ಬಿಜೆಪಿಯ ಅಧಿಕಾರ ದಾಹ ಈಡೇರಲಿಲ್ಲ: ಎಸ್.ಆರ್.ಪಾಟಿಲ್

5 years ago

ಬೆಂಗಳೂರು: ಮಹಿಳಾ ಮುಖ್ಯಮಂತ್ರಿಯೊಬ್ಬರನ್ನು ಸೋಲಿಸಬೇಕು, ಹಾಗೆಯೇ, ತಮ್ಮ ಸಾಮ್ರಾಜ್ಯ ವಿಸ್ತರಿಸಬೇಕೆಂಬ ಬಿಜೆಪಿಯ ಅಧಿಕಾರದ ದಾಹ ಈಡೇರಲಿಲ್ಲ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಕನಸು ಭಗ್ನಗೊಂಡಿದೆ. ಮಮತಾ ಅವರು ಒಬ್ಬಂಟಿಯಾಗಿ ಹೋರಾಟ ನಡೆಸಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

4 ವಿಧಾನಸಭೆ, 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶ ಕೊರೊನಾದಂತಹ ಮಹಾಮಾರಿಯಿಂದ ನಲುಗುತ್ತಿದ್ದರೂ ಅದನ್ನು ಕೂಡ ಲೆಕ್ಕಿಸದೇ, ಪಶ್ಚಿಮ ಬಂಗಾಲದಲ್ಲಿ 40ಕ್ಕೂ ಹೆಚ್ಚು ಸಮಾವೇಶಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಿದ್ದರು. ನಿರಂತರವಾಗಿ ಜನರು ಸಾಯುತ್ತಿದ್ದರೂ ಅದನ್ನು ಕಡೆಗಣಿಸಿ ಕೇವಲ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಎಂದಿದ್ದಾರೆ.

ಆದ್ರೆ ಇವರ ಅಧಿಕಾರ ದಾಹಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಆದ್ರೆ, ನಮ್ಮ ಪಕ್ಷ ಕಾಂಗ್ರೆಸ್ ಸಮಾವೇಶಗಳನ್ನು ನಡೆಸುವುದಿಲ್ಲ ಎಂದು ಘೋಷಿಸಿ ಅದರಂತೆಯೇ ನಡೆದುಕೊಂಡಿತ್ತು. ಅಧಿಕಾರ ಬಲ, ಹಣ ಬಲ, ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ, ತೋಳ್ಬಲವನ್ನು ತೋರಿಸಿದ್ದರೂ ಸಹ ಮತದಾರ ಮಾತ್ರ ಮಮತಾ ಅವರ ಕೈಬಿಡಲಿಲ್ಲ ಎಂದಿದ್ದಾರೆ.

ಅವರನ್ನು ಗೆಲ್ಲಿಸಿ ಮತ್ತೆ ಅಧಿಕಾರದ ಗದ್ದುಗೆ ಏರುವಂತೆ ಮಾಡಿದ್ದಾರೆ. ಮತದಾರ ಪ್ರಭುವಿಗೆ ಧನ್ಯವಾದಗಳು. ಹಾಗೆಯೇ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳಾ ಎಲ್ ಡಿ ಎಫ್ ಪಕ್ಷಗಳು ಗೆದ್ದಿವೆ. ಇವರನ್ನು ಗೆಲ್ಲಿಸಿದ ಮತದಾರ ಪ್ರಭುವಿಗೆ ಶುಭ ಹಾರೈಕೆಗಳು ಎಂದಿದ್ದಾರೆ.

ಜೊತೆಗೆ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ @MamataOfficial ಅವರಿಗೆ ಮನಃಪೂರ್ವಕ ಅಭಿನಂದನೆಗಳು. @BJP4India ಕೋಮುವಾದಿ ರಾಜಕಾರಣದ ವಿರುದ್ಧ ಸೆಡ್ಡು ಹೊಡೆದು ದಿಗ್ವಿಜಯ ಸಾಧಿಸಿದ್ದು ಅಭೂತಪೂರ್ವ ಸಾಧನೆ. ಸತತ 3ನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗುತ್ತಿರುವ ಮಮತಾ ಬ್ಯಾನರ್ಜಿ ಅವರಿಗೆ ಒಳಿತಾಗಲಿ ಎಂದು ಶುಭಕೋರಿದ್ದಾರೆ.

ಇನ್ನು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ & ಡಿಎಂಕೆ ಮೈತ್ರಿಕೂಟ ಅದ್ವಿತೀಯ ಜಯ ಸಾಧಿಸಿದೆ. @INCTamilNadu ಘಟಕದ ಅಧ್ಯಕ್ಷ @KS_Alagiri ಮತ್ತು @arivalayam ಪಕ್ಷದ ಅಧ್ಯಕ್ಷ @mkstalin ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. 10 ವರ್ಷಗಳ @AIADMKOfficial  ದುರಾಡಳಿತಕ್ಕೆ ತಮಿಳುನಾಡಿನ ಜನ ಪೂರ್ಣ ವಿರಾಮ ಹಾಕಿದ್ದಾರೆ ಎಂದಿದ್ದಾರೆ.

Leave a Reply