ಕೊರೊನಾ ವಿರುದ್ಧ ಅಪಪ್ರಚಾರ ಮಾಡಿದ್ಯಾರು ಬಿಜೆಪಿ ನಾಯಕರೇ?
ಕೊರೊನಾ ಹೆಸರಿನಲ್ಲಿ ದೊಡ್ಡ ಭೂತವನ್ನು ಸೃಷ್ಟಿ ಮಾಡಿ ಬಿಟ್ಟಿದ್ದಾರೆ. ಬಹುತೇಕ ನಾನು ಕೇಳಿರುವ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಯಾರಿಗೆ ಥಂಡಿಯಾಗಿದೆ ಅವರೆಲ್ಲರಿಗೂ ಪಾಸಿಟಿವ್ ಬರುತ್ತೆ. ಯಾರಾದರೂ ಸೈಂಟಿಸ್ಟ್, ಡಾಕ್ಟರ್ ಗಂಟಲು ದ್ರವದಲ್ಲಿ ಕೊರೊನಾ ವೈರಸ್ ಇದೆ ಎಂದು ಹೇಳುತ್ತಾರೆಯೇ ಎಂದು ಅವರು ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಪ್ರಶ್ನಿಸಿದ್ದರು.
ಆರ್ಥಿಕ ಚಟುವಟಿಕೆಗಳು ಸತ್ತುಹೋಗುವ ಪರಿಸ್ಥಿತಿಗೆ ಬಂದುಬಿಟ್ಟಿವೆ. ಇದರ ಪರಿಣಾಮಗಳು ಗೊತ್ತಿರಲಿಲ್ಲ. ಆದ್ದರಿಂದ ಲಾಕ್ ಡೌನ್ ಮೊದಲಾದ ನಿಬಂಧನೆಗಳನ್ನೆಲ್ಲ ಮಾಡಬೇಕಾಯಿತು ಎಂದು ಅವರು ಹೇಳಿದ್ದರು.
ನಂತರದಲ್ಲಿ ಈಗ ಅಂದಾಜಾಗಿದೆ ಇದು ಜಸ್ಟ್ ಲೈಕ್ ಫ್ಲು. ನಮ್ಮಲ್ಲಿ ಫ್ಲೂ ಜ್ವರ ಬರ್ತದಲ್ಲ ಅಷ್ಟೇನೆ. ನಾಳೆ ಕೊರೊನಾ ಬಂತು ಎಂದು ಹೊರಗಡೆ ಇಡೋದಲ್ಲ. ನಮ್ಮ ಪಕ್ಕದಲ್ಲಿ ನಮ್ಮ ಮನೆಯಲ್ಲಿ ಎಲ್ಲಾ ಕಡೆ ನಾಳೆ ಕೊರೊನಾ ಬಂದರೆ ಆಶ್ಚರ್ಯ ಪಡಬೇಡಿ. ಏಕೆಂದರೆ ಇದು ಕಾಮನ್ ಆಗಿದೆ. ಹೆದರಬೇಕಾದ ಅಗತ್ಯ ಇಲ್ಲ. ಇದಕ್ಕೆ ಔಷಧಿ ಕೂಡ ಇದೆ. ನಮ್ಮ ದೇಶೀ ಔಷಧೀನೆ ಇದೆ ಇದಕ್ಕೆ. ಇದಕ್ಕೇನೋ ವ್ಯಾಕ್ಸಿನ್ ಬೇಕಂತ ಇಲ್ಲ. ನಮ್ಮಲ್ಲಿ ಗೊತ್ತಿಲ್ಲದಹಾಗೆ ನಾವೇ ಔಷಧಿ ಮಾಡಿಕೊಳ್ತಾ ಇದೀವಿ. ಅದು ನಮ್ಮನ್ನು ಪ್ರಿವೆಂಟ್ ಮಾಡುತ್ತಿದೆ ಎಂದಿದ್ದರು.
ಈ ಫಾರ್ಮಾಸುಟಿಕಲ್ ಲಾಬಿಗಳು ಮಾತ್ರ ಭಾರೀ ದೊಡ್ಡದಾಗಿ ಅದು ಹಾಗೆ ಅದು ಹೀಗೆ ವ್ಯಾಕ್ಸಿನ್ ಬರುತ್ತೆ ಅದು ಮಾಡ್ಕೋಬೇಕು ಇದು ಮಾಡ್ಕೋಬೇಕು ಯಾಕೆಂದ್ರೆ ಅವರಿಗೆ ದುಡ್ಡು ಮಾಡ್ಕೋಬೇಕು. ಅದಕ್ಕೋಸ್ಕರ ಈ ಭೂತಗಳನ್ನೆಲ್ಲ ಎಬ್ಬಿಸಿ ಕುಣಿಸ್ತಾ ಇದಾರೆ ಎಂದಿದ್ದರು.
