಡು ಕೇಸ್ ನಲ್ಲಿ ನಿಖರ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈಗಾಗಲೇ ನಾಲ್ಕೈದು ತಂಡಗಳನ್ನು ವಿವಿಧ ರಾಜ್ಯಗಳಿಗೆ ಕಳಿಸಲಾಗಿದೆ. ಎರಡು ಪ್ರಕರಣದಲ್ಲಿ ಬೇರೆ ರಾಜ್ಯದವರು ಇದ್ದಾರೆ ಎನ್ನುವ ಮಾಹಿತಿ ಇದೆ. ಯಾರು ಏನು? ಎಲ್ಲಿಯವರು ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ ಎಂದರು.
ಈಗಾಗಲೇ ಗೃಹ ಇಲಾಖೆಯಿಂದ ಬ್ಯಾಂಕ್ ಮತ್ತು ಎಟಿಎಂಗಳಿಗೆ ಯಾವ ರೀತಿ ಭದ್ರತೆ ಇರಬೇಕು ಎನ್ನುವ ಮಾರ್ಗ ಸೂಚಿ ನೀಡಿದ್ದೇವೆ. ಎಲ್ಲಾ ಎಟಿಎಂ, ಬ್ಯಾಂಕ್ ಗಳಿಗೆ ಸೂಚನೆ ಹೋಗುತ್ತದೆ. ಎಟಿಎಂಗೆ ಹಣ ಹಾಕಲು ಬ್ಯಾಂಕ್ ನವರು ಗುತ್ತಿಗೆ ನೀಡಿರುತ್ತಾರೆ. ಎಟಿಎಂಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಗಾರ್ಡ್ ಇರಬೇಕು ಎನ್ನುವ ನಿಯಮ ಈಗಾಗಲೇ ಇದೆ. ಬೀದರ್ ಘಟನೆ ಆದಾಗ ಆರ್ಮ್ ಗಾರ್ಡ್ ಇರಲಿಲ್ಲ. ಹೀಗಾಗಿ ಘಟನೆ ಆಗಿದೆ. ಮಂಗಳೂರು ಬ್ಯಾಂಕ್ ದರೋಡೆಯಾದಾಗಲು ಕೂಡಾ ಗಾರ್ಡ್ ಇರಲಿಲ್ಲ ಎನ್ನುವ ಮಾಹಿತಿ ಇದೆ. ಹೀಗಾಗಿ ಇಲಾಖೆ ಕೊಟ್ಟ ರೂಲ್ಸ್‌ಗಳು ಲ್ಯಾಪ್ಸ್ ಆಗಬಾರದು. ಇಂತಹ ಅವಕಾಶಗಳಿಗೆ ಅಕ್ರಮ ಮಾಡೋರು ಕಾಯ್ತಾ ಇರುತ್ತಾರೆ. ಹೀಗಾಗಿ ಬ್ಯಾಂಕ್‌ನವರು ನಮ್ಮ ಜೊತೆ ಸಹಕಾರ ಕೊಡಬೇಕು ಎಂದು ಹೇಳಿದರು.




