ಸರಸ್ವತಿ ಮಕ್ಕಳ ಸೇವಾಶ್ರಮಕ್ಕೆ ಆಹಾರ ಸಾಮಾಗ್ರಿಗಳ ವಿತರಣೆ

4 years ago

ಬೆಂಗಳೂರು: ವಿಜಯನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಸರಸ್ಪತಿ ಮಕ್ಕಳ ಸೇವಾಶ್ರಮಕ್ಕೆ ದಿನಸಿ ಸಾಮಾನುಗಳನ್ನು ವಿತರಿಸಲಾಯಿತು.

ವಿಜಯನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಿ.ಟಿ.ಕೋದಂಡರಾಮು, ಸಂಸ್ಥೆಯ ಪದಾಧಿಕಾರಿಗಳಾದ ಸೂರನಹಳ್ಳಿ ಜಯರಾಮೇಗೌಡ, ಆರ್.ಜಯರಾಮ್ ರವರು ಸರಸ್ವತಿ ಮಕ್ಕಳ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಕೋದಂಡರಾಮು ಮಾತನಾಡಿ, ವಿಜಯನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಸತತವಾಗಿ ಮಾಡಿಕೊಂಡು ಸಮಾಜದ ಒಡನಾಡಿಯಾಗಿ ಕೆಲಸ ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಾಲಾ ವಿದ್ಯಾಭ್ಯಾಸಕ್ಕೆ ಉಚಿತವಾಗಿ ಪಠ್ಯಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ಪ್ರತಿ ವರ್ಷ ನೀಡಲಾಗುತ್ತಿದೆ ಎಂದರು.

ಪರಿಸರ ಜಾಗೃತಿ ಮೂಡಿಸಲು ಜಾಗೃತಿ ಅಭಿಯಾನ ಸಸಿ ನೆಡುವ ಕಾರ್ಯಕ್ರಮ ನಡೆಸಲಾಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಸರಸ್ವತಿ ಮಕ್ಕಳ ಸೇವಾಶ್ರಮಕ್ಕೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿಹಿಟ್ಟು ಮತ್ತು ಸಕ್ಕರೆ ಇನ್ನಿತರೆ ಆಹಾರ ಸಾಮಗ್ರಿಗಳನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ, ಧ್ವನಿ ಇಲ್ಲದ ಜನರ ಒಡನಾಡಿಯಾಗಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.

ಸಂಸ್ಥೆಯ ಪದಾಧಿಕಾರಿಗಳಾದ ಸಿದ್ದಲಿಂಗಪ್ಪ, ಕೃಷ್ಣಪ್ಪ, ಶ್ರೀರಂಗಯ್ಯ, ನರೇಶ್, ಶಶಿ, ಗಂಗಾಧರ್, ಎಸ್.ಕೃಷ್ಣ, ವಿಜಯಕುಮಾರ್, ನಟರಾಜ್, ಕಡಿವಾಳ್, ಜಗದೀಶ್ ಮೊದಲಾದವರು ಹಾಜರಿದ್ದರು.

Leave a Reply