Pralhad Joshi ಅವರೇ, BJP Karnatakaದ ಎಲ್ಲಾ ನಾಯಕರು ಇತ್ತೀಚಿನ ದಿನಗಳಲ್ಲಿ ಯಾವ ಮನಃಸ್ಥಿತಿಯಲ್ಲಿ ನಿಯಂತ್ರಣ ಕಳೆದುಕೊಂಡು ಮಾತನಾಡುತ್ತಿದ್ದಾರೋ, ನಿಮಗೆ ತಿಳಿಯಬೇಕು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕೆ ಎಸ್ ಆರ್ ಟಿ ಸಿ ಯು ಪ್ರತಿವರ್ಷ ದಸರಾ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಕಳೆದ 20 ವರುಷಗಳಿಂದ ದರ ಏರಿಕೆಯನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ.
ಅಂದರೆ ನೀವು ಹೇಳುತ್ತಿರುವ ಮಹಿಷಾಸುರ ಟ್ಯಾಕ್ಸ್ ಅನ್ನು ತಮ್ಮ ಪಕ್ಷ ಸಹ ಬಿ.ಜೆ.ಪಿ ಅಧಿಕಾರದಲ್ಲಿದ್ದಾಗ ಜಾರಿ ಮಾಡಿದ್ದೀರಾಲ್ಲ ಅದಕ್ಕೆ ತಮ್ಮ ಉತ್ತರವೇನು? ಮಾಹಿತಿ ಕೊರತೆ ಇದ್ದರೆ ಸಮರ್ಪಕವಾದ ಮಾಹಿತಿ ಪಡೆದು ಮಾತನಾಡಿ, ತಾವು ಕೇಂದ್ರ ಸಚಿವ ಸ್ಥಾನದಲ್ಲಿದ್ದೀರಾ ಅದರ ಗೌರವವನ್ನಾದರೂ ಕಾಪಾಡಿ.
☀️ ತಾವು ಜನಗಳ ಮೇಲೆ 2017-2025 ರವರೆಗೆ ಸತತ 8 ವರುಷಗಳ ಕಾಲ GST ಹೆಸರಿನಲ್ಲಿ ಟ್ಯಾಕ್ಸ್ ಹಾಕಿ ಜನರ ರಕ್ತ ಹೀರಿದಿರಿ ಅದನ್ನು “ಬ್ರಹ್ಮರಾಕ್ಷಸ ಟ್ಯಾಕ್ಸ್” ಅಂತ ಕರೆಯಬಹುದೇ?
GST ಟ್ಯಾಕ್ಸ್ ಮೂಲಕ ಅಮಾಯಕ ಜನರಿಂದ ವರುಷಗಳ ಕಾಲ ಸುಲಿಗೆ ಮಾಡಿದ್ದು ಮರೆತು ಬಿಟ್ಟಿರಾ? ಇದಕ್ಕಾಗಿ ಕೇಂದ್ರ ಸರ್ಕಾರ, ಬಿ.ಜೆ.ಪಿ ಪಕ್ಷ ಮತ್ತು ಅದರ ನಾಯಕರು ದೇಶದ ಜನರ ಕ್ಷಮೆ ಕೋರಬಾರದೇ??
ಈಗ GST ಟ್ಯಾಕ್ಸ್ ಕಡಿಮೆ ಮಾಡಿ, ಸಂಭ್ರಮ ಆಚರಣೆ ಮಾಡುವ ಮೂಲಕ ಪ್ರಚಾರ ಪಡೆಯುವ ತಮ್ಮ ನೈತಿಕತೆಯ ಬಗ್ಗೆ ಹೇಳಲಿಕ್ಕೆ ಪದಗಳು ಸಾಲದಾಗಿದೆ.
ತಾವು ಇಲ್ಲಸಲ್ಲದ ಮಾಹಿತಿಯನ್ನು ಅಪಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ದುಸ್ಸಾಹಸಕ್ಕೆ ಇನ್ನಾದರೂ ಪೂರ್ಣವಿರಾಮ ಹಾಕುವಿರಾ?
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ




