ಜನ ಸೇವೆಯೆ ನಿತ್ಯ ಕಾಯಕ, ಅಭಿವೃದ್ಧಿ ಪರ ಚಿಂತನೆ ನನ್ನ ಗುರಿ: ಜೆ.ಹೆಚ್.ಅನಿಲ್ ಕುಮಾರ್

3 years ago

ಬೆಂಗಳೂರು: ನೊಂದವರ, ಧ್ವನಿ ಇಲ್ಲದ ಕಡು ಬಡವರ ಸೇವೆ ಮಾಡಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ನಾನು ಸರ್ಕಾರಿ ಸೇವೆಯಲ್ಲಿ ನಿಷ್ಠೆ ಶ್ರದ್ಧೆಯಿಂದ ಸೇವೆ ಮಾಡಿದೆ ಎಂದು ನಿವೃತ್ತ ಐ.ಎ.ಎಸ್.ಅಧಿಕಾರಿ, ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜೆ.ಹೆಚ್.ಅನಿಲ್ ಕುಮಾರ್ ಹೇಳಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜನ ಸಂಪರ್ಕ ಕಚೇರಿಯ ಮತ್ತು ಗೃಹಪ್ರವೇಶ  ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಕೊರಟಗೆರೆ ಕ್ಷೇತ್ರದ ಜನ ತಾವು ರಾಜಕೀಯ ಪ್ರವೇಶ ಮಾಡಬೇಕು, ನಮ್ಮ ಕ್ಷೇತ್ರ ಅಭಿವೃದ್ಧೊಯನ್ನು ತಾವು ಶಾಸಕರಾಗಿ ಮಾಡಬೇಕು ಎಂದು ಒತ್ತಾಯ ಪಡಿಸಿದರು ಎಂದರು.

ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ದಿಯತ್ತ ಸಾಗುತ್ತಿದೆ. ರಾಜ್ಯ ಬಿ.ಜೆ.ಪಿ. ಸರ್ಕಾರ ಜನಪರ ಆಡಳಿತ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರ ಮಾದರಿ ವಿಧಾನಸಭಾ ಕ್ಷೇತ್ರವಾಗಿ ಮಾಡಬೇಕು ಎಂಬ ಆಶಯ ನನ್ನದು. ಕೊರಟಗೆರೆಯ ಬಿ.ಜೆ.ಪಿ. ಮುಖಂಡರು, ಕಾರ್ಯಕರ್ತರು, ಮತದಾರರು ನಾನು ಬಿ.ಜೆ.ಪಿ.ಯಿಂದ ಅಭ್ಯರ್ಥಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಅವರ ಪ್ರೀತಿ, ವಿಶ್ವಾಸಕ್ಕೆ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಸೆ ಹೊಂದಿದ್ದೇನೆ ಎಂದರು.

 

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಕುಮಾರ್, ದಲಿತ ಹೋರಾಟಗಾರ ವೆಂಕಟೇಶ್ ಮೂರ್ತಿ, ವೆಂಕಟಚಲಯ್ಯ, ಬಗರ್ ಹುಕುಂ ಸಮಿತಿಯ ಹನುಂತರಾಜು, ಬಾಳೆಹೊನ್ನೂರು ಶಾಖಾ ಮಠದ ವೀರಭದ್ರಾಚಾರ್ಯ ಸ್ವಾಮೀಜಿ, ಕೇದಾರಮಠದ ಬಸವ ಸ್ವಾಮೀಜಿ, ಷಡಕ್ಷರಿ ಮುನಿಗಳು, ಕುಂಚಿಟಿಗ ಮಠದ ಹನುಮಂತ ಸ್ವಾಮೀಜಿ  ಲೋಕಸಭಾ ಸದಸ್ಯ ಬಸವರಾಜ್ ಮೊದಲಾದವರು ಹಾಜರಿದ್ದರು.

Leave a Reply