ಕೆ.ಜಿ.ಎಫ್ ಬಾಬುರವರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಿ: ಬಿ.ಆರ್.ಪ್ರಸಾದ್

4 years ago

ಬೆಂಗಳೂರು: ಇತ್ತೀಚೆಗೆ ಕಾಂಗ್ರೆಸ್ ಮುಖಂಡ ನಾನು ಎಂದು ಹೇಳಿಕೊಂಡ ಗುಜರಿ ಬಾಬು, ಭೂಕಬಳಿಕೆದಾರ, ಕೆ.ಜಿ.ಎಫ್ ಬಾಬುರವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ನಾಯಕ ಆರ್.ವಿ.ದೇವರಾಜ್ ಅವರ ಬಗ್ಗೆ ಸತ್ಯಕ್ಕೆ ದೂರವಾದ ಮತ್ತು ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆ ಒಡೆಯಲು ಪ್ರಯತ್ನ ಪಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ಆರ್.ವಿ.ದೇವರಾಜ್ ಬೆಂಬಲಿಗ ಬಿ.ಆರ್. ಪ್ರಸಾದ್ ಹೇಳಿದರು.

ಬಡವರ ಬಂಧು, ದೀನದಲಿತರ ಆಶಾಕಿರಣ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು ಯುವ ಕಾಂಗ್ರೆಸ್ ನಿಂದ ಸತತ ಹೋರಾಟ, ಜನಪರ ಸೇವೆ ಮಾಡುತ್ತಾ ಬಂದಿದ್ದಾರೆ. ಆರ್.ವಿ.ದೇವರಾಜ್ ಅವರ ಬಡವರ ಸೇವೆ ನೋಡಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಬಂಗಾರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು.

ಸತತ ಹೋರಾಟ, ಬಡವರ ಮತ್ತು ನೊಂದವರ ಬಾಳಿಗೆ ಆಶಾಕಿರಣರಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಅವಿರತವಾಗಿ ಶ್ರಮಿಸುತ್ತಿರುವ ಆರ್.ವಿ.ದೇವರಾಜ್ ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮಗನಂತೆ ಆಗಿದ್ದಾರೆ. ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ ಯಾರು ಬಳಲಬಾರದು ಎಂದು ದಿನಸಿ ಕಿಟ್, ಆಹಾರ ಪ್ಯಾಕೇಟ್ ಮತ್ತು ಸ್ಯಾನಿಟೈಸರ್, ಮಾಸ್ಕ್ ಗಳನ್ನು ಸಾವಿರಾರು ಕುಟುಂಬಗಳಿಗೆ ಆರ್.ವಿ.ದೇವರಾಜ್ ರವರು ವಿತರಿಸಿದರು ಎಂದರು.

ಕೆ.ಜಿ.ಎಫ್ ಬಾಬು ಅಲಿಯಾಸ್ ಗುಜರಿ ಬಾಬುರವರಿಗೆ ಈಗಾಗಲೇ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. ಕೆ.ಜಿ.ಎಫ್ ಬಾಬುರವರನ್ನು ಕೊಡಲೇ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರಿಗೆ ಚಿಕ್ಕಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮನವಿ ಮಾಡಲಾಗುವುದು ಎಂದರು.

Leave a Reply