ಒಂದು ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ಜನ ಕೇವಲ ಆಕ್ಸಿಡೆಂಟಲ್ಲಿ ಸಾಯ್ತಾರೆ. ಕರ್ನಾಟಕದಲ್ಲಿ ಒಂದು ದಿವಸಕ್ಕೆ 400ಕ್ಕೂ ಹೆಚ್ಚು ಜನ ಕೇವಲ ಕ್ಯಾನ್ಸರ್ ನಿಂದ ಸಾಯ್ತಾರೆ. ಕೊರೊನಾದಿಂದ ಸತ್ತವರೆಷ್ಟು? ಇಷ್ಟೆಲ್ಲ ಭಯಾನಕ ಕತೆಯನ್ನೆಲ್ಲ ನಮ್ಮೆದುರು ಬಿಚ್ಚಿಟ್ಟಿದ್ದಾರಲ್ಲ ಕೊರೊನಾದಿಂದ ಸತ್ತವರೆಷ್ಟು? ಕೇವಲ 2 ಪರ್ಸೆಂಟ್ ಇಲ್ಲ. ಒಂದೂವರೆ ಪರ್ಸೆಂಟೇಜ್ ಗಿಂತ ಕಡಿಮೆ ಜನ, ಯಾವ್ಯಾವುದೋ ಕಾರಣಕ್ಕೆ ಸತ್ತವರನ್ನೆಲ್ಲ ಕೊರೊನಾದಿಂದ ಸತ್ತರು ಎಂದು ಇವತ್ತು ಹಣೆಪಟ್ಟಿ ಕಟ್ತಾಇದಾರೆ. ತುಂಬಾ ತಲೆ ಕೆಡಿಸಿಕೋಬೇಕಾದಂತ ಅಗತ್ಯವೇನು ಇಲ್ಲ. ಆದರೆ ಸಾಮಾಜಿ ಸ್ವಾಸ್ಥ್ಯದ ಬಗ್ಗೆ ಸಾಮಾಜಿಕ ಸ್ವಚ್ಛತೆಯ ಬಗ್ಗೆ ನಾವು ಗಮನ ಇಟ್ಕೊಂಡು ಇದನ್ನು ನಾವು ನಿತ್ಯದ ಜೀವನದಲ್ಲಿ ಎದುರಿಸಬೇಕು. ಬೇರೆ ದಾರಿ ಇಲ್ಲ ಎಂದಿದ್ದರು.
ಹೇಗೆ ಜ್ವರ ನೆಗಡಿ ಇದನ್ನೆಲ್ಲ ಎದುರಿಸುತ್ತಿಲ್ವಾ ಹಾಗೇನೆ ಅಷ್ಟೇ ಸುಲಭದಲ್ಲಿ ನಾವಿದನ್ನೆಲ್ಲ ಎದುರಿಸ್ಬೇಕಾಗುತ್ತೆ. ಅದಕ್ಕೋಸ್ಕರವಾಗಿ ನಾವೆಲ್ಲ ಮಾನಸಿಕವಾಗಿ ತಯಾರಾಗೋಣ. ಹಾಗೆಹೀಗೆ ಅಂತಾ ಯಾರೋ ಹೇಳಿದ್ದಕ್ಕೆ, ಟಿವಿಯಲ್ಲಿ ತೋರಿಸಿದ್ದಕ್ಕೆ, ಭೂತದ ದರ್ಶನ ನೋಡಿ ಹೆದರಬೇಕಾದ ಅಗತ್ಯ ಇಲ್ಲ. ಯಾರೂ ಕೂಡ ಹೆದರಬೇಕಾದ ಅಗತ್ಯ ಇಲ್ಲ ಕೊರೊನಾಕ್ಕೆ ಎಂದು ಅವರು ಹೇಳಿದ್ದರು.
ಇದು ಹಳೆಯ ವಿಡಿಯೋ. ಇಷ್ಟೆಲ್ಲ ಪುರಾಣ ಯಾಕೆ ಈಗ ಹೇಳಬೇಕಾಯಿತೆಂದರೆ, ಕಳೆದ ಕೆಲವು ದಿನಗಳಿಂದ ಕೇಂದ್ರದ ಮತ್ತು ರಾಜ್ಯದ ಬಿಜೆಪಿ ನಾಯಕರು ಕೊರೊನಾ ಹರಡಲು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದಾರೆ. ಇದರ ಕುರಿತು ಅಪಪ್ರಚಾರವನ್ನು ಕಾಂಗ್ರೆಸ್ ಮಾಡಿತು ಎಂದಿದ್ದಾರೆ.
