ಬೆಂಗಳೂರು: ಮುನುಷ್ಯ ತನ್ನ ಅಂತ್ಯ ಕಂಡ ನಂತರ ಅಂತಿಮ ಸಂಸ್ಕಾರ ಮಾಡುವ ರುದ್ರಭೂಮಿ ಸುವ್ಯವಸ್ಥೆಯಿಂದ ಮತ್ತು ಸ್ವಚ್ಛತೆಯಿಂದ ಕೂಡಿರಬೇಕು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸನ್ ರೈಸ್ ಸರ್ಕಲ್ ಬಳಿ ಇರುವ ಶ್ರೀರಾಂಪುರ ರುದ್ರಭೂಮಿ ಪರಿಶೀಲನೆಯನ್ನು ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ಮಾಡಿ ಮಾತಾಡಿದ ಅವರು, ಶ್ರೀರಾಂಪುರ ರುದ್ರಭೂಮಿಯಲ್ಲಿ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ಇಲ್ಲದಿರುವುದು ಹಾಗೂ ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಹಣ ಸಂದಾಯ ಮಾಡಬೇಕಾದ ಪರಿಸ್ಥಿತಿ ಇತ್ತು ಎಂದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಸ್ಲಂಗಳು ಇವೆ. ಆರ್ಥಿಕವಾಗಿ ಕಡುಬಡವರು ವಾಸವಾಗಿದ್ದಾರೆ. ಅದರಿಂದ ಅಂತ್ಯಸಂಸ್ಕಾರಕ್ಕೆ ಕಡಿಮೆ ವೆಚ್ಚ ನಿಗದಿಪಡಿಸಲಾಗಿದೆ ಎಂದರು.
ಶ್ರೀರಾಂಪುರ ರುದ್ರಭೂಮಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ಪರಿಸರ ಸ್ವಚ್ಛತೆ ಹಾಗೂ ತಡೆಗೋಡೆ, ಪೂಜಾ ಸ್ಥಳ ನವೀಕರಣ ಮಾಡಿ ಶ್ರೀರಾಂಪುರ ರುದ್ರಭೂಮಿ ಚಿರಶಾಂತಿಧಾಮವಾಗಿ ಮಾಡಲಾಗುವುದು ಎಂದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅವಶ್ಯಕತೆ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲು ಯೋಜನೆ ರೂಪಿಸಿ ಕಾರ್ಯಗತ ಮಾಡಲಾಗುತ್ತಿದೆ. ಜನರ ಆಶಯದಂತೆ ನಮ್ಮ ನಡೆ. ಇಂದು ನನ್ನ ಉದ್ದೇಶ ಎಂದರು.




