ಮಳೆ ಹಾನಿಯಿಂದ ನೊಂದ ಕಲಬುರಗಿ ಜಿಲ್ಲೆಯ ರೈತರ ನೆರವಿಗೆ ನಿಂತಿದೆ ಸರ್ಕಾರ: ಪ್ರಿಯಾಂಕ್ ಖರ್ಗೆ

6 months ago

ಮಳೆ ಹಾನಿಯಿಂದ ನೊಂದ ಕಲಬುರಗಿ ಜಿಲ್ಲೆಯ ರೈತರ ನೆರವಿಗೆ ನಿಂತಿದೆ ಸರ್ಕಾರ. ಮಳೆ ಹಾನಿಗೆ ಒಳಗಾದ ಕಲಬುರಗಿ ಜಿಲ್ಲೆಯ ಜನತೆಗೆ ಸಕಾಲದಲ್ಲಿ ಸ್ಪಂದಿಸಿದ ಸರ್ಕಾರವು, ಈಗಾಗಲೇ ಜೀವ ಹಾನಿ, ಮನೆ ಹಾನಿಗೆ ಪರಿಹಾರ ತಲುಪಿಸುವಲ್ಲಿ ಮುತುವರ್ಜಿ ತೋರಿದೆ. ಅಲ್ಲದೆ ಬೆಳೆ ಹಾನಿಯ ಸಮೀಕ್ಷೆಯನ್ನೂ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಂಡಿರುವುದು ನಮ್ಮ ಸರ್ಕಾರದ ಜನಪರ ಕಾರ್ಯವೈಖರಿಯನ್ನು ನಿರೂಪಿಸುತ್ತದೆ.

ಬೆಳೆ ವಿಮೆ ಮಾಡಿಸುವ ಕುರಿತು ರೈತರಲ್ಲಿ ಜಾಗೃತಿ ಅಭಿಯಾನ ಕೈಗೊಂಡು 20 ಲಕ್ಷಕ್ಕೂ ಅಧಿಕ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವ ಮೂಲಕ ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ಈಗ ಅತಿವೃಷ್ಟಿಗೆ ಹಾನಿಗೊಳಗಾದ ತೊಗರಿ, ಹತ್ತಿ, ಸೂರ್ಯಕಾಂತಿ, ಅರಿಶಿಣದಂತಹ ಖಾರಿಫ್ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರವನ್ನು ಒದಗಿಸುವಂತೆ ವಿಮಾ ಕಂಪೆನಿಗಳಿಗೆ ಸರ್ಕಾರವು ನಿರ್ದೇಶನ ನೀಡಿದೆ.

ರೈತರು ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ವಿಮಾ ಕಂಪೆನಿಗಳು ಜಿಲ್ಲಾ ಮೇಲ್ವಿಚಾರಣ ಸಮಿತಿಯೊಂದಿಗೆ ಸಭೆ ನಡೆಸಿ, ಸಮನ್ವಯತೆಯೊಂದಿಗೆ ಕೂಡಲೇ ಮಧ್ಯಂತರ ವಿಮೆ ಪರಿಹಾರ ಒದಗಿಸುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು.

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

Leave a Reply