ಬೆಂಗಳೂರು: ಕೃತಕ ಬುದ್ದಿಮತ್ತೆ(ಎಐ) ಯುವತಿಯ ಮೋಹಕ್ಕೆ ಬಿದ್ದು ಯುವಕನೊಬ್ಬ ಒಂದೂವರೆ ಲಕ್ಷ ರೂ. ಹಣವನ್ನು ಕಳೆದುಕೊಂಡು ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರ ಮೊರೆ ಹೋಗಿದ್ದಾನೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ನಗರದ 26 ವರ್ಷದ ಯುವಕನೊಬ್ಬ ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದು,ಆತನ ಖಾತೆಗೆ ಇಶಾನಿ ಎಂಬ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಬಳಿಕ ಮೊಬೈಲ್ ನಂಬರ್ ನಂಬರ ವಿನಿಮಯ ಮಾಡಿಕೊಂಡು ಆಗಿ ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ್ದ. ಕೆಲವು ದಿನಗಳ ಹಿಂದೆ ಯುವತಿಯ ಮೊಬೈಲಿನಿಂದ ವಿಡಿಯೋ ಕಾಲ್ ಬಂದಿದ್ದು, ಅದರಲ್ಲಿ ಯುವತಿ ಬೆತ್ತಲಾಗಿದ್ದಳು. ನಂತರ ನೀನು ಬಟ್ಟೆ ಬಿಚ್ಚು ಎಂದು ಯುವಕನ ಬಟ್ಟೆ ಬಿಚ್ಚಿಸಿದ್ದಳು. ಯುವಕ ಬೆತ್ತಲಾಗಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಗಳು ನಂತರ ಯುವಕನಿಗೆ ಆತನ ಬೆತ್ತಲೆ ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.
ಈ ಮೂಲಕ ಹಂತಹಂತವಾಗಿ 1.53 ಲಕ್ಷ ರೂ. ವಸೂಲಿ ಮಾಡಿದ್ದು, ನೊಂದ ಯುವಕ ಕೇಂದ್ರ ಸೆನ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಎಐ ಯುವತಿ ಮೂಲಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.




