ಖಾಕಿ ಸಮವಸ್ತ್ರದಲ್ಲಿ ಗೂಂಡಾಗಿರಿ
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ಇಂಡಿಯಾ’ಮೈತ್ರಿಕೂಟದ ಸಂಸದರ ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸರ ಸಮವಸ್ತ್ರದಲ್ಲಿದ್ದ ಗೂಂಡಾಗಳ ಮೂಲಕ ಹಲ್ಲೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
- ಹನಿ ಟ್ರ್ಯಾಪ್ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ: ಆರ್. ಅಶೋಕ್
- ಬಿಜೆಪಿ, ಮೋದಿ ಮತ್ತು ಸಂಘ ಪರಿವಾರದಿಂದ ದೂರ ಸರಿಯುತ್ತಿರುವ GenZ
- ಭಾರತಕ್ಕೆ ಈಗ ಎಂದಿಗಿಂತಲೂ ಮೋದಿಯ ಅಗತ್ಯವಿದೆ ಎಂದ ತೇಜಸ್ವಿ ಸೂರ್ಯ
- ಹಾಫ್ ಪ್ರೈಸ್ ಸ್ಟೋರ್ ಮೂಲಕ ಗ್ರಾಹಕರಿಗೆ ಭರ್ಜರಿ 50% ರಿಯಾಯಿತಿ ಸಂಭ್ರಮ!
- ಮತ ಕಳ್ಳತನದ ವಿರುದ್ಧ ಮತ ಉಳಿಸಿ ದೇಶ ಉಳಿಸಿ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ತುರ್ತು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಬಿಜೆಪಿ ಏಜೆಂಟ್ನಂತೆ ವರ್ತಿಸುತ್ತಿದ್ದು, ಮತದಾರರ ಪಟ್ಟಿ ಅಕ್ರಮ ಹಾಗೂ ಸಂವಿಧಾನಿಕ ಹಕ್ಕುಗಳ ದಮನದ ವಿರುದ್ಧ ರಾಜ್ಯಾದ್ಯಂತ ಬೃಹತ್ ಜನಜಾಗೃತಿ ಆಂದೋಲನ ರೂಪಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಖಾಕಿ ಸಮವಸ್ತ್ರದಲ್ಲಿ ಗೂಂಡಾಗಳಿಂದ ಹಲ್ಲೆ: ಆಕ್ರೋಶ
ದೆಹಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. “ನಮಗೆ ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ, ಗೂಂಡಾಗಳಿಗೆ ಪೊಲೀಸ್ ಸಮವಸ್ತ್ರ ತೊಡಿಸಿ ಪ್ರತಿಭಟನಾಕಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಕೇಂದ್ರ ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳ ಲೋಪಗಳನ್ನು ಪ್ರಶ್ನಿಸುವ ಸರ್ವ ಹಕ್ಕಿದೆ. ದೇಶದ ಧ್ವನಿಯಾಗಿ ನಿಂತಿರುವ ರಾಹುಲ್ ಗಾಂಧಿ ಮೇಲಿನ ದಾಳಿಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ,” ಎಂದು ಕಿಡಿಕಾರಿದರು.
ಜೀವಂತ ಮಹಿಳೆಯರಿಗೆ ‘ಮರಣ ಪ್ರಮಾಣಪತ್ರ’ ಸಲ್ಲಿಕೆ!: ರಾಜ್ಯದಲ್ಲಿ ವ್ಯಾಪಕ ಮತ ಕಳ್ಳತನ ನಡೆಯುತ್ತಿದೆ ಎಂದು ದಾಖಲೆ ಸಮೇತ ವಿವರಿಸಿದ ಹರಿಪ್ರಸಾದ್:
ವಿಜಯಪುರ ಅಕ್ರಮ: ಜೀವಂತವಾಗಿರುವ ಮಹಿಳೆಯರ ಹೆಸರನ್ನು ಮರಣ ಪಟ್ಟಿಗೆ ಸೇರಿಸಿ, ಅವರಿಗೆ ನಕಲಿ ಮರಣ ಪ್ರಮಾಣಪತ್ರಗಳನ್ನೂ ಸಲ್ಲಿಕೆ ಮಾಡಲಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಸಂಪೂರ್ಣವಾಗಿ ಬಿಜೆಪಿಯ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದರು.
