ಚಿತ್ರದುರ್ಗ: ಚಿತ್ರದುರ್ಗ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ, SDPI ಜಿಲ್ಲಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಭೀಮಾ ಜ್ಯೋತಿ ಯಾತ್ರೆ 87 ಹಳ್ಳಿಗಳ ಜನಜಾಗೃತಿ ಜಾಥಾವು 70 ನೇ ದಿನ ಇಂದು ದಿನಾಂಕ 4-2-2023 ರಂದು ಶನಿವಾರ ಸಂಜೆ 5 ಗಂಟೆಗೆ ಧಮ್ಮ ಕೇಂದ್ರದ ಬಳಿಯಿರುವ ಅಲೆಮಾರಿಗಳ ಕಾಲೋನಿಗೆ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಭೀಮಾ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದ ಧಮ್ಮ ಕೇಂದ್ರದ ನಿರ್ದೇಶಕ ಹಾಗೂ ಅಲೆಮಾರಿಗಳ ಪರ ಹೋರಾಟಗಾರರು ಆದ ವಿಶ್ವ ಸಾಗರ ಆರ್, ಭೀಮಾ ಜ್ಯೋತಿ ಯಾತ್ರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಅಲೆಮಾರಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜ್ಞಾನ ಪ್ರಸಾರ ಮಾಡುತ್ತಿರುವುದು ಪ್ರಶಂಸೆಗೆ ಒಳಗಾಗಿದೆ ಎಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು, ಭಾರತದ ಸಂವಿಧಾನ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಾ ಬಹುಮುಖ್ಯವಾಗಿದೆ ಎಂದರು.
ಭೀಮಾ ಜ್ಯೋತಿ ಯಾತ್ರೆಯ ನೇತೃತ್ವ ವಹಿಸಿರುವ ಬಾಳೇಕಾಯಿ ಶ್ರೀನಿವಾಸ ಮಾತನಾಡಿ, ಕಳೆದ 2022 ನವೆಂಬರ್ 26 ರಿಂದ ಆರಂಭಗೊಂಡಿರುವ ಜ್ಯೋತಿ ಯಾತ್ರೆ ಇಲ್ಲಿಗೆ 70 ದಿನಗಳನ್ನು ಪೂರೃೆಸಿದೆ ಯಾತ್ರೆ ಯಶಸ್ವಿಗೆ ದಲಿತ ಮುಖಂಡರ ಶ್ರಮ ಅತ್ಯದ್ಭುತವಾದದು ಎಂದರು.
ಅಲೆಮಾರಿ ಕಾಲೋನಿಯಲ್ಲಿ ನಡೆದ ಭೀಮಾ ಜ್ಯೋತಿ ಯಾತ್ರೆಯಲ್ಲಿ ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಹಾಲಿಂಗಪ್ಪ ಕುಂಚಿಗನಾಳ್, ಕೆ.ರಾಜಣ್ಣ,
ಉಮೇಶ್, ಏಕಾಂತಪ್ಪ, ಮಂಜುನಾಥ್ ಮುಂತಾದ ಹಲವು ಮುಖಂಡರು ಹಾಜರಿದ್ದರು.



