ಸರ್ಕಾರದ ತಪ್ಪು ವಾರ್ಡ್ ವಿಂಗಡಣೆ ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಕಾರಣ: ಎನ್.ನಾಗರಾಜು

4 years ago

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಬಿ.ಬಿ.ಎಂ.ಪಿ. ಚುನಾವಣೆ ವಿಳಂಬವಾಗಲು ಬಿ.ಜೆ.ಪಿ. ಸರ್ಕಾರವೇ ಹೊಣೆ ಎಂದು ಬಿಬಿಎಂಪಿ ವಿಪಕ್ಷ ನಾಯಕ ಎನ್.ನಾಗರಾಜು ಆರೋಪಿಸಿದರು.

ಸರ್ಕಾರದ ವಾರ್ಡ್ ವಿಂಗಡಣೆ ವಿರುದ್ಧ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿರುವ ಅವರು, ವಾರ್ಡ್ ವಿಂಗಡಣೆಯಲ್ಲಿ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕ್ಷೇತ್ರದಲ್ಲಿ 39 ಸಾವಿರ ಮತದಾರರಿಗೆ ಒಂದು ವಾರ್ಡ್ ಮಾಡಿದ್ದಾರೆ. ಬಿ.ಜೆ.ಪಿ. ಶಾಸಕರು ಇರುವ ಕ್ಷೇತ್ರದಲ್ಲಿ 30 ಸಾವಿರ ಮತದಾರರಿರುವಂತೆ ವಾರ್ಡ್ ರೂಪಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ದರು ವಾರ್ಡ್ ಸಂಖ್ಯೆ ಕಡಿಮೆ ಮಾಡಿದ್ದಾರೆ. ಆಯುಕ್ತರು, ಜಿಲ್ಲಾಧಿಕಾರಿಗಳು ವಾರ್ಡ್ ವಿಂಗಡಣೆ ಮಾಡಬೇಕು. ಆದರೆ ಬಿ.ಜೆ.ಪಿ. ಶಾಸಕರ ಆದೇಶದ ಮೇರೆಗೆ ವಾರ್ಡ್ ವಿಂಗಡಣೆ ಮಾಡಿದ್ದಾರೆ ಎಂದರು.

ನ್ಯಾಯಯುತವಲ್ಲದ, ಜನ ವಿರೋಧಿಯಾದ, ಯಾವುದೇ ಮಾನದಂಡವಿಲ್ಲದ, ಬಿ.ಜೆ.ಪಿ. ಶಾಸಕರ ಹಿತಾಸಕ್ತಿಗೆ ಅನುಗುಣವಾಗಿ ವಾರ್ಡ್ ವಿಂಗಡಣೆ ಮಾಡಿದ್ದಾರೆ. ನಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನ್ಯಾಯಾಲಯದ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದರು.

Leave a Reply