ಬೆಂಗಳೂರು: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತಿ ವಿಶಿಷ್ಟವಾದ ಪ್ರಯೋಗವಾಗಿ ಗಮನ ಸೆಳೆಯಬಹುದಾದ ಕೃತಿ ಪುನೀತ್ ರಾಜಕುಮಾರ್ ಕುರಿತ ಭಾವಗೀತೆಗಳ ಸಂಕಲನ’ ಶಿವ ಮೆಚ್ಚಿದ ಬೆಟ್ಟದ ಹೂ’ ಎಂದು ಸಾಹಿತಿ ಕವಿರಾಜ್ ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವಪ್ಪ, ರಾಜ್ಯದ 155 ಸಾಹಿತಿಗಳ ಭಾವಗೀತೆಗಳಿಂದ ಕೂಡಿರುವ ಶಿವ ಮೆಚ್ಚಿದ ಬೆಟ್ಟದ ಹೂ ಕೃತಿಯನ್ನು ಸಂಪಾದಿಸಿರುವ ರವಿರಾಜ್ ಸಾಗರ್ ಅವರ ಈ ಪ್ರಯತ್ನ ಅತಿ ವಿಶಿಷ್ಟವಾದದ್ದು ಎಂದರು.
ಪ್ರಾಸ್ತಾವಿಕವಾಗಿ ಮಾತಾಡಿದ ರವಿರಾಜ್ ಸಾಗರ್, ಕರ್ನಾಟಕ ಹಸೆ ಚಿತ್ತಾರ ಪರಿಷತ್ತು, ಅಪ್ಪು ಅಭಿಮಾನಿ ಸಾಹಿತಿಗಳ ಬಳಗ, ವಿಜಯಲಕ್ಷ್ಮಿ ಕಂಬೈನ್ಸ್, ನೇಕಾರ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಅಪ್ಪು ಗೀತ ಗಾಯನ, ಅಪ್ಪು ಚಿತ್ರೋತ್ಸವ, ಹಸೆ ಚಿತ್ರ ಕಲಾವಿದೆ ಉಷಾ ಅವರ ಹಸೆ ಚಿತ್ತಾರ ಪ್ರದರ್ಶನ, ಅಭಿಮಾನಿ ಸಾಹಿತಿಗಳಿಂದ ನೇತ್ರದಾನ ಶಿಬಿರಗಳನ್ನು ಸಹ ಇದೇ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು. ಅಪ್ಪು ಅಭಿಮಾನದ ಪ್ರೀತಿಯಿಂದ ಇವುಗಳನ್ನು ಏರ್ಪಡಿಸಿದ್ದೇವೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಸಾಹಿತಿಗಳು ಆಗಮಿಸಿದ್ದು ಅಪ್ಪು ಕುರಿತ ಅಭಿಮಾನವನ್ನು ತಮ್ಮ ನುಡಿಗೀತೆಗಳಲ್ಲಿ ವ್ಯಕ್ತಪಡಿಸಿದ ಈ ಕಾರ್ಯಕ್ರಮ ಪುನೀತ್ ರಾಜಕುಮಾರ್ ಕುರಿತು ಸಾಹಿತ್ಯ ವಲಯ ನೀಡಿದ ಬಹು ವಿಶಿಶ್ಟ ಸ್ಪಂದನೆಯಾಗಿದೆ ಎಂದು ಚಿತ್ರ ಸಾಹಿತಿ ಹೃದಯ ಶಿವ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಕಾಶಕ ರಾಮಕೃಷ್ಣ, ಸಂಪಾದಕ ಮಹೇಶ್, ಹರೀಶ್, ಚಲನಚಿತ್ರ ನಾಯಕ ನಟ ವೀರನ್ ಕೇಶವ್ ಮೊದಲಾದವರು ಹಾಜರಿದ್ದರು.