ಮಲ್ಲೇಶ್ವರಂ ಕ್ಷೇತ್ರ: ಮಲ್ಲೇಶ್ವರಂ ಕ್ಷೇತ್ರದಲ್ಲಿ 1,211 ಸಂಶಯಾಸ್ಪದ ಮತಗಳನ್ನು ಗುರುತಿಸಲಾಗಿದ್ದು, ವಿವಿಧ ಮತಗಟ್ಟೆಗಳಲ್ಲಿ ಒಂದೇ ದಿನ ಬರೋಬ್ಬರಿ 1,108 ಅರ್ಜಿಗಳನ್ನು ಅಕ್ರಮವಾಗಿ ಸಲ್ಲಿಸಲಾಗಿದೆ ಎಂದರು.
ಅ.10ರಿಂದ ‘ಮತ ಉಳಿಸಿ ದೇಶ ಉಳಿಸಿ’ ಪಾದಯಾತ್ರೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ರಾಜ್ಯದ ಪ್ರತಿಯೊಂದು ಬ್ಲಾಕ್ ಮಟ್ಟದಲ್ಲೂ ಬೃಹತ್ ಹೋರಾಟಕ್ಕೆ ಕಾಂಗ್ರೆಸ್ ಕರೆ ನೀಡಿದೆ:
ಅಕ್ಟೋಬರ್ 10ರಿಂದ 20: ಪ್ರತಿ ಬ್ಲಾಕ್ನಲ್ಲಿ ‘ಮತ ಉಳಿಸಿ ದೇಶ ಉಳಿಸಿ’ ಹೆಸರಿನಲ್ಲಿ 5 ಕಿ.ಮೀ. ಪಾದಯಾತ್ರೆ. ಗಾಂಧಿ ಅಥವಾ ಅಂಬೇಡ್ಕರ್ ಪ್ರತಿಮೆಗಳಿಂದ ಆರಂಭವಾಗಿ ಡಿಸಿ ಕಚೇರಿಯವರೆಗೆ ಮೆರವಣಿಗೆ ಸಾಗಲಿದೆ. ಡಿಸಿ ಭೇಟಿ ಬಳಿಕ ರಾಷ್ಟ್ರಗೀತೆ ಹಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹನ ಮಾಡಲಾಗುವುದು ಎಂದರು.
ದಸರಾ ಸಂದರ್ಭದಲ್ಲಿ ಜಾಗೃತಿ: ಮತ ಕಳ್ಳತನದಿಂದ ಪ್ರಜಾಪ್ರಭುತ್ವಕ್ಕೆ ಒದಗಿರುವ ಕಂಟಕದ ಬಗ್ಗೆ ಸಾರ್ವಜನಿಕರಲ್ಲಿ ದಸರಾ ಹಬ್ಬದ ಸಮಯದಲ್ಲಿ ವ್ಯಾಪಕ ಅರಿವು ಮೂಡಿಸಲಾಗುವುದು ಎಂದರು.
ಅಕ್ಟೋಬರ್ 25ರಿಂದ ನವೆಂಬರ್ 25: ತಿಂಗಳ ಪರ್ಯಂತ ಸಾರ್ವಜನಿಕ ಸಭೆ, ಮಾಧ್ಯಮಗೋಷ್ಠಿ. ಬ್ಲಾಕ್ ಅಧ್ಯಕ್ಷರು ಮತ್ತು ಬಿಎಲ್ಎ-2 (BLA-2) ಕಾರ್ಯಕರ್ತರಿಗೆ ಅಕ್ರಮ ತಡೆಗಟ್ಟಲು ವಿಶೇಷ ಕಾರ್ಯಾಗಾರ ನಡೆಸಲಾಗುವುದು ಎಂದರು.
ಫಾರಂ 7 ಮತ್ತು ಎಎಸ್ಡಿಡಿಒ (ASDDO) ಪರಿಶೀಲನೆ: ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ಸಂತ್ರಸ್ತರನ್ನು ಒಗ್ಗೂಡಿಸಿ ಸಭೆ ನಡೆಸುವುದು ಹಾಗೂ ಪಂಚಾಯಿತಿ ಮಟ್ಟದಲ್ಲಿ ಮನೆ-ಮನೆ ಸಮೀಕ್ಷೆ ಮಾಡಲಾಗುತ್ತದೆ ಎಂದರು.
ನವೆಂಬರ್ 1ಕ್ಕೆ ದೆಹಲಿಯಲ್ಲಿ ರಣಕಹಳೆ: ನವೆಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. “ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಮತ್ತು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಸೇರಿದಂತೆ ಅಕ್ರಮಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ತನಕ ಈ ನ್ಯಾಯಯುತ ಹೋರಾಟ ನಿಲ್ಲುವುದಿಲ್ಲ, ಎಂದು ಹರಿಪ್ರಸಾದ್ ಗುಡುಗಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಜರಿದ್ದರು.




