ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪದಗ್ರಹಣ ಮಾಡಿದ ಕಲ್ಪನಾ ಜೋಷಿ

4 years ago

ಬೆಳಗಾವಿ: ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕಲ್ಪನಾ ಜೋಶಿಯವರು ಅಧಿಕಾರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಭಾಗವಹಿಸಿದರು.

ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಘಟಕಗಳ ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ತಯಾರಿಯ ಸಭೆಯನ್ನು ಕೂಡ ಇದೇ ವೇಳೆ ನಡೆಸಲಾಯಿತು.

ಭಾರತದ ಸಮಗ್ರತೆ ಮತ್ತು ಐಕ್ಯತೆ ಹಾಗೂ ನಮ್ಮ‌ ಮುಂದಿನ ಪೀಳಿಗೆಗಳ ಭವಿಷ್ಯಕ್ಕಾಗಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಐತಿಹಾಸಿಕ ಭಾರತ ಐಕ್ಯತಾ ಪಾದಯಾತ್ರೆ (ಭಾರತ ಜೋಡೊ) ನಡೆಯುತ್ತಿದೆ. ಈ ಪಾದಯಾತ್ರೆಯಲ್ಲಿ ನಾವೆಲ್ಲ ಜೊತೆಯಾಗೋಣ. ದೇಶಕ್ಕಾಗಿ ಹೆಜ್ಜೆ ಹಾಕೋಣ.ಈ ಪಾದಯಾತ್ರೆ ಯಶಸ್ವಿ‌ ಮಾಡೋಣ ಎಂದು ಸತೀಶ್ ಜಾರಕಿಹೊಳಿ ಇದೇ ವೇಳೆ ಕಾರ್ಯಕರ್ತರಿಗೆ ಕರೆನೀಡಿದರು‌.

Leave a Reply