ಆದರೆ, ಕೊರೊನಾ ಜಾಗೃತಿ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ನಿರಂತರವಾಗಿ ಜಾಹೀರಾತು ನೀಡಿವೆ. ಡಿಜಿಟಲ್ ವೇದಿಕೆ ಮೂಲಕ ಕೂಡ ಸರ್ಕಾರಗಳು ಇದೇ ಕೆಲಸವನ್ನು ನಿರಂತವಾಗಿ ಮಾಡಿವೆ. ಆದರೆ, ವಿಪಕ್ಷ ಅಪಪ್ರಚಾರ ಮಾಡಿದೆ ಎಂದು ಹೇಳಿದರೆ ಅದನ್ನು ನಂಬುವುದು ಹೇಗೆ? ಎಂಬ ಪ್ರಶ್ನೆ ಎದುರಾಗುತ್ತದೆ.
ಕೊರೊನಾ ಕುರಿತು ಸ್ವತಃ ಬಿಜೆಪಿಯ ಸಂಸದ ಅನಂತಕುಮಾರ ಹೆಗಡೆ ಹೇಳಿರುವುದನ್ನು ಕೇಳಿದರೆ ಯಾರು ಇದರ ಕುರಿತು ಅಪಪ್ರಚಾರ ಮಾಡಿದರು ಎಂಬ ಸಂಗತಿ ಅರಿವಾಗುತ್ತದೆಯಲ್ಲವೇ? ಕೊರೊನಾ ಒಂದು ಸಾಮಾನ್ಯ ಜ್ವರ, ಅದಕ್ಕೆ ವ್ಯಾಕ್ಸಿನ್ ಅಗತ್ಯವೇ ಇಲ್ಲ ಎಂದವರು ಯಾರು? ಕೊರೊನಾ ವಿರುದ್ಧ ಅಪಪ್ರಚಾರ ಮಾಡಿದ್ದು ಯಾರು ಎಂಬುದು ಈ ವಿಡಿಯೋ ನೋಡಿದರೆ ಅರಿವಾಗುತ್ತದಲ್ಲವೇ?
ಇದೀಗ ಇದೇ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೋರೋನ ಬಗ್ಗೆ ಅಪಪ್ರಚಾರ ಮಾಡಿದವರು ಯಾರು? ಮಾಧ್ಯಮಗಳು ಯಾಕೆ ಇದರ ಬಗ್ಗೆ ಮೌನ ವಹಿಸುತ್ತಿವೆ? ಬಿಜೆಪಿಯವರು ಹೇಳುತ್ತಾರೆ ಕಾಂಗ್ರೆಸ್ ಅಪ ಪ್ರಚಾರದಿಂದ ಜನರು ವ್ಯಾಕ್ಸಿನೇಷನ್ ತಗೋತಿಲ್ಲ ಎಂದು. ಆದರೆ ನಿಜವಾಗಿಯೂ ಅಪಪ್ರಚಾರ ಮಾಡಿದವರು ಯಾರು? ಕೊರೋನ ಎಂಬ ದೊಡ್ಡ ಭೂತವನ್ನು ಸೃಷ್ಟಿ ಮಾಡಿ ನಮ್ಮ ಮುಂದೆ ಬಿಟ್ಟಿದ್ದಾರೆ , ಇದಕ್ಕೆ ವ್ಯಾಕ್ಸಿನೇಷನ್ ಅವಶ್ಯಕತೆ ಇಲ್ಲ ಇದು ಕೇವಲ ಫಾರ್ಮಸಿ ಕಂಪೆನಿಗಳ ಲಾಬಿ ಇವರು ಹಣಮಾಡುವ ಉದ್ದೇಶದಿಂದ ವ್ಯಾಕ್ಸಿನೇಷನ್ ಎಂಬ ಭೂತವನ್ನು ನಮ್ಮ ಮುಂದೆ ಮುಂದಿಟಿದ್ದಾರೆ ಎಂದು ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡ ಸಂಸದರು ಮಾಜಿ ಕೇಂದ್ರ ಸಚಿವರು ಹೇಳಿದ್ದರು ಎಂದು ಚರ್ಚೆ ನಡೆದಿದ್ದು, ಮೇಲಿನ ವಿಡಿಯೋವನ್ನು ಜಾಲತಾಣಿಗರು ಹಂಚಿಕೊಂಡಿದ್ದಾರೆ.
ಒಂದರ್ಥದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಾಡಬೇಕಾದ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಸತ್ಯದ ಪರ ನಿಂತವರು, ಸಾಮಾಜಿಕ ಹೋರಾಟಗಾರರು ಮಾಡುತ್ತಿದ್ದಾರೆ.



